ಚೆನ್ನೈ: ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯಿಂದಾಗಿ ಅಲಭ್ಯರಾದ ಕಾರಣ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ಗೆ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯಲ್ಲಿ (INDvsAUS) ಅವಕಾಶ ಸಿಕ್ಕಿತ್ತು. ಆದರೆ, ದೀರ್ಘ ಅವಧಿಯ ಕ್ರಿಕೆಟ್ನಲ್ಲಿ ಛಾಪು ಮೂಡಿಸುವುದಕ್ಕೆ ಮುಂಬಯಿ ಬ್ಯಾಟ್ಸ್ಮನ್ ವಿಫಲಗೊಂಡರು. ಮೂರು ಪಂದ್ಯಗಳಲ್ಲಿ ಅವರು ಶೂನ್ಯ ಸುತ್ತಿದರು. ಅವರ ತ್ರಿವಲಿ ಗೋಲ್ಡನ್ ಡಕ್ ಇದೀಗ ಕ್ರಿಕೆಟ್ ಕಾರಿಡಾರ್ನ ಚರ್ಚೆಯ ವಿಷಯ. ಆದರೆ, ನಾಯಕ ರೋಹಿತ್ ಶರ್ಮಾ ಅವರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಇಂಥದ್ದೆಲ್ಲ ಆಗುತ್ತದೆ ಎಂಬರ್ಥದಲ್ಲಿ ಮಾತನಾಡುತ್ತಿದ್ದಾರೆ. ಅವರು ಉತ್ತಮ ಎಸೆತಗಳಿಗೆ ಔಟಾಗಿದ್ದಾರೆ. ಹೀಗಾಗಿ ಅವರ ಸಾಮರ್ಥ್ಯದ ಬಗ್ಗೆ ಡೌಟೇ ಇಲ್ಲ ಎಂದು ಹೇಳಿದ್ದಾರೆ. ಜತೆಗೆ ಟೀಮ್ ಇಂಡಿಯಾ ಮ್ಯಾಜೇನ್ಮೆಂಟ್ ಕೂಡ ಈ ಬಗ್ಗೆ ತಲೆಕಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ. ಸೂರ್ಯಕುಮಾರ್ ಯಾದವ್ ಸರಣಿಯ ಮೂರು ಪಂದ್ಯಗಳಲ್ಲಿ ಅತ್ಯಂತ ಕಷ್ಟಕರವಾದ ಎಸೆತಗಳನ್ನು ಎದುರಿಸಿ ಔಟಾಗಿದ್ದಾರೆ. ಹಾಗೆಂದು ಮೂರನೇ ಪಂದ್ಯದಲ್ಲಿ ಅವರು ಕೆಟ್ಟ ಹೊಡೆತವನ್ನು ಹೊಡೆಯಲು ಮುಂದಾಗಿ ಔಟಾಗಿದ್ದಾರೆ. ಆಸ್ಟನ್ ಅಗರ್ ಎಸೆತ ಅಷ್ಟೊಂದು ಉತ್ತಮವಾಗಿತ್ತು ಎಂದು ಹೇಳುವುದೂ ಕಷ್ಟ ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಸೂರ್ಯಕುಮಾರ್ ಯಾದವ್ ಮೊದಲ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಎಸೆತಕ್ಕೆ ಎಲ್ಬಿಡಬ್ಲ್ಯು ಔಟ್ ಆಗಿದ್ದರು. ಎರಡನೇ ಪಂದ್ಯದಲ್ಲಿ ಬೌಲ್ಡ್ ಅಗಿದ್ದರು. ಆದರೂ, ಚೆನ್ನೈನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಅವರಿಗೆ ಮತ್ತೊಂದು ಅವಕಾಶ ನೀಡಿತ್ತು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್. ಆದರೆ, ಈ ಪಂದ್ಯದಲ್ಲಿ ಸ್ಪಿನ್ನರ್ ಆಸ್ಟನ್ ಅಗರ್ ಎಸೆತಕ್ಕೆ ಬೌಲ್ಟ್ ಆಗಿದ್ದರು. ಇದರೊಂದಿಗೆ ತ್ರಿವಳಿ ಗೋಲ್ಡನ್ ಡಕ್ ಅದ ಕೆಟ್ಡ ದಾಖಲೆಯನ್ನು ಮಾಡಿದ್ದರು.
ಸೂರ್ಯಕುಮಾರ್ ಯಾದವ್ 2021ರ ಜುಲೈನಲ್ಲಿ ಏಕ ದಿನ ಮಾದರಿಗೆ ಪದಾರ್ಪಣೆ ಮಾಡಿದ್ದಾರೆ. ಅಲ್ಲಿಂದ 23 ಏಕ ದಿನ ಪಂದ್ಯಗಳಲ್ಲಿ ಆಡಿದ್ದರೂ ಕೇವಲ 433 ರನ್ ಬಾರಿಸಿದ್ದಾರೆ. ಅವರ ರನ್ ಸರಾಸರಿ 24.05.
ಇದನ್ನೂ ಓದಿ : IND VS AUS: ಸರಣಿ ಸೋಲಿಗೆ ನಾಯಕ ರೋಹಿತ್ ಶರ್ಮಾ ನೀಡಿದ ಕಾರಣವೇನು?
ಸೂರ್ಯಕುಮಾರ್ ಯಾದವ್ ಅವರನ್ನು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾಗಿತ್ತು. ಆದರೆ, ಅವರು ಸ್ಪಿನ್ ಬೌಲಿಂಗ್ಗೆ ಚೆನ್ನಾಗಿ ಆಡುತ್ತಾರೆ ಎಂಬ ಕಾರಣಕ್ಕೆ ಏಳನೇ ಕ್ರಮಾಂಕದಲ್ಲಿ ಆಡಿಸಲಾಯಿತು. ಅವರು ಇಡೀ ಸರಣಿಯಲ್ಲಿ ಕೇವಲ ಮೂರು ಎಸೆತಗಳನ್ನು ಮಾತ್ರ ಎದುರಿಸಿದ್ದು ದುರದೃಷ್ಟ. ಇಂಥ ಸಂದರ್ಭವನ್ನು ಎಲ್ಲರೂ ಎದುರಿಸುತ್ತಾರೆ. ಅವರು ತಮ್ಮ ಕಳಪೆ ಫಾರ್ಮ್ನಿಂದ ಹೊರ ಬರಲಿದ್ದಾರೆ ಎಂದು ರೋಹಿತ್ ವಿಶ್ವಾಸ ವ್ಯಕ್ತಪಡಿಸಿದರು.
ಕೆ. ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಆಡುತ್ತಿದ್ದ ವೇಳೆ ಆಸ್ಟ್ರೇಲಿಯಾ ನಾಯಕ ಲೆಗ್ ಸ್ಪಿನ್ನರ್ಗಳನ್ನು ಹೆಚ್ಚು ಬಳಸುತ್ತಿದ್ದರು. ಹೀಗಾಗಿ ಎಡಗೈ ಬ್ಯಾಟರ್ ಅಕ್ಷರ್ ಪಟೇಲ್ ಅವರಿಗೆ ಬಡ್ತಿ ನೀಡಲು ನಿರ್ಧರಿಸಿದೆವು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.