Site icon Vistara News

2030 Commonwealth: ಆಸ್ಟ್ರೇಲಿಯಾ ಬೆನ್ನಲ್ಲೇ ಕಾಮನ್‌ವೆಲ್ತ್‌ ಆತಿಥ್ಯದಿಂದ ಹಿಂದೆ ಸರಿದ ಮೊತ್ತೊಂದು ರಾಷ್ಟ್ರ

The Commonwealth Games are a multi-sport tournament that take place every four years

ಲಂಡನ್‌: ಇತ್ತೀಚೆಗಷ್ಟೇ 2026ರ ಕಾಮನ್‌ವೆಲ್ತ್‌ ಗೇಮ್ಸ್‌(Commonwealth Games 2026) ಆತಿಥ್ಯದಿಂದ ಆಸ್ಟ್ರೇಲಿಯಾ(Australia) ಹಿಂದೆ ಸರಿದ ಬೆನ್ನಲ್ಲೇ ಇದೀಗ ಮತ್ತೊಂದು ರಾಷ್ಟ್ರವೂ ಈ ಟೂರ್ನಿಯ ಆತಿಥ್ಯದಿಂದ ಹಿಂದೆ ಸರಿಯಲು ನಿರ್ಧರಿಸಿದೆ. 2030ರ ಕಾಮನ್‌ವೆಲ್ತ್‌ ಗೇಮ್ಸ್‌(2030 Commonwealth) ಕ್ರೀಡಾಕೂಟದ ಆತಿಥ್ಯದಿಂದ ಕೆನಡಾದ(Canad) ಆಲ್ಬರ್ಟಾ(Alberta) ಪ್ರಾಂತ್ಯ ಹಿಂದೆ ಸರಿದಿದೆ. ಈ ಮೂಲಕ ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಶನ್‌(ಸಿಜಿಎಫ್‌)ಗೆ ಆಘಾತ ಮೂಡಿಸಿದೆ.

ಕ್ರೀಡಾಕೂಟದ ಆಯೋಜನೆಗೆ ಸುಮಾರು 2.01 ಬಿಲಿಯನ್‌ ಅಮೆರಿಕನ್‌ ಡಾಲರ್(ಅಂದಾಜು 16000 ಕೋಟಿ ರೂ.) ಬೇಕಾಗುವ ನಿಟ್ಟಿನಲ್ಲಿ ಆಲ್ಬಾರ್ಟ ಪ್ರಾಂತ್ಯ ಈ ಟೂರ್ನಿಯ ಆತಿಥ್ಯದಿಂದ ಹಿಂದೆ ಸರಿಯುವುದಾಗಿ ತಿಳಿಸಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ತನ್ನ ತೆರಿಗೆದಾರರ ಹಣವನ್ನು ಬಳಕೆ ಮಾಡಲು ತಾವು ಸಿದ್ದವಿಲ್ಲ. ಜತೆಗೆ ಆರ್ಥಿಕ ಸಂಕಷ್ಟದಿಂದ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ ಕ್ರೀಡಾಕೂಟದ ಆಯೋಜನೆಯಿಂದ ಹಿಂದೆ ಸರಿದಿದ್ದು ತಮ್ಮ ನಿರ್ಧಾರದ ಮೇಲೆ ಪರಿಣಾಮ ಬೀರಿದೆ ಎಂದು ಆಲ್ಬರ್ಟಾದ ಕ್ರೀಡಾ ಹಾಗೂ ಪ್ರವಾಸೋದ್ಯಮ ಸಚಿವ ಜೋಸೆಫ್‌ ಶೋ ಹೇಳಿದ್ದಾರೆ.

