Site icon Vistara News

AFG vs PAK: ಪಾಕ್​​ ಪರಾಭವ; ಗುಂಡಿನ ಸುರಿಮಳೆಗೈದು ಸಂಭ್ರಮಿಸಿದ ಕಾಬೂಲ್​ ಜನತೆ

Celebrations in Kabul after Afghanistan victory

ಚೆನ್ನೈ: ಪ್ರಸಕ್ತ ಸಾಗುತ್ತಿರುವ ವಿಶ್ವಕಪ್​ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ(Pakistan vs Afghanistan) ವಿರುದ್ಧ ಅಫಘಾನಿಸ್ತಾನ 8 ವಿಕೆಟ್​ಗಳ ಐತಿಹಾಸಿಕ ಗೆಲುವು ಸಾಧಿಸಿದೆ. ಆಫ್ಘನ್​ನ ತಂಡ ಗೆದ್ದ ಕೂಡಲೇ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಬದ್ಧ ಎದುರಾಳಿಯನ್ನು ಮಣಿಸಿದ ಸಂತಸದಲ್ಲಿ ಕಾಬೂಲ್​ನಲ್ಲಿ ಗುಂಡು ಹಾರಿಸಿ, ಪಟಾಕಿ ಸಿಡಿಸಿ ಈ ಗೆಲುವನ್ನು ಸಂಭ್ರಮಿಸಿದ್ದಾರೆ. ಇದರ ವಿಡಿಯೊ ವೈರಲ್​ ಆಗಿದೆ.

ಚೆನ್ನೈನ ಚೆಪಾಕ್ ಸ್ಟೇಡಿಯಮ್​ನಲ್ಲಿ(MA Chidambaram Stadium, Chennai) ಸೋಮವಾರ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಪಾಕಿಸ್ತಾನ, ಆಫ್ಘನ್​ ಬೌಲರ್​ಗಳ ಶಿಸ್ತಿನ ದಾಳಿಗೆ ತಡೆಯೊಟ್ಟುವಲ್ಲಿ ವಿಫಲವಾಗಿ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ಗೆ 282 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಅಪಘಾನಿಸ್ತಾನ ಕೇವಲ 2 ವಿಕೆಟ್​ ಕಳೆದುಕೊಂಡು ಇನ್ನೂ ಒಂದು ಓವರ್​ ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದು ಬೀಗಿತು. ಈ ಮೂಕಲ ಏಕದಿನ ಕ್ರಿಕೆಟ್​ ಮಾದರಿಯಲ್ಲಿ ಪಾಕ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿತು.

ಆಫ್ಘನ್​ ತಂಡ ಪಾಕಿಸ್ತಾನವನ್ನು ಮಣಿಸುತ್ತಿಂದತೆಯೇ ಅಫಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ವಿಶೇಷ ಸಂಭ್ರಮಾಚರಣೆ ಮಾಡಲಾಯಿತು. ತಾಲಿಬಾನಿಗಳು ಮನೆಯಲ್ಲಿದ್ದ ಬಂದೂಕುಗಳನ್ನು ಹೊರತಂದು ದೀಪಾಳಿಯಲ್ಲಿ ಸಿಡಿದ ಪಟಾಕಿಯಂತೆ ಬಂದೂಕಿನಿಂದ ಗುಂಡು ಸಿಡಿಸಿ ಸಂಭ್ರಮಿಸಿದರು. ಪಾಕ್​ ವಿರುದ್ಧದ ಈ ಗೆಲುವು ಅಭಿಮಾನಿಗಳಿಗೆ ವಿಶ್ವಕಪ್​ ಗೆದ್ದಷ್ಟೇ ಖಷಿ ನೀಡಿದಂತಿತ್ತು. ಈ ಹಿಂದೆ ಇಂಗ್ಲೆಂಡ್​ ವಿರುದ್ಧ ಗೆದ್ದಾಗ ಈ ರೀತಿಯ ಸಂಭ್ರಮ ಕಾಣಿಸಿರಲಿಲ್ಲ. ಪಾಕಿಸ್ತಾನ ಬದ್ಧ ವೈರಿ ಆಗಿರುವುದರಿಂದ ಇವರ ವಿರುದ್ಧದ ಗೆಲುವು ದೊಡ್ಡ ಸಾಧನೆಯಾಗಿದೆ.

