ಕೊಲಂಬೊ: ಆಸ್ಟ್ರೇಲಿಯಾದಲ್ಲಿ ಮುಕ್ತಾಯಗೊಂಡ ಟಿ20 ವಿಶ್ವ ಕಪ್ ಟೂರ್ನಿಯಲ್ಲಿ ಆಟಗಾರರ ಒಪ್ಪಂದದ ಹಲವು ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಚಾಮಿಕಾ ಕರುಣಾರತ್ನೆ ಅವರಿಗೆ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಮಂಡಳಿ ಒಂದು ವರ್ಷ ನಿಷೇಧ ವಿಧಿಸಿದೆ. ಆದರೆ ಚಾಮಿಕಾ ಕರುಣಾರತ್ನೆ ಯಾವ ಷರತ್ತನ್ನು ಉಲ್ಲಂಘಿಸಿದ್ದಾರೆ ಎಂಬುದನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಖಚಿತ ಪಡಿಸಿಲ್ಲ.
“ತನಿಖಾ ಸಮಿತಿಯ ಶಿಫಾರಸುಗಳ ನಂತರ, ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಾರ್ಯಕಾರಿ ಸಮಿತಿಯು ಎಲ್ಲ ಪ್ರಕಾರದ ಕ್ರಿಕೆಟ್‌ನಲ್ಲಿ ಚಾಮಿಕಾ ಕರುಣಾರತ್ನೆಗೆ ಭಾಗವಹಿಸದಂತೆ ಒಂದು ವರ್ಷದ ನಿಷೇಧವನ್ನು ಹೇರಿದೆ ಮತ್ತು ನಿಷೇಧವನ್ನು ಒಂದು ವರ್ಷ ಕಾಲ ಜಾರಿಯಲ್ಲಿಡಲಾಗುತ್ತದೆ” ಎಂದು ಶ್ರೀಲಂಕಾ ಕ್ರಿಕೆಟ್ ತಿಳಿಸಿದೆ. ಚಾಮಿಕಾ ಕರುಣಾರತ್ನೆ ಅವರು ಎಸಗಿರುವ ಉಲ್ಲಂಘನೆಗಳ ಗಂಭೀರತೆಯನ್ನು ಪರಿಗಣಿಸಿ ತನಿಖಾ ಸಮಿತಿಯು ತನ್ನ ವರದಿಯಲ್ಲಿ ಆಟಗಾರನಿಗೆ ಮುಂದಿನ ಉಲ್ಲಂಘನೆಗಳಿಂದ ದೂರವಿರುವಂತೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ | IND VS BANGLA | ಬಾಂಗ್ಲಾ ಸರಣಿಗೆ ಭಾರತ ತಂಡ ಪ್ರಕಟ; ರವೀಂದ್ರ ಜಡೇಜಾ ಅಲಭ್ಯ