ಕೆನಡಾ ಈ ಹಿಂದೆ 1930, 1954, 1978 ಹಾಗೂ 1994ರ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸಿತ್ತು. ಇದು 5ನೇ ಬಾರಿಯ ಆತಿಥ್ಯವಾಗಿತ್ತು. ಹಲವು ದೇಶಗಳು ಈ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದು ಫೆಡರೇಶನ್​ಗೆ ಆಘಾತ ತಂದಿದೆ. ಇದೇ ರೀತಿ ಮುಂದುವರಿದರೆ ಟೂರ್ನಿ ಮುಂದಿನ ದಿನಗಳಲ್ಲಿ ಸ್ಥಗಿತಗೊಂಳುವ ಸಾಧ್ಯತೆ ಇದೆ ಎಂದು ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಶನ್‌ನ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳು ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯದ ಪ್ರೀಮಿಯರ್ ಡೇನಿಯಲ್ ಆಂಡ್ರ್ಯೂ,(Daniel Andrews) ನಾಲ್ಕು ಪ್ರಾದೇಶಿಕ ಕೇಂದ್ರಗಳಲ್ಲಿ ನಡೆಯಬೇಕಾಗಿದ್ದ ಕ್ರೀಡಾಕೂಟದ ವೆಚ್ಚವು ಯೋಜನೆಯಂತೆ ನಡೆದರೆ 2.6 ಬಿಲಿಯನ್‌ ಆಸ್ಟ್ರೇಲಿಯನ್ ಡಾಲರ್‌ನಿಂದ 7 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್‌ಗಿಂತಲೂ (4.8 ಬಿಲಿಯನ್ ಡಾಲರ್) ಹೆಚ್ಚು ತಗಲಬಹುದು. ಕಳೆದ ವರ್ಷ ಅಂದಾಜು ಮಾಡಲಾದ ಬಜೆಟ್‌ಗಿಂತಲೂ ಮೂರು ಪಟ್ಟು ಹೆಚ್ಚು ವೆಚ್ಚ ತಗಲುವ ಕ್ರೀಡಾಕೂಟದ ಆಯೋಜನೆಗಾಗಿ ಆಸ್ಪತ್ರೆ ಹಾಗೂ ಶಾಲೆಗಳಿಂದ ಹಣವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಒಂದೊಮ್ಮೆ ಈ ಟೂರ್ನಿಯನ್ನು ನಡೆಸಿದ್ದೇ ಆದಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದ ಅಂತಿಮವಾಗಿ 2026ರ ಕಾಮನ್‌ವೆಲ್ತ್‌ ಗೇಮ್ಸ್‌(Commonwealth Games 2026) ಆತಿಥ್ಯದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದೇವೆ” ಎಂದು ಆತಿಥ್ಯದಿಂದ ಹಿಂದೆ ಸರಿದ ವಿಚಾರವನ್ನು ತಿಳಿಸಿದ್ದರು.

ಆಸ್ಟ್ರೇಲಿಯಾ(Australia) ಹಿಂದೆ ಸರಿದ ಬೆನ್ನಲ್ಲೇ, ಗುಜರಾತ್‌ನ ಅಹಮದಾಬಾದ್‌(Ahmedabad) ಕ್ರೀಡಾಕೂಟದ ಆತಿಥ್ಯದ ಹಕ್ಕಿಗೆ ಬಿಡ್‌ ಸಲ್ಲಿಸುವ ಸಾಧ್ಯತೆ ಇದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಬಗ್ಗೆ ಗುಜರಾತ್‌ ಸರ್ಕಾರ(gujarat government) ಸ್ಪಷ್ಟನೆ ನೀಡಿದ್ದು ಈ ವಿಚಾರವನ್ನು ಅಲ್ಲಗಳೆದಿತ್ತು.

ಇದನ್ನೂ ಓದಿ Commonwealth Games 2026: ಕಾಮನ್ ವೆಲ್ತ್ ಕ್ರೀಡಾಕೂಟದ ಆತಿಥ್ಯದಿಂದ ಹಿಂದೆ ಸರಿದ ಆಸ್ಟ್ರೇಲಿಯಾ

“2026ರ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯ ಪಡೆಯುವ ಯಾವುದೇ ಚಿಂತನೆ ನಮಗೆ ಇಲ್ಲ. ಆದರೆ 2036ರ ಒಲಿಂಪಿಕ್ಸ್ ಆತಿಥ್ಯ ಹಕ್ಕು ಪಡೆಯುವುದು ನಮ್ಮ ಮುಂದಿರುವ ಗುರಿ ಎಂದು ಗುಜರಾತ್‌ ಸರ್ಕಾರ ಸ್ಪಷ್ಟಪಡಿಸಿದೆ”. ಒಲಿಂಪಿಕ್ಸ್‌ ಆತಿಥ್ಯಕ್ಕೂ ಮುನ್ನ ಕಾಮನ್‌ವೆಲ್ತ್ ಗೇಮ್ಸ್ ಆಯೋಜಿಸಿ ಇದಕ್ಕೆ ಬೇಕಾದ ಸಿದ್ಧತೆ ನಡೆಸಲು ಗುಜರಾತ್‌ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೆಲ ಮಾಧ್ಯಮಗಳು ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಗುಜರಾತ್‌ ಸರ್ಕಾರ ಈ ಸ್ಪಷ್ಟನೆ ನೀಡಿತ್ತು.

Exit mobile version