ಸಚಿನ್​ ಮೆಚ್ಚುಗೆ​

ಸಚಿನ್​ ತೆಂಡೂಲ್ಕರ್​ ಅವರು ಅಫಘಾನಿಸ್ತಾನ ತಂಡಕ್ಕೆ ಪ್ರಶಂಸೆ ಸೂಚಿಸಿದ್ದಾರೆ. “ಈ ಬಾರಿಯ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಪ್ರದರ್ಶನವು ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಆಟದಲ್ಲಿ ತೋರುತ್ತಿರುವ ಅವರ ಶಿಸ್ತು, ಮನೋಧರ್ಮ ಮತ್ತು ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿರುವ ಆಕ್ರಮಣಕಾರಿ ಓಟವು ಅವರ ಕಠಿಣ ಪರಿಶ್ರಮವನ್ನು ತೋರಿಸುತ್ತಿದೆ. ಬಹುಶಃ ಇದು ಶ್ರೀ ಅಜಯ್ ಜಡೇಜಾ ಅವರ ಪ್ರಭಾವದ ಕಾರಣದಿಂದಾಗಿರಬಹುದು. ಅಸಾಧಾರಣ ಪ್ರದರ್ಶನದೊಂದಿಗೆ ಬಲಿಷ್ಠ ಇಂಗ್ಲೆಂಡ್ ಮತ್ತು ಪಾಕಿಸ್ತಾನದಂತಹ ತಂಡಗಳ ಮೇಲೆ ಸವಾರಿ ಮಾಡಿದ ನಿಮ್ಮ ಈ ಸಾಹಸ ಹೀಗೆಯೇ ಮುಂದುವರಿಯಲಿ. ಇನ್ನೂ ಕೂಡ ಅಚ್ಚರಿಯ ಫಲಿತಾಂಶವನ್ನು ನಿಮ್ಮಿಂದ ನಿರೀಕ್ಷೆ ಮಾಡಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ ಪಾಕ್​ ಮಣಿಸಿದ ಆಫ್ಘನ್​ ತಂಡಕ್ಕೆ ಭಾರತದ ಮಾಜಿ ಕ್ರಿಕೆಟಿಗರಿಂದ ಪ್ರಶಂಸೆಯ ಸುರಿಮಳೆ

ಆಟಗಾರರೊಂದಿಗೆ ಕುಣಿದು ಕುಪ್ಪಳಿಸಿದ ಇರ್ಫಾನ್​ ​

ಪಾಕಿಸ್ತಾನದ ಸೋಲನ್ನು ಕೇವಲ ಆಫ್ಘನ್​ ಮಾತ್ರವಲ್ಲ ಭಾರತೀಯರು ಸಂಭ್ರಮಿಸಿದ್ದಾರೆ. ಚೆನ್ನೈ ಸ್ಟೇಡಿಯಂನಲ್ಲಿ ಭಾರತೀಯ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ನರೆದು ಆಫ್ಘನ್​ಗೆ ಬೆಂಬಲ ಸೂಚಿಸಿದರು. ಪಾಕಿಸ್ತಾನ ಸೋತ ಖುಷಿಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್​ ಪಠಾಣ್ ಅವರು ಆಫ್ಘನ್​ ಆಟಗಾರ ಜತೆ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೊ ವೈರಲ್(Viral Video)​ ಆಗಿದೆ.

