Site icon Vistara News

MUMBAI INDIANS | ಮುಂಬಯಿ ಇಂಡಿಯನ್ಸ್ ಕೇಂದ್ರ ತಂಡಕ್ಕೆ ಜಯವರ್ಧನೆ, ಜಹೀರ್‌ ಖಾನ್‌

mumbai indians

ಮುಂಬಯಿ: ಜಾಗತಿಕ ಕ್ರಿಕೆಟ್‌ ಅಭಿವೃದ್ಧಿ ಯೋಜನೆಯಡಿ ಐಪಿಎಲ್‌ನ ಮುಂಬಯಿ ಇಂಡಿಯನ್ಸ್‌ ಫ್ರಾಂಚೈಸಿ (MUMBAI INDIANS) ಕೇಂದ್ರ ತಂಡವನ್ನು ರಚಿಸಿದ್ದು, ಭಾರತ ತಂಡದ ಮಾಜಿ ವೇಗದ ಬೌಲರ್‌ ಜಹೀರ್‌ ಖಾನ್‌ ಹಾಗೂ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲ ಜಯವರ್ಧನೆ ಅವರನ್ನು ನೇಮಕ ಮಾಡಿದೆ. ಜಯರ್ಧನೆ ಅವರನ್ನು ಗ್ಲೋಬಲ್‌ ಹೆಡ್‌ ಫರ್ಫಾಮೆನ್ಸ್‌ (ಜಾಗತಿಕ ಪ್ರದರ್ಶನ) ಜವಾಬ್ದಾರಿ ನೀಡಲಾಗಿದ್ದು, ಜಹೀರ್‌ ಅವರಿಗೆ ಗ್ಲೋಬಲ್‌ ಹೆಡ್‌ ಆಫ್‌ ಕ್ರಿಕೆಟ್‌ ಡೆವಲಪ್‌ಮೆಂಟ್‌ (ಜಾಗತಿಕ ಕ್ರಿಕೆಟ್‌ ಅಭಿವೃದ್ಧಿ) ಹುದ್ದೆಯನ್ನು ನೀಡಲಾಗಿದೆ.

ಐಪಿಎಲ್‌ನಲ್ಲಿ ಮುಂಬಯಿ ಇಂಡಿಯನ್ಸ್ ತಂಡವನ್ನು ಹೊಂದಿರುವ ಮುಂಬಯಿ ಫ್ರಾಂಚೈಸಿ ಯುಎಇನ ಐಎಲ್‌ಟಿ೨೦ಯಲ್ಲಿ ಎಮ್‌ಐ ಎಮಿರೇಟ್ಸ್‌ ಎಂಬ ತಂಡ ಹಾಗೂ ಕ್ರಿಕೆಟ್‌ ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ಲೀಗ್‌ನಲ್ಲಿ ಎಮ್‌ಐ ಕೇಪ್‌ಟೌನ್‌ ಎಂಬ ತಂಡವನ್ನು ಖರೀದಿ ಮಾಡಿದೆ. ಒಟ್ಟಾರೆಯಾಗಿ ಮೂರು ತಂಡಗಳನ್ನು ಹೊಂದಿರುವ ಫ್ರಾಂಚೈಸಿ, ಅವುಗಳ ನಡುವಿನ ಸಹಯೋಗಕ್ಕಾಗಿ ಜಹೀರ್‌ ಹಾಗೂ ಜಯವರ್ಧನೆ ಅವರನ್ನು ನೇಮಕ ಮಾಡಿಕೊಂಡಿದೆ.

ಜಯವರ್ಧನೆ ಹಾಗೂ ಜಹೀರ್‌ ಖಾನ್‌ ಹಲವು ವರ್ಷಗಳಿಂದ ಮುಂಬಯಿ ಇಂಡಿಯನ್ಸ್‌ ತಂಡದ ಭಾಗವಾಗಿದ್ದಾರೆ. ಇದೀಗ ಅವರಿಬ್ಬರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ.

ಮುಂಬಯಿ ಇಂಡಿಯನ್ಸ್‌ನ ಜಾಗತಿಕ ಪ್ರದರ್ಶನದ ಮುಖ್ಯಸ್ಥರಾಗಿರುವ ಜಯವರ್ಧನೆ ಅವರು ಮುಂಬಯಿ ಇಂಡಿಯನ್ಸ್‌ನ ಗ್ರೂಪ್‌ನ ಜಾಗತಿಕ ಕ್ರಿಕೆಟ್‌ ಕಾರ್ಯಾಚರಣೆಗಳನ್ನು ನೋಡಿಕೊಳ್ಳಲಿದ್ದಾರೆ. ಕ್ರಿಕೆಟ್‌ ಕಾರ್ಯತಂತ್ರದ ರೂಪಿಸುವುದು, ಸಮಗ್ರ ಜಾಗತಿಕ ‘ಉನ್ನತ ಕಾರ್ಯಕ್ಷಮತೆಯ ಪರಿಸರ ವ್ಯವಸ್ಥೆ ನಿರ್ಮಿಸುವುದು ಮತ್ತು ಪ್ರತಿ ತಂಡದ ತರಬೇತಿ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾರೆ. ಅಂತೆಯೇ ತಂಡದ ಹೆಡ್‌ ಕೋಚ್‌ಗಳ ಜತೆ ಸಮನ್ವಯ ಸೃಷ್ಟಿಸುವ ಕಾರ್ಯವನ್ನು ಅವರು ಮಾಡಲಿದ್ದಾರೆ.

ಮುಂಬಯಿ ಇಂಡಿಯನ್ಸ್ ತಂಡ ಜಾಗತಿಕ ಕ್ರಿಕೆಟ್‌ ಅಭಿವೃದ್ಧಿಯ ಮುಖ್ಯಸ್ಥರಾಗಿರುವ ಜಹೀರ್ ಖಾನ್ ಆಟಗಾರರ ಅಭಿವೃದ್ಧಿಗೆ ನೋಡಿಕೊಳ್ಳಲಿದ್ದಾರೆ. ಜಗತ್ತಿನಾದ್ಯಂತ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಪೋಷಿಸುವುದು ಅವರ ಕೆಲಸದ ಪ್ರಮುಖ ಭಾಗವಾಗಿದೆ. ಪ್ರತಿಯೊಂದು ಭೂಪ್ರದೇಶವು ತನ್ನದೇ ಆದ ವಿಶಿಷ್ಟ ಸವಾಲುಗಳನ್ನು ಹೊಂದಿದೆ, ಸವಾಲುಗಳನ್ನು ನಿಭಾಯಿಸಲು ಜಹೀರ್ ಖಾನ್ ಪ್ರಪಂಚದಾದ್ಯಂತದ ಎಂಐ ತಂಡಗಳಿಗೆ ಸಹಾಯ ಮಾಡುತ್ತಾರೆ.

ಇದನ್ನೂ ಓದಿ | Cricket League | ಯುಎಇ ಮತ್ತು ದಕ್ಷಿಣ ಆಫ್ರಿಕಾದ ಲೀಗ್‌ಗಳಲ್ಲಿ ತಂಡ ಖರೀದಿಸಿದ ಮುