Site icon Vistara News

INDvsNZ | ಮೂರನೇ ಪಂದ್ಯಕ್ಕೆ ನಾಯಕ ಕೇನ್‌ ವಿಲಿಯಮ್ಸನ್‌ ಅಲಭ್ಯ, ನಾಯಕ ಯಾರು?

indvsnz

ನೇಪಿಯರ್‌ : ಟಿ೨೦ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯಕ್ಕೆ (INDvsNZ) ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಅಲಭ್ಯರಾಗಿದ್ದಾರೆ. ವೈದ್ಯಕೀಯ ಹಿನ್ನೆಲೆಯಲ್ಲಿ ಅವರು ತಂಡ ತೊರೆದಿದ್ದು, ವೇಗದ ಬೌಲರ್‌ ಟಿಮ್‌ ಸೌಥೀ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ಹೆಡ್‌ ಕೋಚ್‌ ಗ್ಯಾರಿ ಸ್ಟಡ್‌ ಅವರು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಕೇನ್‌ ವಿಲಿಯಮ್ಸನ್‌ ಅಲಭ್ಯತೆಯಲ್ಲಿ ಟಿಮ್‌ ಸೌಥೀ ತಂಡವನ್ನು ಮುನ್ನಡೆಸಲಿದ್ದಾರೆ ಹಾಗೂ ಮಾರ್ಕ್‌ ಚಾಪ್‌ಮನ್‌ ಅವರು ಕೇನ್‌ ಸ್ಥಾನವನ್ನು ತುಂಬಲಿದ್ದಾರೆ ಎಂದು ಹೇಳಿದ್ದಾರೆ.

“ಕೇನ್‌ ವಿಲಿಯಮ್ಸನ್‌ ಅವರು ಪಂದ್ಯಕ್ಕೆ ಲಭ್ಯರಾಗುವಂತೆ ನೋಡಿಕೊಳ್ಳಲು ಹಲವ ಪ್ರಯತ್ನಗಳನ್ನು ಮಾಡಲಾಯಿತು. ಆದರೆ, ಅದು ಸಾಧ್ಯವಾಗಲಿಲ್ಲ. ನಮ್ಮ ಆಟಗಾರರ ಆರೋಗ್ಯ ಆದ್ಯತೆಯ ವಿಚಾರವಾಗಿದೆ. ಆಕ್ಲೆಂಡ್‌ನಲ್ಲಿ ಅವರು ತಂಡ ಸೇರಿಕೊಳ್ಳಲಿದ್ದಾರೆ,” ಎಂದು ಅವರು ಹೇಳಿದ್ದಾರೆ.

ನ್ಯೂಜಿಲೆಂಡ್‌ ನಾಯಕನಿಗೆ ಕಳೆದ ವರ್ಷ ಮೊಣಕೈ ನೋವು ಬಾಧಿಸಿತ್ತು. ಗುಣಮುಖರಾಗಿ ಬಂದಿರುವ ಅವರಿಗೆ ಅದರ ಮುಂದುವರಿದ ಪರೀಕ್ಷೆ ನಿಗದಿಯಾಗಿದೆ. ಹೀಗಾಗಿ ಅವರು ಮೂರನೇ ಪಂದ್ಯವನ್ನು ತ್ಯಜಿಸಿದ್ದಾರೆ ಎನ್ನಲಾಗಿದೆ.

ಕೇನ್‌ ವಿಲಿಯಮ್ಸನ್‌ ಎರಡನೇ ಪಂದ್ಯದಲ್ಲಿ ೫೨ ಎಸೆತಗಳಿಗೆ ೬೧ ರನ್‌ ಬಾರಿಸಿದ್ದರು. ಆದಾಗ್ಯೂ ಭಾರತ ತಂಡ ೬೫ ರನ್‌ಗಳ ಭರ್ಜರಿ ಜಯ ಕಂಡಿತ್ತು. ಮಂಗಳವಾರ ನಡೆಯಲಿರುವ ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ಭಾರತ ಮಿಂಚುವ ಸೂಚನೆ ನೀಡಿದೆ.

ನವೆಂಬರ್‌ ೨೫, ೨೭ ಹಾಗೂ ೩೦ರಂದು ಏಕ ದಿನ ಸರಣಿಯ ಮೂರು ಪಂದ್ಯಗಳು ನಡಯಲಿವೆ.

ಇದನ್ನೂ ಓದಿ | INDvsNZ | ಪಂದ್ಯ ಶ್ರೇಷ್ಠ ಪುರಸ್ಕಾರ ಪಡೆಯುವಲ್ಲೂ ವಿರಾಟ್‌ ಕೊಹ್ಲಿ ದಾಖಲೆ ಮುರಿದ ಸೂರ್ಯಕುಮಾರ್‌

Exit mobile version