ಕೋಲ್ಕೊತಾ: ಶನಿವಾರ ನಡೆದ ವಿಶ್ವಕಪ್ನ(ICC Cricket World Cup 2023) ಡಬಲ್ ಹೆಡರ್ನ ದ್ವಿತೀಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್(England vs Pakistan) ತಂಡ ಪಾಕಿಸ್ತಾನ ವಿರುದ್ಧ 93 ರನ್ಗಳ ಗೆಲುವು ಸಾಧಿಸುವ ಮೂಲಕ 2025ರಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ(ICC Champions Trophy 2025) ಅರ್ಹತೆ ಪಡೆಯಿತು. ಈ ಟೂರ್ನಿ ಪಾಕ್ ಆತಿಥ್ಯದಲ್ಲಿ ನಡೆಯಲಿದೆ.
ಹೊರಬೀಳುವ ಆತಂಕದಲ್ಲಿತ್ತು
ಕ್ರಿಕೆಟ್ ಜನಕರ ನಾಡು ಎಂದು ಕರೆಸಿಕೊಳ್ಳುವ ಇಂಗ್ಲೆಂಡ್ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ 2025ರಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಕಳೆದುಕೊಳ್ಳುವ ಆತಂಕದಲ್ಲಿತ್ತು. ಆದರೆ ಕಳೆದ ನೆದರ್ಲೆಂಡ್ಸ್ ವಿರುದ್ಧ ಪಂದ್ಯದಲ್ಲಿ ಗೆದ್ದು 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿ ಆಸೆ ಮತ್ತೆ ಚಿಗುರೊಡೆದಿತ್ತು. ಶನಿವಾರ ನಡೆದ ಪಾಕಿಸ್ತಾನ ವಿರುದ್ಧದ ಅಂತಿಮ ಪಂದ್ಯವನ್ನು ಇಂಗ್ಲೆಂಡ್ ಗೆದ್ದ ಕಾರಣ ಈ ಟಿಕೆಟ್ ಅಧಿಕೃತಗೊಂಡಿತು. ಇಂಗ್ಲೆಂಡ್ 7ನೇ ಸ್ಥಾನಿಯಾಗಿ ಈ ಅರ್ಹತೆ ಪಡೆಯಿತು.
ಇದನ್ನೂ ಓದಿ ICC World Cup 2023 : ಹೆಚ್ಚು ರನ್ ಬಿಟ್ಟುಕೊಟ್ಟವರಲ್ಲೂ ಪಾಕ್ ಬೌಲರ್ಗೇ ಮೊದಲ ಸ್ಥಾನ!
England had something to cheer about at the end of their disappointing #CWC23 campaign 👌#ENGvPAK pic.twitter.com/nBSixbItyf
— ICC Cricket World Cup (@cricketworldcup) November 11, 2023
ಅಗ್ರ 7 ತಂಡಗಳಿಗೆ ಅರ್ಹತೆ
ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆದುಕೊಳ್ಳಲಿವೆ. ಈ ಟೂರ್ನಿಯ ಅರ್ಹತಾ ಸುತ್ತನ್ನು ಐಸಿಸಿ ಸಮಿತಿ 2021ರಲ್ಲೇ ಅಂತ್ಯಗೊಳಿಸಿದೆ. ಐಸಿಸಿ ಮಾನದಂಡದ ಪ್ರಕಾರ ವಿಶ್ವಕಪ್‌ನಲ್ಲಿ ಅಗ್ರ 7ರೊಳಗೆ ಸ್ಥಾನ ಪಡೆದ ತಂಡಗಳು ಅರ್ಹತೆ ಗಿಟ್ಟಿಸಿಕೊಳ್ಳಲಿದೆ.
ಅರ್ಹತೆ ಪಡೆದ ತಂಡಗಳು
ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ.
2025 ಸ್ವರೂಪವನ್ನು ಬದಲಾಯಿಸುತ್ತದೆಯೇ?
