Site icon Vistara News

Buchi Babu Tournament: ಬುಚ್ಚಿಬಾಬು ಕ್ರಿಕೆಟ್‌ ಟೂರ್ನಿ ಆಡಲಿದ್ದಾರೆ ಸೂರ್ಯಕುಮಾರ್​, ಅಯ್ಯರ್​

Buchi Babu Tournament

Buchi Babu Tournament: Shreyas Iyer To Play With Suryakumar Yadav In Buchi Babu Tournament 2024

ಬೆಂಗಳೂರು: ಇಶನ್​ ಕಿಶನ್​ ಬಳಿಕ ಇದೀಗ ಟೀಮ್​ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್​ ಯಾದವ್(Suryakumar Yadav)​ ಮತ್ತು ಶ್ರೇಯಸ್​​ ಅಯ್ಯರ್(Shreyas Iyer)​ ದೇಶೀಯ ಕ್ರಿಕೆಟ್​ ಟೂರ್ನಿಯ ಪಂದ್ಯವೊಂದನ್ನು ಆಡಲು ಮುಂದಾಗಿದ್ದಾರೆ. ಇದೇ ಗುರುವಾರದಿಂದ ಆರಂಭವಾಗಲಿರುವ “ಬುಚ್ಚಿಬಾಬು ಟ್ರೋಫಿ’ ಆಹ್ವಾನಿತ(Buchi Babu Tournament) ಪಂದ್ಯಾವಳಿಯಲ್ಲಿ ಆಡುವ ನಿರ್ಧಾರಕ್ಕೆ ಬಂದಿದ್ದಾರೆ. ಉಭಯ ಆಟಗಾರರು ಮುಂಬಯಿ ತಂಡದ ಪರ ಆಡಲಿದ್ದಾರೆ ಎಂದು ಮುಂಬೈ ಕ್ರಿಕೆಟ್​ ಅಸೋಸಿಯೇಶನ್​ ಅಧಿಕೃತ ಹೇಳಿಕೆ ನೀಡಿದೆ.

ಶ್ರೇಯಸ್‌ ಅಯ್ಯರ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಆಗಸ್ಟ್​ 27ರಂದು ನಡೆಯುವ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಎಂಸಿಎ ಜಂಟಿ ಕಾರ್ಯದರ್ಶಿ ದೀಪಕ್‌ ಪಾಟೀಲ್‌ ಹೇಳಿದ್ದಾರೆ. ದುಲೀಪ್​ ಟ್ರೋಫಿಯಲ್ಲಿಯೂ ಅಯ್ಯರ್​ ಆಡಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಬಿಸಿಸಿಐ ಹೊಸ ನಿಲುವಿಗೆ ಹೆದರಿ ಸೀನಿಯರ್​ ತಂಡದ ಆಟಗಾರರೆಲ್ಲ ದೇಶೀಯ ಟೂರ್ನಿಯಲ್ಲಿ ಆಡಲು ಸಾಲುಗಟ್ಟಿದಂತಿದೆ.

12 ತಂಡಗಳ ಪಂದ್ಯಾವಳಿ


ತಮಿಳುನಾಡಿನ 4 ಕೇಂದ್ರಗಳಲ್ಲಿ ನಡೆಯುವ ಪಂದ್ಯಾವಳಿಯಲ್ಲಿ 12 ತಂಡಗಳು ಪಾಲ್ಗೊಳ್ಳಲಿವೆ. ಇವುಗಳೆಂದರೆ ಮಧ್ಯಪ್ರದೇಶ, ದಿಲ್ಲಿ, ಹರಿಯಾಣ, ಹೈದರಾಬಾದ್‌, ಬಂಗಾಲ, ಮುಂಬಯಿ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌, ಛತ್ತೀಸ್‌ಗಢ, ಗುಜರಾತ್‌, ತಮಿಳುನಾಡು ಕ್ರಿಕೆಟ್‌ ಮಂಡಳಿ ಇಲೆವೆನ್‌ ಮತ್ತು ತಮಿಳುನಾಡು ಕ್ರಿಕೆಟ್‌ ಮಂಡಳಿ ಅಧ್ಯಕ್ಷರ ಬಳಗ.

