ಬ್ಯಾಂಕಾಕ್: ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್‌ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಎಚ್. ಎಸ್. ಪ್ರಣಯ್ ಅವರು ಮತ್ತೆ ಸೋಲು ಕಂಡಿದ್ದು ಸೆಮಿಫೈನಲಿಗೇರುವ ಅವಕಾಶವನ್ನು ಬಹುತೇಕ ಕಳೆದುಕೊಂಡಿದ್ದಾರೆ.
ಗುರುವಾರ ‘ಎ’ ಬಣದಲ್ಲಿ ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ ಪ್ರಣಯ್ ಚೀನಾದ ಲು ಗ್ವಾಂಗ್ ಝು ಅವರೆದುರು 21-23, 21-17, 19-21 ಗೇಮ್‌ಗಳಿಂದ ಸೋಲು ಕಂಡರು. ಈ ವರ್ಷದ ಫ್ರೆಂಚ್ ಓಪನ್‌ನಲ್ಲಿಯೂ ಪ್ರಣಯ್ ಅವರು ಗ್ವಾಂಗ್ ಝುಗೆ ಶರಣಾಗಿದ್ದರು.
ಟೂರ್ನಿಯ “ಎ” ಬಣದಲ್ಲಿ ಇದು ಪ್ರಣಯ್ ಅವರ ಎರಡನೇ ಸೋಲು. ಮೊದಲ ಪಂದ್ಯದಲ್ಲಿ ಅವರು ಜಪಾನಿನ ಕೊಡೈ ನರವೋಕ ಎದುರು ಸೋತಿದ್ದರು. ಇದೀಗ ಎರಡು ಸೋಲು ಕಂಡಿರುವ ಕಾರಣ ಪ್ರಣಯ್ ನಾಕೌಟ್ ಹಂತಕ್ಕೇರುವ ಸಾಧ್ಯತೆ ಬಹುತೇಕ ಅಂತ್ಯಗೊಂಡಿದೆ. ಶುಕ್ರವಾರ ನಡೆಯುವ ಪಂದ್ಯದಲ್ಲಿ ವಿಶ್ವದ ನಂ.1 ಮತ್ತು ಒಲಿಂಪಿಕ್ ಚಾಂಪಿಯನ್ ವಿಕ್ಟರ್ ಆಕ್ಸೆಲ್ಸೆನ್ ಅವರನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ | IND VS BAN | ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ; ರೋಹಿತ್ ಬದಲಿಗೆ ಅಭಿಮನ್ಯು ಈಶ್ವರನ್ಗೆ ಸ್ಥಾನ!