Site icon Vistara News

Cameron Green | ಗಾಯಾಳು ಜೋಶ್​ ಇಂಗ್ಲಿಸ್​ ಬದಲಿಗೆ ಕ್ಯಾಮರಾನ್​ ಗ್ರೀನ್​ ಆಯ್ಕೆ

Cameron Green

ಸಿಡ್ನಿ: ಬಲಗೈ ಗಾಯದಿಂದ ಟಿ20 ವಿಶ್ವ ಕಪ್​ನಿಂದ ಹೊರಬಿದ್ದ ಆಸ್ಟ್ರೇಲಿಯಾ ತಂಡದ ಮೀಸಲು ವಿಕೆಟ್​ ಕೀಪರ್​ ಜೋಶ್​ ಇಂಗ್ಲಿಸ್​ ಸ್ಥಾನಕ್ಕೆ ಬದಲಿ ಆಟಗಾರನಾಗಿ ಕ್ಯಾಮರಾನ್​ ಗ್ರೀನ್​(Cameron Green) ಆಯ್ಕೆಯಾಗಿದ್ದಾರೆ.

ಗಾಲ್ಫ್ ಆಡುವ ವೇಳೆ ಇಂಗ್ಲಿಸ್​ ಅವರ ಬಲಗೈಗೆ ಗಾಯವಾಗಿ ಟಿ20 ವಿಶ್ವ ಕಪ್​ನಿಂದ ಬುಧವಾರ ಹೊರಬಿದ್ದಿದ್ದರು. ಇದೀಗ ಅವರ ಸ್ಥಾನದಲ್ಲಿ ಆಲ್​ರೌಂಡರ್ ಆಟಗಾರನಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಮಣೆಹಾಕಿದೆ. ಅದರಂತೆ ಸೂಪರ್-12 ಪಂದ್ಯಕ್ಕೂ ಮುನ್ನ ಯುವ ಆಟಗಾರ ಕ್ಯಾಮರೊನ್ ಗ್ರೀನ್ ಆಸೀಸ್ ಬಳಗವನ್ನು ಸೇರಿಕೊಳ್ಳಲಿದ್ದಾರೆ ಗುರುವಾರ ಕ್ರಿಕೆಟ್​ ಆಸ್ಟ್ರೇಲಿಯಾ ತಿಳಿಸಿದೆ.

ಇದೀಗ ಆಸೀಸ್​ ತಂಡ ಸೇರಿರುವ ಗ್ರೀನ್​ ಆಡುವ ಬಳಗದಲ್ಲಿ ಅವಕಾಶ ಪಡೆದರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ ತಂಡದ ಪ್ಲೇಯಿಂಗ್ ಇಲೆವೆನ್​ನ ಖಾಯಂ ಸದಸ್ಯರಾಗಿರುವ ಗ್ಲೆನ್ ಮ್ಯಾಕ್ಸ್​​ವೆಲ್ ಹಾಗೂ ಮಾರ್ಕಸ್ ಸ್ಟೊಯಿನಿಸ್ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಹೀಗಾಗಿ ಗ್ರೀನ್​ಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಡ್ಡಿಯಿಲ್ಲ. ಇನ್ನು ಇತ್ತೀಚೆಗೆ ಆಡಲಾಗಿದ್ದ ಟೀಮ್ ಇಂಡಿಯಾ ವಿರುದ್ಧದ ಸರಣಿಯಲ್ಲಿ ಕ್ಯಾಮರೊನ್ ಗ್ರೀನ್ ಎರಡು ಅರ್ಧ ಶತಕ ಸಿಡಿಸಿ ಭರ್ಜರಿ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ | T20 World Cup | ನೆದರ್ಲೆಂಡ್ಸ್ ವಿರುದ್ಧ ಗೆದ್ದು ಸೂಪರ್​-12 ಹಂತಕ್ಕೆ ಲಗ್ಗೆಯಿಟ್ಟ ಶ್ರೀಲಂಕಾ

Exit mobile version