ಅಫ್ಘಾನಿಸ್ತಾನ ತಂಡದ ಆಟಗಾರರು ಪಾಕಿಸ್ತಾನ ವಿರುದ್ಧ ಐತಿಹಾಸಿಕ ಗೆಲುವಿನ ಸಂಭ್ರಮವನ್ನು ಮಾಡಲು ಮೈದಾನಕ್ಕೆ ಬರುತ್ತಿದ್ದ ವೇಳೆ ನೇರವಾಗಿ ಆಟಗಾರರ ಬಳಿ ಬಂದ ಇರ್ಫಾನ್​ ಪಠಾಣ್​ ಅವರು ಕುಣಿಯಲು ಆರಂಭಿಸಿದರು. ಅಲ್ಲದೆ ಆಫ್ಘನ್​ ಆಟಗಾರರು ಕುಣಿಯುವಂತೆ ಪ್ರೋತ್ಸಾಹಿಸಿದರು. ಈ ವೇಳೆ ರಶೀದ್​ ಖಾನ್​ ಅವರು ಇರ್ಫಾನ್ ಜತೆ ಹೆಜ್ಜೆ ಹಾಕಿದರು. ಬಳಿಕ ಇಬ್ಬರು ತಬ್ಬಿಕೊಂಡು ಧನ್ಯವಾದ ತಿಳಿಸಿದರು.

ಇದನ್ನೂ ಓದಿ ನಿತ್ಯ 8 ಕೆಜಿ ಮಟನ್​ ತಿನ್ನೋದು ಬಿಟ್ಟು ದೇಶದ ಬಗ್ಗೆ ಚಿಂತಿಸಿ; ಪಾಕ್​ ಮಾಜಿ ಆಟಗಾರನ ಆಕ್ರೋಶ

ಅದ್ಭುತ ಪ್ರದರ್ಶನ

ಸ್ಪರ್ಧಾತ್ಮಕ ಗುರಿಯನ್ನು ಪಡೆದಿದ್ದ ಅಫಘಾನಿಸ್ತಾನ ತಂಡದ ಬ್ಯಾಟರ್​ಗಳು ತಮ್ಮ ಅದ್ಭುತ ಬ್ಯಾಟಿಂಗ್ ಕೌಶಲವನ್ನು ಪ್ರದರ್ಶಿಸಿದರು. ಉತೃಷ್ಟ ತಂಡಗಳು ನೀಡುವ ಪ್ರದರ್ಶನದಂತಿತ್ತು ಆಫ್ಘನ್ ಆಟಗಾರರ ಆಟ. ಆರಂಭಿಕ ಜೋಡಿಯಾಗಿರುವ ರಹ್ಮನುಲ್ಲಾ ಗುರ್ಬಜ್​ (65) ಹಾಗೂ ಇಬ್ರಾಹಿಂ ಜದ್ರಾನ್​ (87) ಮೊದಲ ವಿಕೆಟ್​ಗೆ 130 ರನ್ ಬಾರಿಸಿ ಮಿಂಚಿದರು. ನಂತರದ ವಿಕೆಟ್​ಗೆ ಇನ್ನೂ 60 ರನ್ ಸೇರ್ಪಡೆಗೊಂಡಿತು.

ಮೂರನೇ ವಿಕೆಟ್​ಗೆ 96 ರನ್​ಗಳು ಸೇರ್ಪಡೆಗೊಂಡವು. ಮೂರನೇ ಕ್ರಮಾಂಕದಲ್ಲಿ ಆಡಿದ ರಹ್ಮತ್ ಶಾ (77) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೆ, ನಾಯಕ ಹಶ್ಮತುಲ್ಲಾ ಶಾಹಿದಿ 48 ರನ್ ಬಾರಿಸಿದರು. ಅಂದಹಾಗೆ ಮೊದಲ ಮೂವರು ಬ್ಯಾಟರ್​​ಗಳು ಅರ್ಧ ಶತಕ ಬಾರಿಸಿ ಮಿಂಚಿದರೆ, ಹಶ್ಮತುಲ್ಲಾ 2 ರನ್​ಗಳ ಕೊರತೆಯಿಂದ ಅರ್ಧ ಶತಕದ ಅವಕಾಶ ತಪ್ಪಿಸಿಕೊಂಡರು. ಇದು ಏಕ ದಿನ ಮಾದರಿಯಲ್ಲಿ ಅಫಘಾನಿಸ್ತಾನ ತಂಡದ ಅಮೋಘ ಪ್ರದರ್ಶನ ಎನಿಸಿಕೊಳ್ಳಲಿದೆ.

Exit mobile version