ಇದನ್ನೂ ಓದಿ Duleep Trophy 2024: ದುಲೀಪ್ ಟ್ರೋಫಿ ವೇಳಾಪಟ್ಟಿ ಪ್ರಕಟ; ಕೊಹ್ಲಿ, ರೋಹಿತ್​ ಭಾಗವಹಿಸುವ ನಿರೀಕ್ಷೆ

ಭಾರತದ ಮಾಜಿ ಕ್ರಿಕೆಟಿಗ ಮೊತವರಪು ವೆಂಕಟ ಮಹಿಪತಿ ನಾಯ್ಡು ಅವರ ಸ್ಮರಣಾರ್ಥವಾಗಿ ನಡೆಸುವ ಕ್ರಿಕೆಟ್​ ಟೂರ್ನಿ ಇದಾಗಿದೆ. ಭಾರತ ಪರ ಆಡುವ ವೇಳೆ ಇವರು ಬುಚ್ಚಿ ಬಾಬು ನಾಯ್ಡು ಎಂದೇ ಖ್ಯಾತಿ ಗಳಿಸಿದ್ದರು. ಹೀಗಾಗಿ ಈ ಟೂರ್ನಿಗೆ ಇದೇ ಹೆಸರನ್ನು ಇರಿಸಲಾಗಿದೆ. ರಣಜಿ ಮಾದರಿಯಂತೆ 4 ದಿನಗಳ ಕಾಲ ನಡೆಯುವ ಟೂರ್ನಿ ಇದಾಗಿದೆ. 12 ತಂಡಗಳನ್ನು ತಲಾ ಮೂರರಂತೆ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗುತ್ತದೆ.

ರಣಜಿ ಆಡಲು ನಿರಾಕರಿಸಿದ್ದ ಕಾರಣದಿಂದಾಗಿ ಟೀಮ್​ ಇಂಡಿಯಾದಲ್ಲಿ ಅವಕಾಶ ವಂಚಿತರಾಗಿರುವ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ಇಶಾನ್ ಕಿಶನ್(Ishan Kishan)​ ಬುಚ್ಚಿ ಬಾಬು(Buchi Babu) ಕ್ರಿಕೆಟ್ ಟೂರ್ನಿಯಲ್ಲಿ ಜಾರ್ಖಂಡ್ ಪರ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಮತ್ತೆ ಭಾರತ ತಂಡಕ್ಕೆ ಕಮ್​ಬ್ಯಾಕ್​ ಮಾಡುವ ಪ್ರಯತ್ನ ಮಾಡಲಿದ್ದಾರೆ.

ಕಳೆದ ವರ್ಷ ನವೆಂಬರ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯ ಮೂರನೇ ಟಿ20 ಸಂದರ್ಭದಲ್ಲಿ ಕಿಶನ್ ಕೊನೆಯದಾಗಿ ಭಾರತಕ್ಕಾಗಿ ಆಡಿದ್ದರು. ನಂತರದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದರೂ ಕೂಡ ಅಂತಿಮ ಹಂತದಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದರು. ಸ್ವಲ್ಪ ವಿರಾಮವನ್ನು ತೆಗೆದುಕೊಂಡ ಇಶಾನ್​ಗೆ ಅಂದಿನ ಕೋಚ್​ ದ್ರಾವಿಡ್​ ಮತ್ತು ಆಯ್ಕೆ ಸಮಿತಿ ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡುವಂತೆ ಸೂಚನೆ ನೀಡಿತ್ತು. ಆದರೆ ಇದನ್ನು ಇಶಾನ್​ ಕಡೆಗಣಿಸಿದ್ದರು. ಈ ಕಾರಣದಿಂದ ಬಿಸಿಸಿಐ ಅವರನ್ನು ಕೇಂದ್ರೀಯ ಗುತ್ತಿಗೆಯಿಂದಲೂ ಕೈಬಿಟ್ಟಿತ್ತು.

Exit mobile version