ಮುಂಬಯಿ : ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಏಕ ದಿನ ಸರಣಿಯನ್ನು ಭಾರತ ತಂಡ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಶುಭ್ಮನ್ ಗಿಲ್, ಮೊಹಮ್ಮದ್ ಸಿರಾಜ್ ಸೇರಿದಂತೆ ಹಲವು ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ಆಯ್ಕೆಗಾರರಿಗೆ ವಿಶ್ವಾಸ ಮೂಡಿಸಿದ್ದಾರೆ. ಇನ್ನೇನು ಆರು ತಿಂಗಳಲ್ಲಿ ಏಕ ದಿನ ವಿಶ್ವ ಕಪ್ ಭಾರತದ ಆತಿಥ್ಯದಲ್ಲಿ ನಡೆಯುವ ಕಾರಣ ಏಕ ದಿನ ಸರಣಿಗಳ ಗೆಲುವು ಭಾರತ ತಂಡದ ವಿಶ್ವಾಸ ಹೆಚ್ಚಿಸುವುದು ಖಚಿತ. ಇದೇ ಹಿನ್ನೆಲೆಯಲ್ಲಿ ಮಾತನಾಡಿದ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮ ಗೆಲುವಿನ ತಂಡವೊಂದು ರಚಿಸಬೇಕು ಎಂಬುದಾಗಿ ಅವರು ಹೇಳಿದರು.
ಭಾರತ ತಂಡ ವಿಶ್ವ ಕಪ್ ತನಕ ಗೆಲ್ಲುತ್ತಲೇ ಹೋಗಬೇಕು. ಅದಕ್ಕೆ ಪೂರಕ ತಂಡವೊಂದನ್ನು ರಚಿಸಬೇಕು. ಜಸ್ಪ್ರಿತ್ ಬುಮ್ರಾ, ಶುಬ್ಮನ್ ಗಿಲ್, ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಶಮಿಯಂಥ ಹಾಗೂ ರವೀಂದ್ರ ಜಡೇಜಾ ಅವರಂಥ ಆಟಗಾರರರು ತಂಡದಲ್ಲಿ ಇರಬೇಕು. ಪದೇಪದೆ ತಂಡವನ್ನು ಬದಲಾಯಿಸುವ ಮೂಲಕ ಸಮತೋಲನ ತಪ್ಪುವಂತೆ ಆಗಬಾರದು ಎಂದು ಸೌರವ್ ಗಂಗೂಲಿ ಹೇಳಿದರು.
ಇದನ್ನೂ ಓದಿ : Virat vs Sachin | ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ನಡುವಿನ ಹೋಲಿಕೆ ಸರಿಯಲ್ಲ ಎಂದ ಸೌರವ್ ಗಂಗೂಲಿ
ಭಾರತ ತಂಡ ವಿಶ್ವ ಕಪ್ ವೇಳೆಗೆ ಒತ್ತಡ ಮುಕ್ತವಾಗಿರಬೇಕು. ಸೋಲುಗಳ ಹೊರೆ ಇರಬಾರದು. ಆಕ್ರಮಣಕಾರಿ ಆಟವನ್ನು ಆಡುವಂತಾಗಬೇಕು. ಬದಲಾವಣೆ ಮತ್ತು ಅನಿವಾರ್ಯತೆಯನ್ನು ಸೃಷ್ಟಿಸಿಕೊಳ್ಳಬಾರದು. ಇದರಿಂದ ವಿಶ್ವ ಕಪ್ನಲ್ಲಿ ಉತ್ತಮ ಪ್ರದರ್ಶನ ನೀಡುವಂತಾಗಬೇಕು ಎಂದು ಸೌರವ್ ಗಂಗೂಲಿ ಹೇಳಿದರು.