Site icon Vistara News

IND vs SA: ದ್ವಿತೀಯ ಪಂದ್ಯದ ಪಿಚ್​ ರಿಪೋರ್ಟ್​, ಹವಾಮಾನ ವರದಿ ಹೇಗಿದೆ?

Rahul Dravid inspects the pitch

ಕೇಪ್​ ಟೌನ್​: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ದ್ವಿತೀಯ ಟೆಸ್ಟ್(South Africa vs India, 2nd Test)​ ಪಂದ್ಯ ನಾಳೆ(ಬುಧವಾರ) ಕೇಪ್ ಟೌನ್​ನ ನ್ಯೂಲ್ಯಾಂಡ್ಸ್ ಅಂಗಳದಲ್ಲಿ ಆರಂಭಗೊಳ್ಳಲಿದೆ. ಈ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡ, ಹವಾಮಾನ ವರದಿ ಮತ್ತು ಇತರ ಅಂಕಿ ಅಂಶಗಳ ಮಾಹಿತಿ ಇಂತಿದೆ.

ಪಿಚ್​ ರಿಪೋರ್ಟ್​

ಟೇಬಲ್ ಮೌಂಟೇನ್‌ನ ಬುಡದಲ್ಲಿರುವ ನ್ಯೂಲ್ಯಾಂಡ್ಸ್ ವಿಶ್ವದ ಅತ್ಯಂತ ಸುಂದರವಾದ ಕ್ರಿಕೆಟ್ ಸ್ಥಳಗಳಲ್ಲಿ ಒಂದಾಗಿದೆ. ನ್ಯೂಲ್ಯಾಂಡ್ಸ್‌ನಲ್ಲಿನ ಮೇಲ್ಮೈ ವೇಗಿಗಳಿಗೆ ಸಾಕಷ್ಟು ಸಹಾಯವನ್ನು ನೀಡುತ್ತದೆ. ವಿಶೇಷವಾಗಿ ಇಲ್ಲಿ ಸ್ಪೀನ್​ ದಾಳಿ ಯಾವುದೇ ಪರಿಣಾಮ ಬೀರುವುದಿಲ್ಲ. ನ್ಯೂಲ್ಯಾಂಡ್ಸ್ ಕ್ರಿಕೆಟ್ ಗ್ರೌಂಡ್‌ನಲ್ಲಿರುವ ಪಿಚ್‌ನಲ್ಲಿ ಹೆಚ್ಚು ಹುಲ್ಲು ಇರುವುದರಿಂದ ಹೆಚ್ಚು ಬೌನ್ಸ್​ಗಳು ಕಂಡುಬರಲಿದೆ. ಹೀಗಾಗಿ ಇತ್ತಂಡಗಳು ವೇಗದ ಬೌಲರ್​ಗಳಿಗೆ ಮಣೆ ಹಾಕಲಿದೆ. ಮೊದಲ ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ಯಾವುದೇ ಸ್ಪಿನ್​ ಬೌಲರ್​ ಆಯ್ಕೆ ಮಾಡಿಕೊಂಡಿರಲ್ಲ. ಈ ಆದರೆ ಭಾರತ ಒಂದು ಸ್ಪಿನ್​ ಆಯ್ಕೆ ಮಾಡಿ ಕೈ ಸುಟ್ಟುಕೊಂಡಿತ್ತು. ಈ ಪಂದ್ಯದಲ್ಲಿ ಹೆಚ್ಚುವರಿ ವೇಗಿಯನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಅಧಿಕವಾಗಿದೆ.

