Site icon Vistara News

Casteist BCCI | ಬಾಂಗ್ಲಾದೇಶ ಪ್ರವಾಸಕ್ಕೆ ಸೂರ್ಯಕುಮಾರ್​ಗೆ ರೆಸ್ಟ್, ಸಂಜುಗೆ ಕೊಕ್‌,​ ಇದಕ್ಕೆ ಜಾತಿ ಕಾರಣವಂತೆ!

suryakumar

ಮುಂಬಯಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(BCCI) ಆಟಗಾರರನ್ನು ಜಾತಿ ನೋಡಿ ಆಯ್ಕೆ ಮಾಡುತ್ತಿದೆ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ. ಅದರಂತೆ ಟ್ವಿಟರ್‌ನಲ್ಲಿ “ಕಾಸ್ಟಿಯಸ್ಟ್ ಬಿಸಿಸಿಐ” ಎಂಬ ಹ್ಯಾಸ್‌ ಟ್ಯಾಗ್‌ ಎಲ್ಲಡೆ ಸದ್ದು ಮಾಡಲಾರಂಭಿಸಿದೆ. ಮುಂಬರುವ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಸೂರ್ಯಕುಮಾರ್‌ ಯಾದವ್‌ ಹಾಗೂ ಸಂಜು ಸ್ಯಾಮ್ಸನ್‌ ಅವರನ್ನು ಕೈಬಿಟ್ಟಿರುವುದು ಇದಕ್ಕೆ ಕಾರಣ.

ಹಿರಿಯ ಪತ್ರಕರ್ತ ದಿಲೀಪ್‌ ಮಂಡಲ್‌ ಟ್ವೀಟ್‌ ಮಾಡಿದ್ದು ಬಿಸಿಸಿಐ ಜಾತಿ ಆಧಾರದಲ್ಲಿ ಆಟಗಾರರಿಗೆ ಅವಕಾಶ ನೀಡುತ್ತದೆ ಎಂದು ಆರೋಪಿಸಿದ್ದಾರೆ. ಅದರಂತೆ ಮಹಾಭಾರತದ ಒಂದು ಸನ್ನಿವೇಶವನ್ನೂ ಅವರು ಉಲ್ಲೇಖಿಸಿದ್ದಾರೆ. ಮಹಾಭಾರತದಲ್ಲಿ ಕರ್ಣ ಅನುಭವಿಸಿದ ಕಷ್ಟ ಭಾರತೀಯ ಕ್ರಿಕೆಟ್‌ನಲ್ಲಿ ಈ ಮೊದಲು ವಿನೋದ್‌ ಕಾಂಬ್ಳಿ ಈಗ ಸೂರ್ಯಕುಮಾರ್‌ ಯಾದವ್‌ ಮತ್ತು ಸಂಜು ಸ್ಯಾಮ್ಸನ್‌ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿಶ್ರಾಂತಿ ಎನ್ನುವುದು ಕೇವಲ ನೆಪ ಮಾತ್ರ. ಐಪಿಎಲ್‌ನಲ್ಲಿ ಉತ್ತಮವಾಗಿ ಪ್ರದರ್ಶನ ತೋರುತ್ತಿದ್ದಾಗಲೂ ಸೂರ್ಯಕುಮಾರ್‌ಗೆ ತಂಡದಲ್ಲಿ ಅವಕಾಶ ನೀಡಲಿಲ್ಲ. ಇದೀಗ ಸಿಕ್ಕ ಅವಕಾಶದಲ್ಲಿ ಉತ್ತಮವಾಗಿ ಆಡಿದರೂ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಜಾತಿಯೇ ಕಾರಣ ಎಂದು ಬಿಸಿಸಿಐ ವಿರುದ್ಧ ದಿಲೀಪ್‌ ಮಂಡಲ್‌ ಕಿಡಿಕಾರಿದ್ದಾರೆ.

ಟಿ20ಯಲ್ಲಿ ಅದ್ಭುತವಾಗಿ ಆಡುತ್ತಿರುವ ಸೂರ್ಯಕುಮಾರ್ ಯಾದವ್ ಏಕ ದಿನ ಪಂದ್ಯಗಳನ್ನು ಆಡಲು ಅಸಮರ್ಥರೇ? ಏಕದಿನ ಪಂದ್ಯಗಳನ್ನು ಆಡಲು ಏಕೆ ಅವಕಾಶ ನೀಡಲಿಲ್ಲ? ಫಾರ್ಮ್‌ನಿಂದ ಹೊರಗುಳಿದ ಆಟಗಾರರನ್ನು ತಂಡಕ್ಕೆ ತೆಗೆದುಕೊಳ್ಳುವ ಮೂಲಕ ಬಿಸಿಸಿಐ ಸೂರ್ಯ ಮತ್ತು ಸಂಜು ಸ್ಯಾಮ್ಸನ್‌ನಂತಹ ಆಟಗಾರರಿಗೆ ಅನ್ಯಾಯ ಮಾಡುತ್ತಿದೆ ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ | IND VS BANGLA | ಭಾರತ ವಿರುದ್ಧದ ಏಕದಿನ ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾದೇಶ

Exit mobile version