ಲಖನೌ : ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ (INDvsNZ T20) ಪಂದ್ಯಗಳಿಗೆ ಪಿಚ್ ನಿರ್ಮಿಸಿದ ಕ್ಯುರೇಟರ್ಗಳ ಬಗ್ಗೆ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದೂ ಅಲ್ಲದೆ, ಲಖನೌ ಪಿಚ್ ಆಘಾತಕಾರಿಯಾಗಿತ್ತು ಎಂಬುದಾಗಿ ಹೇಳಿದ್ದಾರೆ. ರಾಂಚಿಯಲ್ಲಿ ನಡೆದ ಮೊದಲ ಹಾಗೂ ಲಖನೌನಲ್ಲಿ ನಡೆದ ಪಂದ್ಯದಲ್ಲಿ ಕಡಿಮೆ ಮೊತ್ತಗಳು ದಾಖಲಾಗಿದ್ದವು. ಅದಕ್ಕೆ ಮಿತಿ ಮೀರಿ ಟರ್ನ್ ತೆಗೆದುಕೊಳ್ಳುತ್ತಿದ್ದ ಪಿಚ್ ಕಾರಣ ಎಂದು ಹೇಳಲಾಗುತ್ತಿದೆ. ಈ ಕುರಿತು ಹಾರ್ದಿಕ್ ಪಾಂಡ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಲಖನೌನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಮೊದಲು ಬ್ಯಾಟ್ ಮಾಡಿ 99 ರನ್ಗಳನ್ನು ಬಾರಿಸಿತ್ತು. ಅದಕ್ಕೆ ಪ್ರತಿಯಾಗಿ ಆಡಿದ ಭಾರತ ತಂಡ 101 ರನ್ ಬಾರಿಸಲು ಹೆಣಗಾಡಿತ್ತು. ಕೊನೇ ಒಂದು ಎಸೆತ ಬಾಕಿ ಇರುವಾಗ ಜಯ ಸಾಧಿಸಿತ್ತು. ಇಡೀ ಪಂದ್ಯದಲ್ಲಿ ಒಂದೇ ಒಂದು ಸಿಕ್ಸರ್ ದಾಖಲಾಗಿರಲಿಲ್ಲ. ಈ ಬೆಳವಣಿಗೆಯನ್ನು ಇಟ್ಟುಕೊಂಡು ಹಾರ್ದಿಕ್ ಪಾಂಡ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಇದೊಂದು ಶಾಕಿಂಗ್ ಪಿಚ್ ಆಗಿದೆ. ನಾವು ನ್ಯೂಜಿಲ್ಯಾಂಡ್ ವಿರುದ್ಧದ ಆಡಿರುವ ಎರಡೂ ಪಿಚ್ಗಳು ಕಠಿಣವಾಗಿದ್ದವು. ತಿರುವು ಪಡೆವ ಪಿಚ್ಗಳ ಬಗ್ಗೆ ನಮಗೆ ಬೇಸರವಿಲ್ಲ. ಆದರೆ ಎರಡೂ ಪಿಚ್ಗಳು ಟಿ20 ಪಂದ್ಯಕ್ಕೆ ಸೂಕ್ತವಾಗಿರಲಿಲ್ಲ ಎಂಬುದಾಗಿ ಪಾಂಡ್ಯ ಹೇಳಿದ್ದಾರೆ.
ಇದನ್ನೂ ಓದಿ : INDvsNZ T20 : ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 6 ವಿಕೆಟ್ ಜಯ
ಕ್ಯುರೇಟರ್ಗಳು ಹಾಗೂ ಮೈದಾನದ ಸಿಬ್ಬಂದಿ ಪಂದ್ಯಗಳಿಗೆ ಮೊದಲು ಸೂಕ್ತ ಪಿಚ್ ತಯಾರಿಸಬೇಕು. ಟಿ20 ಪಂದ್ಯದ ಉದ್ದೇಶ ಈಡೇರುವಂತಿರಬೇಕು ಎಂಬುದಾಗಿ ಪಾಂಡ್ಯ ಹೇಳಿದ್ದಾರೆ.