ಮುಂಬಯಿ : ಮುಂಬರುವ ಟಿ೨೦ ವಿಶ್ವ ಕಪ್‌ಗೆ ಭಾರತ ತಂಡ ಪ್ರಕಟಗೊಂಡಿದೆ. ಅಕ್ವೋಬರ್ ೧೬ರಂದು ಆರಂಭವಾಗುವ ಈ ಐಸಿಸಿ ಟೂರ್ನಿಗೆ ಬಲಿಷ್ಠವಾದ ತಂಡವನ್ನೇ ಆಯ್ಕೆ ಮಾಡಿದೆ. ಏತನ್ಮಧ್ಯೆ, ಬಿಸಿಸಿಐ ವಿಶ್ಲೇಷಣಾ ತಂಡವು ಇತ್ತೀಚಿನ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ ತಂಡದ ಪ್ರದರ್ಶನವನ್ನು ಪರಾಮರ್ಶೆಗೆ ಒಳಪಡಿಸಿದ್ದು, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದೆ.
“ಏಷ್ಯಾ ಕಪ್‌ನಲ್ಲಿ ಟೀಮ್ ಇಂಡಿಯಾದ ಪ್ರದರ್ಶನವನ್ನು ಪರಾಮರ್ಶೆಗೆ ಒಳಪಡಿಸಲಾಗಿದೆ. ಸಮಸ್ಯೆಗಿಂತ ಹೆಚ್ಚಾಗಿ ಆಗುತ್ತಿರುವ ತಪ್ಪುಗಳಿಗೆ ಪರಿಹಾರ ಏನೆಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ವಿಶ್ವ ಕಪ್‌ಗೆ ಮೊದಲು ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ,” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಏಷ್ಯಾ ಕಪ್‌ನಲ್ಲಿ ಭಾರತ ತಂಡದ ಬ್ಯಾಟರ್‌ಗಳು ೭ರಿಂದ ೧೫ ಓವರ್‌ಗಳ ನಡುವೆ ರನ್ ಗಳಿಸಲು ಪೇಚಾಡಿದ್ದರು. ಇದರಿಂದಾಗಿ ಎದುರಾಳಿ ತಂಡಕ್ಕೆ ದೊಡ್ಡ ಮೊತ್ತದ ಗುರಿಯನ್ನು ನೀಡಲು ಸಾಧ್ಯವಾಗಿರಲಿಲ್ಲ. ಅಲ್ಲದೆ, ಫಲಿತಾಂಶವೂ ಭಾರತಕ್ಕೆ ಪೂರಕವಾಗಿ ಬರಲಿಲ್ಲ. ಈ ಸಮಸ್ಯೆಯನ್ನು ಮನಗಂಡಿರುವ ಬಿಸಿಸಿಐ, ಟಿ೨೦ ವಿಶ್ವ ಕಪ್ ವೇಳೆ ಈ ಅವಧಿಯಲ್ಲಿ ಹೆಚ್ಚು ರನ್ ಗಳಿಸುವ ಕಡೆಗೆ ಆದ್ಯತೆ ನೀಡುವಂತೆ ಸೂಚನೆ ನೀಡಿದೆ,” ಎನ್ನಲಾಗಿದೆ.
ಟಿ೨೦ ವಿಶ್ವ ಕಪ್‌ಗೆ ಹೊರಡುವ ಮೊದಲು ಭಾರತ ತಂಡ ತವರಿನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಆಡಬೇಕಾಗಿದೆ. ಈ ಸರಣಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಸುಧಾರಣೆ ಬಗ್ಗೆ ಟೀಮ್ ಇಂಡಿಯಾ ಗಮನ ಹರಿಸಲಿದೆ.
ಇದನ್ನೂ ಓದಿ | T20 World Cup | ಬುಮ್ರಾ, ಹರ್ಷಲ್ ವಾಪಸ್; ಟಿ20 ವಿಶ್ವ ಕಪ್‌ಗೆ 15 ಸದಸ್ಯರ ಟೀಮ್ ಇಂಡಿಯಾ ಪ್ರಕಟ