Site icon Vistara News

Deepti Sharma | ದೀಪ್ತಿ ಶರ್ಮ ಬೆಂಬಲಕ್ಕೆ ನಿಂತ ಕ್ರಿಕೆಟ್‌ ನಿಯಮ ರೂಪಿಸುವ ಎಮ್‌ಸಿಸಿ ಕ್ಲಬ್‌

deepti sharma

ನವ ದೆಹಲಿ : ಶನಿವಾರ ನಡೆದ ಭಾರತ ಹಾಗೂ ಇಂಗ್ಲೆಂಡ್‌ ಮಹಿಳೆಯರ ತಂಡಗಳ ನಡುವಿನ ಪಂದ್ಯವು ವಿವಾದಾತ್ಮಕವಾಗಿ ಕೊನೆಗೊಂಡಿತ್ತು. ಭಾರತ ತಂಡದ ಬೌಲರ್‌ ದೀಪ್ತಿ ಶರ್ಮ ಅವರು ಇಂಗ್ಲೆಂಡ್‌ ತಂಡದ ಚಾರ್ಲಿ ಡೀನ್‌ ಅವರನ್ನು ನಾನ್‌ಸ್ಟ್ರೈಕ್‌ ಎಂಡ್‌ನಲ್ಲಿ ರನ್‌ಔಟ್‌ ಮಾಡಿದ್ದೇ ಅದಕ್ಕೆ ಕಾರಣವಾಗಿತ್ತು. ಈ ಹಿಂದೆ ಈ ಮಾದರಿಯ ರನ್‌ಔಟ್‌ ಅನ್ನು ಮಂಕಡ್ ಎನ್ನಲಾಗುತ್ತಿತ್ತು. ಆದರೆ, ಐಸಿಸಿ ರೂಪಿಸಿದ ಹೊಸ ನಿಯಮ ಪ್ರಕಾರ ರನ್‌ಔಟ್‌. ಆದರೆ ನಿಯಮ ಜಾರಿಗೆ ಬರುವುದು ಅಕ್ಟೋಬರ್‌ ೧ರಿಂದ. ಆದಾಗ್ಯೂ ಇಂಗ್ಲೆಂಡ್‌ನ ಕೆಲವು ಹಿರಿಯ ಕ್ರಿಕೆಟಿಗರು ದೀಪ್ತಿ ಶರ್ಮ ಅವರನ್ನು ಟೀಕಿಸಲು ಆರಂಭಿಸಿದ್ದರು. ಆದರೀಗ, ಐಸಿಸಿಗೆ ಕ್ರಿಕೆಟ್‌ ನಿಯಮಗಳನ್ನು ರೂಪಿಸುವ ಮೆರಿಲ್‌ಬೋನ್ ಕ್ರಿಕೆಟ್‌ ಕ್ಲಬ್‌ (ಎಮ್‌ಸಿಸಿ) ದೀಪ್ತಿ ಶರ್ಮ ಬೆಂಬಲಕ್ಕೆ ನಿಂತಿದೆ.

ಮೆರಿಲ್‌ಬೋನ್‌ ಕ್ರಿಕೆಟ್‌ ಕ್ಲಬ್‌ ಭಾನುವಾರ ಈ ಕುರಿತು ಹೇಳಿಕೆಯೊಂದನ್ನು ಪ್ರಕಟಿಸಿದ್ದು, ಕ್ರೀಡಾ ಸ್ಫೂರ್ತಿ ಎಂಬ ಚರ್ಚೆ ಎಲ್ಲರಿಗೂ ಅನ್ವಯ ಎಂದು ಹೇಳಿದೆ. ಇದು ಅಸಮಾನ್ಯ ಸಂಗತಿಯಾಗಿದ್ದರೂ, ನಿಯಮದ ಬೆಂಬಲವಿದೆ ಎಂದಿದೆ.

ಹೊಸ ನಿಯಮ ಅಕ್ಟೋಬರ್‌ ೧ರಿಂದ ಜಾರಿಗೆ ಬರಲಿದೆ. ತಪ್ಪು ಸರಿಯ ಕುರಿತು ಮಾತನಾಡುವಾಗ, ಬ್ಯಾಟರ್‌ ಕೂಡ ತಾನು ಬೌಲರ್‌ ಚೆಂಡೆಸೆಯುವ ಮೊದಲು ಕ್ರೀಸ್‌ ಬಿಡಬಾರದು ಎಂಬುದನ್ನು ಅರಿತುಕೊಳ್ಳಬೇಕು. ಬೌಲರ್‌ಗೆ ಅನ್ವಯವಾಗುವ ಕ್ರೀಡಾ ಸ್ಫೂರ್ತಿಯ ನಿಯಮವನ್ನು ಬ್ಯಾಟರ್‌ಗಳೂ ಪಾಲಿಸಬೇಕು. ಮೊದಲೇ ಕ್ರೀಸ್‌ ಬಿಡುವ ಮೂಲಕ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂಬುದಾಗಿ ಎಮ್‌ಸಿಸಿ ಹೇಳಿದೆ.

ಕ್ರಿಕೆಟ್‌ನಲ್ಲಿ ಆಗಬೇಕಾದ ಬದಲಾವಣೆ ಹಾಗೂ ಹೊಸ ನಿಯಮಗಳನ್ನು ಜಾರಿಗೆ ತರುವುದು ಎಮ್‌ಸಿಸಿ ಸಲಹೆಯ ಅನ್ವಯ ಅಂತೆಯೇ. ಹೀಗಾಗಿ ದೀಪ್ತಿ ಅವರಿಗೆ ನೈತಿಕ ಬೆಂಬಲ ಲಭಿಸಿದೆ.

ಇದನ್ನೂ ಓದಿ | Deepti Sharma | ದೀಪ್ತಿ ಶರ್ಮ ರನ್‌ಔಟ್‌ ಮಾಡಿದ ರೀತಿ ಸರಿಯಾ, ತಪ್ಪಾ? ಮತ್ತೊಮ್ಮೆ ಮಂಕಡ್‌ ಚರ್ಚೆ

Exit mobile version