ಟಿ 20 ವಿಶ್ವಕಪ್ ಎರಡು ವರ್ಷಗಳಿಗೊಮ್ಮೆ ನಡೆಯುತ್ತಿರುವುದರಿಂದ, 8 ತಂಡಗಳ ಐಸಿಟಿ ಟಿ20 ಕ್ರಿಕೆಟ್ ಟೈಮ್ಟೇಬಲ್ ಹೆಚ್ಚುತ್ತದೆ. 2024, 2026 ಮತ್ತು 2028ರಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಆದರೆ 50 ಓವರ್ಗಳ ಸ್ವರೂಪವು ಮೊದಲಿನಷ್ಟು ಜನಪ್ರಿಯವಾಗಿಲ್ಲ. ಕ್ರಿಕೆಟ್ ವಿಶ್ವಕಪ್ 2023ರಲ್ಲಿ ಅರ್ಧ ಖಾಲಿ ಕ್ರೀಡಾಂಗಣಗಳು ಈ ಮಾತಿಗೆ ಸಾಕಷ್ಟು ಪುರಾವೆಗಳನ್ನು ನೀಡಿವೆ.
ಆದಾಗ್ಯೂ ಮುಂದಿನ ಏಕದಿನ ವಿಶ್ವಕಪ್ 2027ರಲ್ಲಿ ನಡೆಯಲಿದೆ. ಐಸಿಸಿ ಮುಂದಿನ ವಾರ ಅಹಮದಾಬಾದ್ನಲ್ಲಿ ಸಭೆ ಸೇರಲಿದ್ದು, ಇದು ಚರ್ಚೆಯ ಭಾಗವಾಗಬಹುದು. ಆದಾಗ್ಯೂ, ಐಸಿಸಿ ಡಿಸ್ನಿ ಸ್ಟಾರ್ನ ವಿನಂತಿಯನ್ನು ಅನುಮೋದಿಸಿದರೆ, ಅದು ಆಟಗಾರರಲ್ಲಿ ಜನಪ್ರಿಯವಲ್ಲದ ಸ್ವರೂಪವನ್ನು ಕೊನೆಗೊಳಿಸುವ ಸಾಧ್ಯತೆಯಿದೆ.
ಹಿಂದಿನ ನಿಯಮ ಹೇಗಿತ್ತು?
ಆರಂಭದಲ್ಲಿ ಅಂದರೆ 2013 ಮತ್ತು 2017ರ ಸಾಲಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ಅರ್ಹತೆಯ ನಿಯಮಗಳು ಬೇರೆ ರೀತಿಯಲ್ಲಿತ್ತು. ಟೂರ್ನಿ ಆರಂಭದ ನಿಗಧಿತ ಅವಧಿಯ ಅಂತ್ಯಕ್ಕೆ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 8ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಅರ್ಹತೆ ಪಡೆಯುತ್ತಿದ್ದವು. ಆದರೆ ಈ ಬಾರಿ ಮಾತ್ರ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯನ್ನು ಆಧರಿಸಿ ಅರ್ಹತೆಯನ್ನು ನೀಡಲಾಗಿದೆ. ಈ ಬಾರಿಯ ವಿಶ್ವಕಪ್ಗೆ ಅರ್ಹತೆ ಪಡೆಯದ ವಿಂಡೀಸ್ ಈ ಟೂರ್ನಿಯನ್ನು ಆಡುವ ಅವಕಾಶದಿಂದ ವಂಚಿತವಾಗಿದೆ. ಒಂದೊಮ್ಮೆ ಈ ಹಿಂದಿನ ಶ್ರೇಯಾಂಕ ನಿಯಮ ಜಾರಿಯಲ್ಲಿ ಇರುತ್ತಿದ್ದರೆ ವಿಂಡೀಸ್ಗೂ ಅವಕಾಶ ಸಿಗುವ ಸಾಧ್ಯತೆ ಇರುತ್ತಿತ್ತು.