ಪರ್ತ್: ಟಿ೨೦ ವಿಶ್ವ ಕಪ್‌ನ ಸೂಪರ್-೧೨ ಹಂತದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ೫ ವಿಕೆಟ್‌ಗಳ ಸೋಲಿಗೆ ಒಳಗಾಗಿದೆ. ಆದರೆ, ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರು ಚುಟಕು ಮಾದರಿಯ ವಿಶ್ವ ಕಪ್‌ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ರೋಹಿತ್ ಶರ್ಮ ಅವರ ಪಾಲಿಗೆ ಭಾನುವಾರದ ಪಂದ್ಯದ ಟಿ೨೦ ವಿಶ್ವ ಕಪ್‌ನಲ್ಲಿ ೩೬ನೇ ಪಂದ್ಯ. ಈ ಮೂಲಕ ಶ್ರೀಲಂಕಾದ ಮಾಜಿ ಆಟಗಾರನ ದಾಖಲೆಯನ್ನು ಮುರಿದಿದ್ದಾರೆ.
ಲಂಕಾದ ಆಲ್‌ರೌಂಡರ್ ತಿಲಕರತ್ನೆ ದಿಲ್ಶನ್ ಅವರು ಟಿ೨೦ ಮಾದರಿಯ ವಿಶ್ವ ಕಪ್‌ನಲ್ಲಿ ೩೫ ಪಂದ್ಯಗಳನ್ನು ಆಡಿ ಗರಿಷ್ಠ ಪಂದ್ಯಗಳಲ್ಲಿ ಪಾಲ್ಗೊಂಡ ಸಾಧನೆ ಮಾಡಿದ್ದರು. ರೋಹಿತ್ ಶರ್ಮ ಅವರು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಈ ಸಾಧನೆಯನ್ನು ಸರಿಗಟ್ಟಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಮೂಲಕ ಅವರ ದಾಖಲೆಯನ್ನು ಮುರಿದಿದ್ದಾರೆ. ಬಾಂಗ್ಲಾದೇಶದ ಶಕಿಬ್ ಅಲ್ ಹಸನ್ ಅವರು ಒಟ್ಟಾರೆ ೩೪ ಪಂದ್ಯಗಳಲ್ಲಿ ಆಡಿದ್ದು ರೋಹಿತ್ ಅವರ ಸಾಧನೆಯ ಸನಿಹದಲ್ಲಿ ಇದ್ದಾರೆ.
ರೋಹಿತ್ ಶರ್ಮ ಅವರು ೨೦೦೭ರ ಉದ್ಘಾಟನಾ ಆವೃತ್ತಿಯ ಟಿ೨೦ ವಿಶ್ವ ಕಪ್‌ನಿಂದ ಆಡುತ್ತಿದ್ದಾರೆ. ಹಾಲಿ ಆವೃತ್ತಿ ಅವರ ಪಾಲಿಗೆ ಎಂಟನೇ ಆವೃತ್ತಿಯ ವಿಶ್ವ ಕಪ್. ಅಂತೆಯೇ ನಾಯಕರಾಗಿ ಮೊದಲ ವಿಶ್ವ ಕಪ್.
ಪ್ರಸಕ್ತ ಆಡುವವರ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಪಂದ್ಯಗಳನ್ನು ಆಡುವ ಮೂಲಕ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | Team India | ನೂತನ ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮ ನೇತೃತ್ವದ ಟೀಮ್ ಇಂಡಿಯಾ, ಯಾವುದು ಅದು?