ಮುಂಬಯಿ: ಆರಂಭಿಕ ವನಿತಾ ಕ್ರಿಕೆಟ್ ಪ್ರೀಮಿಯರ್ ಲೀಗ್‌ನ(WPL) ತಂಡಗಳ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯು ಒಂದು ತಂಡವನ್ನು ಖರೀದಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಟೀಮ್ ಇಂಡಿಯಾ ಕ್ರಿಕೆಟಿಗ, ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli) ತಮ್ಮ ಫ್ರಾಂಚೈಸಿಯ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉದ್ಘಾಟನ ವಿಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಹರಾಜಿನಲ್ಲಿ ಬೆಂಗಳೂರು ಮೂಲದ ತಂಡವನ್ನು ಆರ್‌ಸಿಬಿ 901 ಕೋಟಿ ರೂ ಬಿಡ್ ಮೂಲಕ ಖರೀದಿಸಿದೆ. ಇದೀಗ ವಿರಾಟ್ ಕೊಹ್ಲಿ ತಮ್ಮ ಫ್ರಾಂಚೇಸಿ ಮಹಿಳಾ ತಂಡವನ್ನು ಖರೀದಿದಕ್ಕೆ ಸಂತದ ವ್ಯಕ್ತಪಡಿಸಿದ್ದಾರೆ.
ಕೊಹ್ಲಿ ಟ್ವೀಟ್
“ನಮ್ಮ ಫ್ರಾಂಚೈಸಿಯು ಮಹಿಳೆಯರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡಗಳ ಹರಾಜು ಪ್ರಕ್ರಿಯೆಯಲ್ಲಿ ಬಿಡ್ ಗೆದ್ದಿರುವುದು ಸಂತಸದ ವಿಚಾರ. ರೆಡ್ & ಗೋಲ್ಡ್ ಜರ್ಸಿಯನ್ನು ಧರಿಸಿದ ನಮ್ಮ ಆಟಗಾರ್ತಿಯರನ್ನು ಹುರಿದುಂಬಿಸಲು ಹೆಚ್ಚು ಸಮಯ ಕಾಯಲು ಸಾಧ್ಯವಾಗುತ್ತಿಲ್ಲ” ಎಂದು ಕೊಹ್ಲಿ ಆರ್ಸಿಬಿಯ ಲೋಗೊ ಹಾಕಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಆರ್‌ಸಿಬಿ ಅಭಿಮಾನಿಗಳ ಹೃದಯ ಗೆದ್ದಿದೆ.
ಇದನ್ನೂ ಓದಿ | WPL 2023: ವುಮೆನ್ಸ್ ಐಪಿಎಲ್ಗೆ ಹೊಸ ಹೆಸರಿಟ್ಟ ಬಿಸಿಸಿಐ