ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಶುಕ್ರವಾರ ಒಂದೇ ದಿನ ಐದು ಪದಕಗಳು ಭಾರತಕ್ಕೆ ಲಭಿಸಿದೆ. ಐದನೇ ಪದಕ ಕಂಚು. ಈ ಪದಕ ಗೆದ್ದವವರು ಮಹಿಳೆಯರ ೬೮ ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿರುವ ದಿವ್ಯಾ ಕಾಕ್ರನ್. ಟೋಂಗಾ ದೇಶದ ಕೋಕರ್ ಲೆಮೆಲಿ ವಿರುದ್ಧ ಏಕಪಕ್ಷೀಯ ಜಯ ಸಾಧಿಸಿದ ಕಾಕ್ರನ್ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಶುಕ್ರವಾರ ನಡೆದ ಕಂಚಿನ ಪದಕ ಪಂದ್ಯದಲ್ಲಿ ಸಂಪೂರ್ಣ ಪಾರಮ್ಯ ಸಾಧಿಸಿದ ಭಾರತದ ೨೩ ವರ್ಷದ ಪ್ರತಿಭಾವಂತ ಕುಸ್ತಿಪಟು ದಿವ್ಯಾ ಕಾಕ್ರನ್ ಕೇವಲ ೨೬ ಸೆಕೆಂಡ್‌ಗಳಲ್ಲಿ ಎದುರಾಳಿ ಕುಸ್ತಿಪಟುವನ್ನು ಮಣಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ದಿವ್ಯಾ ಅವರ ಕಂಚಿನ ಪದಕದೊಂದಿಗೆ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ೨೫ಕ್ಕೆ ಏರಿಕೆಯಾಯಿತು. ೯ ಚಿನ್ನ, ತಲಾ ಎಂಟು ಬೆಳ್ಳಿ ಹಾಗೂ ಕಂಚಿನ ಪದಕಗಳು ಇದರಲ್ಲಿ ಸೇರಿಕೊಂಡಿವೆ. ಇದರ ಜತೆ ಭಾರತದ ಅಂಕಪಟ್ಟಿಯಲ್ಲಿನ ಐದನೇ ಸ್ಥಾನ ಮುಂದುವರಿಯಿತು.
ಇದಕ್ಕಿಂತ ಮೊದಲು ನಡೆದ ಕುಸ್ತಿ ಸ್ಪರ್ಧೆಗಳಲ್ಲಿ ಭಾರತ ಬಜರಂಗ್ ಪೂನಿಯಾ, ದೀಪಕ್ ಪೂನಿಯಾ ಹಾಗೂ ಸಾಕ್ಷಿ ಮಲಿಕ್ ಚಿನ್ನದ ಪದಕ ಗೆದ್ದಿದ್ದರೆ, ಅನ್ಶು ಮಲಿಕ್ ಬೆಳ್ಳಿ ತಮ್ಮದಾಗಿಸಿಕೊಂಡಿದ್ದರು.
ಇದನ್ನೂ ಓದಿ | CWG-2022 | ಪಾಕ್‌ನ ಕುಸ್ತಿ ಪಟು ಮಣಿಸಿ ಬಂಗಾರದ ಪದಕ ಗೆದ್ದ ದೀಪಕ್ ಪೂನಿಯಾ