ಇದನ್ನೂ ಓದಿ IND vs SA: ಭಾರತಕ್ಕೆ ಗಾಯದ ಆತಂಕ; ಅಭ್ಯಾಸದ ವೇಳೆ ಶುಭಮನ್​ ಗಿಲ್​ಗೆ ಗಾಯ

ನ್ಯೂಲ್ಯಾಂಡ್ಸ್ ಟೆಸ್ಟ್ ರೆಕಾರ್ಡ್ ಮತ್ತು ಅಂಕಿ ಅಂಶಗಳು

ಈ ಮೈದಾನದಲ್ಲಿ ಒಟ್ಟು 60 ಟೆಸ್ಟ್​ ಪಂದ್ಯಗಳು ನಡೆದಿವೆ. ಇದರಲ್ಲಿ 23 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡಗಳು ಗೆದ್ದರೆ, 25 ಬಾರಿ ಚೇಸಿಂಗ್​ ನಡೆಸಿದ ತಂಡ ಮೇಲುಗೈ ಸಾಧಿಸಿದೆ. ಈ ಅಂಕಿ ಅಂಶದ ಪ್ರಕಾರ ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡರೆ ಗೆಲುವಿನ ಅವಕಾಶ ಹೆಚ್ಚು ಎನ್ನಬಹುದು. ಮೊದಲು ಬ್ಯಾಟಿಂಗ್​ ನಡೆಸಿದ ತಂಡದ ಮೊದಲ ಇನಿಂಗ್ಸ್​ನ ಸರಾಸರಿ ಮೊತ್ತ 325. ಇಲ್ಲಿನ ಗರಿಷ್ಠ ಮೊತ್ತ 651 ರನ್​. ಕನಿಷ್ಠ ಮೊತ್ತ 35.

ಭಾರತದ ದಾಖಲೆ

ಭಾರತ ತಂಡ ಈ ಮೈದಾನದಲ್ಲಿ ಇದುವರೆಗೆ ಒಟ್ಟು 6 ಟೆಸ್ಟ್ ಪಂದ್ಯಗಳನ್ನು ಆಡಿದೆ. ಆದರೆ, ಪಂದೂ ಪಂದ್ಯವನ್ನು ಕೂಡ ಗೆಲ್ಲಲು ಸಾಧ್ಯವಾಗಿಲ್ಲ. 4 ಪಂದ್ಯಗಳಲ್ಲಿ ಸೋಲು ಕಂಡರೆ, ಉಳಿದ 2 ಪಂದ್ಯಗಳನ್ನು ಡ್ರಾ ಗೊಳಿಸಿದೆ. ಈ ಬಾರಿಯಾದರೂ ಭಾರತ ಇಲ್ಲಿ ಗೆದ್ದು ಇತಿಹಾಸ ನಿರ್ಮಿಸಲಿದೆಯೇ ಎಂದು ಕಾದು ನೋಡಬೇಕಿದೆ.

ಹವಾಮಾನ ವರದಿ

ಹವಾಮಾನ ಮುನ್ಸೂಚನೆಯ ಪ್ರಕಾರ ಜನವರಿ 3 ರಿಂದ ಜನವರಿ 5 ರವರೆಗೆ ಮಳೆಯಾಗುವ ಸಾಧ್ಯತೆಗಳಿಲ್ಲ. ಆದರೆ, ಜನವರಿ 6 ರಂದು ಮಳೆಯ ಮುನ್ಸೂಚನೆಯು 40 ರಿಂದ 50 ರಷ್ಟಿದೆ. ಮತ್ತು ಜನವರಿ 7 ರಂದು ಅಂತಿಮ ದಿನ ಶೇ. 5 ರಿಂದ 10 ರಷ್ಟು ಮಳೆಯ ಮುನ್ಸೂಚನೆ ಇದೆ.

ಸಂಭಾವ್ಯ ತಂಡ

ಭಾರತ: ರೋಹಿತ್​ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್​ ಶುಭಮನ್​ ಗಿಲ್​, ವಿರಾಟ್​ ಕೊಹ್ಲಿ, ಕೆಎಲ್ ರಾಹುಲ್​, ಶ್ರೇಯಸ್​ ಅಯ್ಯರ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್​, ಅವೇಶ್​ ಖಾನ್​, ಪ್ರಸಿದ್ಧ್​​ ಕೃಷ್ಣ, ಮುಕೇಶ್​ ಕುಮಾರ್​.

ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್(ನಾಯಕ), ಐಡೆನ್ ಮಾರ್ಕ್ರಾಮ್, ಟೋನಿ ಡಿ ಝೋರ್ಜಿ, ಕೀಗನ್ ಪೀಟರ್ಸನ್, ಡೇವಿಡ್ ಬೆಡಿಂಗ್ಹ್ಯಾಮ್, ಕೈಲ್ ವೆರ್ರೆನ್ನೆ (ವಿಕೆಟ್​ ಕೀಪರ್​), ಮಾರ್ಕೊ ಜಾನ್ಸೆನ್, ಕಗಿಸೊ ರಬಾಡಾ, ನಾಂಡ್ರೆ ಬರ್ಗರ್, ಲುಂಗಿ ಎನ್​ಗಿಡಿ, ವಿಯಾನ್ ಮುಲ್ಡರ್.

Exit mobile version