Site icon Vistara News

Chamari Athapaththu : ಏಷ್ಯಾ ಕಪ್​ನಲ್ಲಿ ಶತಕ ಬಾರಿಸಿ ವಿಶ್ವ ದಾಖಲೆ ಬರೆದ ಲಂಕಾದ ಮಹಿಳಾ ಕ್ರಿಕೆಟರ್​​

Chamari Athapaththu

ಬೆಂಗಳೂರು: ಶ್ರೀಲಂಕಾದ ಬ್ಯಾಟರ್​ ಚಾಮರಿ ಅಟ್ಟಪಟ್ಟು (Chamari Athapaththu) ಏಷ್ಯಾಕಪ್ ಇತಿಹಾಸದಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜುಲೈ 22ರಂದು ಶ್ರೀಲಂಕಾದ ರಣಗಿರಿ ಡಂಬುಲ್ಲಾ ಅಂತಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಲಂಕಾ ನಾಯಕಿ ಈ ಸಾಧನೆ ಮಾಡಿದ್ದಾರೆ. ಮೊದಲು ಬ್ಯಾಟ್ ಮಾಡಿದ ಲಂಕಾ ಪರ 69 ಎಸೆತಗಳಲ್ಲಿ 14 ಬೌಂಡರಿ ಮತ್ತು ಏಳು ಸಿಕ್ಸರ್​​ಗಳ ಸಮೇತ 119 ರನ್ ಗಳಿಸಿ ಔಟಾಗದೆ ಉಳಿದರು. ಈ ಮೂಲಕ ಮಹಿಳೆಯರ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಇತಿಹಾಸ ಬರೆದರು.

ವಿಶ್ಮಿ ಗುಣರತ್ನೆ ಅವರ ಆರಂಭಿಕ ವಿಕೆಟ್ ಕಳೆದುಕೊಂಡ ನಂತರ, ಚಾಮರಿ ಹರ್ಷಿತಾ ಸಮರವಿಕ್ರಮ ಅವರೊಂದಿಗೆ ಎರಡನೇ ವಿಕೆಟ್​​ಗೆ 64 ರನ್​​ಗಳ ಜೊತೆಯಾಟ ನೀಡಿದರು. ಚಾಮರಿ ಮತ್ತು ಅನುಷ್ಕಾ ಸಂಜೀವಿನಿ ಮೂರನೇ ವಿಕೆಟ್​​ಗೆ 115 ರನ್​ಗಳ ಜೊತೆಯಾಟವಾಡಿದರು. ಅನುಭವಿ ಆಟಗಾರ್ತಿ 35 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ಚಾಮರಿ ವಿಸ್ಫೋಟಕ ಆಟ

18ನೇ ಓವರ್​ ಬಳಿಕ ಚಾಮರಿ ಸ್ಫೋಟಕ ಬ್ಯಾಟಿಂಗ್ ಮಾಡಿದರು 19 ನೇ ಓವರ್ ಅನ್ನು ಬೌಂಡರಿಯೊಂದಿಗೆ ಪ್ರಾರಂಭಿಸಿದರು. ಶ್ರೀಲಂಕಾ ಇನಿಂಗ್ಸ್​​ನ ಕೊನೆಯ ಓವರ್​ಗೆ ಮೊದಲು ಅಟ್ಟಪಟ್ಟು 63 ಎಸೆತಗಳಲ್ಲಿ ಶತಕ ಪೂರ್ಣಗೊಳಿದರು. ವಿನ್ಫ್ರೈಡ್ ದುರೈಸಿಂಗಂ ಓವರ್​​ನ ಮೂರನೇ ಎಸೆತದಲ್ಲಿ, ಸಿಕ್ಸರ್ ಬಾರಿಸಿ ಪಂದ್ಯಾವಳಿಯ ಇತಿಹಾಸದಲ್ಲಿ ಇತಿಹಾಸ ನಿರ್ಮಿಸಿದರು.

ಇದನ್ನೂ ಓದಿ: Raghu Dixit : ಪ್ಯಾರಿಸ್​ ಒಲಿಂಪಿಕ್ಸ್​ಗೆ ಕನ್ನಡ ಹಾಡುಗಳ ಮೆರುಗು ; ರಘು ದೀಕ್ಷಿತ್ ತಂಡದಿಂದ ವಿಶೇಷ ಕಾರ್ಯಕ್ರಮ

ಅಂತಿಮವಾಗಿ ಶ್ರೀಲಂಕಾ 20 ಓವರ್​ಗೆ 4 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತು. 136 ಪಂದ್ಯಗಳಿಂದ 24.44ರ ಸರಾಸರಿಯಲ್ಲಿ 3153 ರನ್ ಗಳಿಸಿರುವ ಚಾಮರಿ ಟಿ20ಐನಲ್ಲಿ ಮೂರು ಶತಕ ಬಾರಿಸಿದ್ದಾರೆ. ಅವರ ಇತರ ಎರಡು ಶತಕಗಳು ಆಸ್ಟ್ರೇಲಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧ ಬಂದಿವೆ.

ಸುಜಿ ಬೇಟ್ಸ್, ಹರ್ಮನ್ಪ್ರೀತ್ ಕೌರ್, ಮೆಗ್ ಲ್ಯಾನಿಂಗ್, ಸ್ಮೃತಿ ಮಂದಾನ, ಸ್ಟೆಫಾನಿ ಟೇಲರ್ ಮತ್ತು ಸೋಫಿ ಡಿವೈನ್ ನಂತರ ಮಹಿಳಾ ಟಿ 20 ಐನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಟ್ಟಪಟ್ಟು ಏಳನೇ ಸ್ಥಾನದಲ್ಲಿದ್ದಾರೆ.

Exit mobile version