Site icon Vistara News

T20 World Cup | ವಿಶ್ವ ಕಪ್‌ಗೆ ಆಡುವ 11ರ ಬಳಗ ಸಿದ್ಧಗೊಂಡಿದೆ ಎಂದ ನಾಯಕ ರೋಹಿತ್‌ ಶರ್ಮ

t20 world cup

ಪರ್ತ್‌ : ಮುಂದಿನ ಟಿ೨೦ ವಿಶ್ವ ಕಪ್‌ನಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾಗೆ ತೆರಳಿರುವ ಟೀಮ್‌ ಇಂಡಿಯಾ ಅಲ್ಲಿ ಸರ್ವ ರೀತಿಯಲ್ಲೂ ಅಭ್ಯಾಸ ನಡೆಸುತ್ತಿದೆ. ಅಕ್ಟೋಬರ್‌ ೨೩ರಂದು ಪಾಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಆಡಲಿದೆ. ಅದಕ್ಕಿಂತ ಮೊದಲು ಎರಡು ಅಭ್ಯಾಸ ಪಂದ್ಯಗಳಲ್ಲಿ ಎರಡು ಅಭ್ಯಾಸ ಪಂದ್ಯಗಳಲ್ಲಿ ಭಾರತ ತಂಡ ಪಾಲ್ಗೊಳ್ಳಬೇಕಾಗಿದೆ. ಇದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಯಾರೆಲ್ಲ ಇರಬಹುದು ಎಂಬ ಚರ್ಚೆ ಕ್ರಿಕೆಟ್‌ ಕಾರಿಡಾರ್‌ನಲ್ಲಿ ಜೋರಾಗಿ ನಡೆಯುತ್ತಿದೆ. ಬ್ಯಾಟರ್‌ಗಳ ಕ್ರಮಾಂಕ ಬಹುತೇಕ ಖಚಿತಗೊಂಡಿದ್ದರೂ ಬೌಲರ್‌ಗಳ ಸ್ಥಿರತೆಯ ಕೊರತೆಯಿಂದಾಗಿ ಯಾರು ಅವಕಾಶ ಪಡೆಯಬಲ್ಲರು ಎಂಬ ಕುತೂಹಲ ಸೃಷ್ಟಿಯಾಗಿದೆ. ಆದರೆ, ಟೀಮ್‌ ಇಂಡಿಯಾದ ನಾಯಕ ರೋಹಿತ್‌ ಶರ್ಮ ಅವರು ನಮ್ಮ ಆಡುವ ಬಳಗ ಸಿದ್ಧಗೊಂಡಿದೆ ಎಂಬುದಾಗಿ ಹೇಳಿದ್ದಾರೆ.

ಶನಿವಾರ ಐಸಿಸಿ ವಿಶ್ವ ಕಪ್‌ನಲ್ಲಿ ಆಡುವ ತಂಡಗಳ ನಾಯಕರ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು. ಅದರಲ್ಲಿ ಮಾತನಾಡಿದ ರೋಹಿತ್‌ ಶರ್ಮ, ನಮ್ಮ ಆಡುವ ಬಳಗ ಸಜ್ಜಾಗಿದೆ ಎಂದು ಹೇಳಿದ್ದಾರೆ.

“ಕೊನೇ ಕ್ಷಣದ ಬದಲಾವಣೆ ಹಾಗೂ ಸಿದ್ಧತೆ ಬಗ್ಗೆ ನನಗೆ ನಂಬಿಕೆ ಇಲ್ಲ. ಯಾರೆಲ್ಲ ಆಡುವ ಬಳಗದಲ್ಲಿ ಇರುತ್ತಾರೆ ಎಂಬುದನ್ನು ತಂಡದ ಅಟಗಾರರಿಗೆ ಮೊದಲೇ ತಿಳಿಸಬೇಕಾಗುತ್ತದೆ ಹಾಗೂ ಅದರಿಂದ ಅವರಿಗೆ ಸಜ್ಜಾಗಲೂ ನೆರವಾಗುತ್ತದೆ. ಅಂತೆಯೇ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾದ ಆಡುವ ಬಳಗ ಸಿದ್ಧಗೊಂಡಿದೆ,” ಎಂಬುದಾಗಿ ಹೇಳಿದರು.

” ಪಾಕಿಸ್ತಾನ ವಿರುದ್ಧದ ಹಣಾಹಣಿಯ ಪ್ರಾಮುಖ್ಯತೆಯ ಬಗ್ಗೆ ನನಗೆ ಅರಿವಿದೆ. ಆದರೆ, ಅದರ ಬಗ್ಗೆಯೇ ಪದೇಪದೆ ಮಾತನಾಡುವ ಅಗತ್ಯ ಇಲ್ಲ ಎಂಬುದು ನನ್ನ ನಂಬಿಕೆ. ಏಷ್ಯಾ ಕಪ್‌ನಲ್ಲಿಯೂ ಇತ್ತಂಡಗಳ ಆಟಗಾರರು ಪರಸ್ಪರ ಮಾತನಾಡಿಕೊಂಡಿದ್ದೇವೆ. ಆದರೆ ಕುಟುಂಬದ ಬಗ್ಗೆ ಹಾಗೂ ಅವರು ಖರೀದಿ ಮಾಡಿರುವ ಕಾರುಗಳ ಬಗ್ಗೆ ಕೇಳಿದ್ದೇವೆ,” ಎಂದು ಅವರು ಹೇಳಿದರು.

ಆಕ್ರಮಣಕಾರಿ ಆಟ

ಆಕ್ರಮಣಕಾರಿ ಬ್ಯಾಟಿಂಗ್ ಮಾಡುವುದೇ ನಮ್ಮ ಗುರಿಯಾಗಿದೆ. ಹಿಂದೆಲ್ಲ ೧೪೦ ರನ್‌ಗಳನ್ನು ಪೇರಿಸಿದರೆ ಗೆಲ್ಲುವುದಕ್ಕೆ ಸಾಧ್ಯವಾಗುತ್ತಿತ್ತು. ಈಗ ಪ್ರತಿ ಓವರ್‌ಗೆ ೧೫ರಿಂದ ೧೫ ರನ್‌ ಬಾರಿಸುವ ಬಗ್ಗೆ ಯೋಜನೆ ರೂಪಿಸಬೇಕಾಗುತ್ತದೆ,” ಎಂದು ಹೇಳಿದ ರೋಹಿತ್‌ ಶರ್ಮ “ಭಾನುವಾರ ಬ್ರಿಸ್ಬೇನ್‌ನಲ್ಲಿ ಅಭ್ಯಾಸ ಪಂದ್ಯ ನಡೆಯಲಿದೆ. ಆ ಪಂದ್ಯದ ವೇಳೆ ಶಮಿಯ ಪ್ರದರ್ಶನವನ್ನು ನೋಡಲಾಗುವುದು,” ಎಂಬುದಾಗಿ ಅವರು ಹೇಳಿದರು.

ಇದನ್ನೂ ಓದಿ | IND vs SA | ಎರಡನೇ ಪಂದ್ಯಕ್ಕೆ ಅಭ್ಯಾಸ ಶುರು ಮಾಡಿದ ರೋಹಿತ್‌ ಶರ್ಮ ನೇತೃತ್ವದ ಟೀಮ್‌ ಇಂಡಿಯಾ

Exit mobile version