ಇಂದೋರ್: ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ (INDvsAUS) ತಂಡಕ್ಕೆ ವಿಶ್ವಾಸ ಮೂಡಿಸಲು ಆಲ್ರೌಂಡರ್ ಕ್ಯಾಮೆರೂನ್ ಗ್ರೀನ್ ಬರುತ್ತಿದ್ದಾರೆ. ಅವರು ನಾನು ಮೂರನೇ ಪಂದ್ಯದಲ್ಲಿ ಆಡುವುದಕ್ಕೆ ಫಿಟ್ ಆಗಿದ್ದೇನೆ ಎಂದು ಹೇಳಿದ್ದಾರೆ. ನಾಯಕ ಪ್ಯಾಟ್ ಕಮಿನ್ಸ್ ಕೌಟುಂಬಿಕ ಸಮಸ್ಯೆಯ ಕಾರಣಕ್ಕೆ ತವರಿಗೆ ಹೋದವರು ವಾಪಸ್ ಬಂದಿಲ್ಲ. ಹೀಗಾಗಿ ಅವರ ಬದಲಿಗೆ ಬಲಿಷ್ಠ ಆಟಗಾರನೊಬ್ಬನ ಅಗತ್ಯವಿತ್ತು. ಅದಕ್ಕೆ ಪೂರಕವಾಗಿ ಗ್ರೀನ್ ಫಿಟ್ ಎನಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ತಂಡ ಜೋಶ್ ಹೇಜಲ್ವುಡ್ ಹಾಗೂ ಡೇವಿಡ್ ವಾರ್ನರ್ ಸೇವೆ ಕಳೆದುಕೊಂಡಿದ್ದಾರೆ. ಆಸ್ಟನ್ ಅಗರ್ ಸ್ಪಿನ್ ವಿಭಾಗ ಸೇರಿಕೊಂಡಿದ್ದಾರೆ. ಆದರೆ, ಪ್ಯಾಟ್ ಕಮಿನ್ಸ್ ಸೇವೆ ಕಳೆದುಕೊಂಡಿರುವ ಕಾರಣ ತಂಡಕ್ಕೆ ಹಿನ್ನಡೆಯಾಗಿತ್ತು. ಆದರೆ, ಕ್ಯಾಮೆರೂನ್ ಆಗಮನದಿಂದ ಆಸ್ಟ್ರೇಲಿಯಾ ತಂಡದ ಕೋಚ್ ಆಂಡ್ರ್ಯೂ ಮೆಕ್ಡೊನಾಲ್ಡ್ ಸಂತಸಗೊಂಡಿದ್ದಾರೆ.
ಇದನ್ನೂ ಓದಿ : IPL 2023 | ಐಪಿಎಲ್ನಲ್ಲಿ ನನಗೆ ಸಿಕ್ಕಿದ ದುಡ್ಡು ಜಾಸ್ತಿಯಾಯಿತು ಎಂದ ಕ್ಯಾಮೆರಾನ್ ಗ್ರೀನ್!
ನಾನು ಆಡುವುದಕ್ಕೆ ಫಿಟ್ ಆಗಿದ್ದೇನೆ. ಪಂದ್ಯಗಳ ನಡುವೆ ಅಂತರ ಇದ್ದಿದ್ದು ನನಗೆ ಅನುಕೂಲ ಉಂಟು ಮಾಡಿತು. ಅದೇ ಕಾರಣಕ್ಕೆ 100 ಪ್ರತಿಶತ ಸಿದ್ದಗೊಂಡಿದ್ದೇನೆ. ನೆಟ್ನಲ್ಲಿ ಸ್ವೀಪ್ ಮಾಡಲು ಹೋಗುವಾಗ ಸಾಕಷ್ಟು ಬಾರಿ ಗಾಯಗೊಂಡಿದ್ದೇನೆ. ಅದನ್ನು ಹೊರತುಪಡಿಸಿದರೆ ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ, ಎಂದು ಗ್ರೀನ್ ಹೇಳಿದ್ದಾರೆ.