ವೆಲ್ಲಿಂಗ್ಟನ್: ಹಾರ್ದಿಕ್ ಪಾಂಡ್ಯ (Hardik PandyaHardik Pandya) ನೇತೃತ್ವದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಟಿ೨೦ ಸರಣಿಯನ್ನು ೨-೦ ಅಂತರದಿಂದ ತನ್ನದಾಗಿಸಿಕೊಂಡಿತ್ತು. ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರೆ ಎರಡನೇ ಹಣಾಹಣಿಯಲ್ಲಿ ಭಾರತ ವಿಜಯಶಾಲಿಯಾಗಿತ್ತು. ಮೂರನೇ ಪಂದ್ಯವನ್ನು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ವಶಪಡಿಸಿಕೊಂಡಿದ್ದ ಭಾರತ ತಂಡ ಸರಣಿಗೆ ಒಡೆಯನೆನಿಸಿಕೊಂಡಿತ್ತು. ಇದೇ ಸಂಭ್ರಮದಲ್ಲಿ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ತಮ್ಮನ್ನು ಹೋಟೆಲ್ ರೂಮ್‌ನಿಂದ ಸ್ಟೇಡಿಯಮ್‌ಗೆ, ಅಲ್ಲಿಂದ ವಾಪಸ್ ಹೋಟೆಲ್‌ಗೆ ಬಿಟ್ಟಿದ್ದ ಬಸ್ ಚಾಲಕನಿಗೆ ಗಿಫ್ಟ್ ಒಂದನ್ನು ಕೊಟ್ಟಿದ್ದಾರೆ.
ಪಾಂಡ್ಯ ಕೊಟ್ಟಿರುವ ಗಿಫ್ಟ್ ಏನು ಗೊತ್ತೇ? ಎಲ್ಲ ಆಟಗಾರರ ಸಹಿ ಹಾಕಿರುವ ಟೀಮ್ ಇಂಡಿಯಾದ ಜರ್ಸಿ. ವಿಶ್ವದ ಬಲಿಷ್ಠ ತಂಡವೊಂದರ ಜರ್ಸಿ ಬಸ್ ಚಾಲಕರೊಬ್ಬರಿಗೆ ದೊರೆಯುವುದು ಸಣ್ಣ ವಿಚಾರವೇನಲ್ಲ. ಹೀಗಾಗಿ ಜರ್ಸಿಯನ್ನು ಗಿಫ್ಟ್ ಪಡೆದುಕೊಂಡ ಚಾಲಕ, ಅದನ್ನು ವಿಡಿಯೊ ಮಾಡಿಕೊಂಡು ಸಂಭ್ರಮ ಹಂಚಿಕೊಂಡಿದ್ದಾರೆ.
ತಮಗೆ ಸಿಕ್ಕಿರುವ ಜರ್ಸಿಯನ್ನು ಹರಾಜಿಗೆ ಇಡುವುದಾಗಿ ಹೇಳಿದ್ದಾರೆ ಚಾಲಕ. ಅದರಿಂದ ಬಂದಿರು ಹಣದಿಂದ ಸಾಮಾಜಿಕ ಸೇವೆಗೆ ಬಳಸುವುದಾಗಿ ಅವರು ಹೇಳಿಕೊಂಡಿದ್ದಾರೆ. ಟೀಮ್ ಇಂಡಿಯಾಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದು, ಜರ್ಸಿಗೆ ದೊಡ್ಡ ಮೊತ್ತ ಸಿಗುವ ಸಾಧ್ಯತೆಗಳಿವೆ. ಅಂತೆಯೇ ಸಾರ್ವಜನಿಕ ಸೇವೆಗೆ ಬಳಕೆಯಾಗುತ್ತದೆ ಎಂಬ ಕಾರಣಕ್ಕೆ ಅದು ಇನ್ನಷ್ಟು ಮೌಲ್ಯ ಪಡೆಯಬಹುದು ಎಂದು ಹೇಳಲಾಗುತ್ತಿದೆ.
ಟಿ೨೦ ಸರಣಿ ಮುಗಿಸಿದ ಹಾರ್ದಿಕ್ ಪಾಂಡ್ಯ ಭಾರತಕ್ಕೆ ವಾಪಸಾಗಿದ್ದಾರೆ. ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ಅಲ್ಲಿ ಏಕ ದಿನ ಸರಣಿಯಲ್ಲಿ ಪಾಲ್ಗೊಂಡಿದೆ.
ಇದನ್ನೂ ಓದಿ | Team India | ಎಲ್ಲ ತಂಡಕ್ಕೂ ನಾಯಕರಿದ್ದಾರೆ, ಭಾರತದ ನಾಯಕ ಎಲ್ಲಿ; ಈ ಪ್ರಶ್ನೆ ಎದುರಾಗಿದ್ದು ಯಾಕೆ?