Site icon Vistara News

IPL 2023 | ಐಪಿಎಲ್​ನಲ್ಲಿ ನನಗೆ ಸಿಕ್ಕಿದ ದುಡ್ಡು ಜಾಸ್ತಿಯಾಯಿತು ಎಂದ ಕ್ಯಾಮೆರಾನ್​ ಗ್ರೀನ್​!

IPL 2023

ಕೊಚ್ಚಿ : ಐಪಿಎಲ್​ 16ನೇ (IPL 2023 ) ಆವೃತ್ತಿಗಾಗಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಲ್ಲಿ ಆಸ್ಟ್ರೇಲಿಯಾದ ಆಲ್​ರೌಂಡರ್​ ಕ್ಯಾಮೆರಾನ್​ ಗ್ರೀನ್​ ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದಕ್ಕೆ ಫ್ರಾಂಚೈಸಿಗಳು ಮುಗಿ ಬಿದ್ದಿದ್ದವು. ಕೊನೆಯಲ್ಲಿ ಅವರು 17.5 ಕೋಟಿ ರೂಪಾಯಿಗೆ ಮುಂಬಯಿ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ. ಈ ಮೂಲಕ 23 ವರ್ಷದ ಯುವ ಆಟಗಾರ ದೊಡ್ಡ ಮೊತ್ತವನ್ನು ಜೇಬಿಗೆ ಇಳಿಸಿಕೊಂಡು ಸಾಧನೆ ಮಾಡಿದ್ದಾರೆ. ಆದರೆ ತಮಗೆ ಸಿಕ್ಕಿರುವ ದುಡ್ಡು ಜಾಸ್ತಿಯಾಯಿತು ಎಂಬುದಾಗಿ ಯುವ ಆಟಗಾರ ಈಗ ಹೇಳಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಡುತ್ತಿರುವ ಅವರು ಈ ಕುರಿತು ಮಾತನಾಡಿ ”ಅಷ್ಟೊಂದು ದೊಡ್ಡ ಮೊತ್ತವನ್ನು ಪಡೆಯುವಷ್ಟು ಮಹಾನ್​ ಸಾಧನೆ ನಾನು ಮಾಡಿಲ್ಲ. ಹೀಗಾಗಿ ಸಿಕ್ಕಿರುವ ಹಣ ಹೆಚ್ಚಾಯಿತು ಎಂದು ಅನಿಸುತ್ತಿದೆ,” ಎಂದು ಹೇಳಿದ್ದಾರೆ.

“ನಾನು ಐಪಿಎಲ್​ ಹರಾಜು ಪಟ್ಟಿಯಲ್ಲಿ ನನ್ನ ಹೆಸರನ್ನು ಸುಮ್ಮನೆ ಸೇರಿಸಿದ್ದೆ. ದೊಡ್ಡ ಮೊತ್ತವೂ ಬಂದಿದೆ. ಹಾಗೆಂದು ನನ್ನ ಪ್ರದರ್ಶನದಲ್ಲಿ ಯಾವುದೇ ಬದಲಾವಣೆ ಉಂಟಾಗದು. ನನಗೆ ನನ್ನ ಕ್ರಿಕೆಟ್​ ಬಗ್ಗೆ ಹಚ್ಚು ಆಸಕ್ತಿಯಿದೆ. ಹೀಗಾಗಿ ದೊಡ್ಡ ಗಳಿಕೆಯಿಂದ ನನ್ನಲ್ಲಿ ಯಾವುದೇ ಬದಲಾವಣೆ ಉಂಟಾಗದು,” ಎಂದು ಅವರು ಹೇಳಿದ್ದಾರೆ.

“ಆಲ್​ರೌಂಡರ್​ಗಳಿಗೆ ಪ್ರದರ್ಶನದ ಒತ್ತಡ ಹೆಚ್ಚಿರುತ್ತದೆ. ಬೆನ್ನು ನೋವಿನ ಸಮಸ್ಯೆಯಿಂದಾಗಿ ಬೌಲಿಂಗ್​ ಹೊರೆಯನ್ನು ಇಳಿಸಿಕೊಳ್ಳುತ್ತಿದ್ದೇನೆ. ಆದರೂ ಬ್ಯಾಟಿಂಗ್ ಹಾಗೂ ಬೌಲಿಂಗ್​ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ,” ಎಂದು ಗ್ರೀನ್​ ನುಡಿದಿದ್ದಾರೆ.

ಇದನ್ನೂ ಓದಿ | IPL 2023 | ಐಪಿಎಲ್‌ ಆಡುವುದಕ್ಕೆ ಹೋಗಬೇಡ; ಕ್ಯಾಮೆರಾನ್‌ಗೆ ಆಸ್ಟ್ರೇಲಿಯಾದ ಕ್ರಿಕೆಟಿಗನ ಕಿವಿಮಾತು!

Exit mobile version