Site icon Vistara News

IND vs PAK | ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿದ್ದಕ್ಕೆ ಅಫಘಾನಿಸ್ತಾನದಲ್ಲಿ ಸಂಭ್ರಮಾಚರಣೆ

ind vs pak

ನವ ದೆಹಲಿ : ಪಾಕಿಸ್ತಾನದ ಉಗ್ರರ ಉಪಟಳದಿಂದ ಭಾರತದ ಎಷ್ಟು ರೋಸಿ ಹೋಗಿದೆಯೋ, ಅಷ್ಟೇ ಪ್ರಮಾಣದಲ್ಲಿ ಅಫಘಾನಿಸ್ತಾನಕ್ಕೂ ನೆರೆಯ ಪಾಕ್‌ ವಿರುದ್ಧ ಕೋಪವಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ವಿಚಾರ ಬಂದಾಗ ಆಫ್ಘನ್‌ ಮಂದಿ ಭಾರತಕ್ಕೆ ಬೆಂಬಲ ಸೂಚಿಸುತ್ತಾರೆ. ಮೆಲ್ಬೋರ್ನ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಪಂದ್ಯದ ವೇಳೆಯೂ ಇದೇ ಪ್ರಸಂಗ ನಡೆಯಿತು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅಫಘಾನಿಸ್ತಾನದ ಕ್ರಿಕೆಟ್‌ ಅಭಿಮಾನಿಗಳು ನೇರವಾಗಿ ಭಾರತ ತಂಡಕ್ಕೆ ಬೆಂಬಲ ಸೂಚಿಸಿದ್ದರು.

ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ೪ ವಿಕೆಟ್‌ಗಳಿಂದ ಸೋಲಿಸಿತ್ತು. ಅದಕ್ಕಾಗಿ ಭಾರತವಿಡೀ ಖುಷಿಯಿಂದ ಸಂಭ್ರಮಿಸುತ್ತಿದೆ. ಇದೇ ವೇಳೆ ಅಫಘಾನಿಸ್ತಾನದ ಕ್ರಿಕೆಟ್‌ ಅಭಿಮಾನಿಗಳೂ ಭಾರತ ತಂಡದ ಗೆಲುವನ್ನು ಸಂಭ್ರಮಿಸಿದ್ದಾರೆ. ಅದರ ವಿಡಿಯೊ ವೈರಲ್‌ ಆಗಿದೆ.

ಎರಡು ತಿಂಗಳ ಹಿಂದೆ ಏಷ್ಯಾ ಕಪ್‌ನಲ್ಲಿಯೂ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿದ್ದಾಗ ಇದೇ ರೀತಿ ಆಗಿತ್ತು. ಅಫಘಾನಿಸ್ತಾನದ ಅಭಿಮಾನಿಗಳು ಪಾಕ್‌ ತಂಡ ಸೋಲುತ್ತಿದ್ದಂತೆ ಕುಣಿದು ಕುಪ್ಪಳಿಸ ಸಂಭ್ರಮಾಚರಣೆ ಮಾಡಿದ್ದರು. ಇದೀಗ ಮತ್ತೆ ಸಂಭ್ರಮಾಚರಣೆ ಮಾಡಿದೆ. ಅಂತೆಯೇ ಏಷ್ಯಾ ಕಪ್‌ ಪಂದ್ಯದ ವೇಳೆ ಅಫಘಾನಿಸ್ತಾನ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ವೇಳೆ ಇತ್ತಂಡಗಳ ಅಭಿಮಾನಿಗಳು ಖುರ್ಚಿಯಲ್ಲಿ ಬಡಿದಾಡಿಕೊಂಡಿದ್ದರು.

ಇದನ್ನೂ ಓದಿ | ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡುವ ಅಭಿಲಾಷೆ ವ್ಯಕ್ತಪಡಿಸಿದ ಪಾಕಿಸ್ತಾನದ ಕ್ರಿಕೆಟಿಗ, ಯಾಕೆ ಗೊತ್ತೇ?

Exit mobile version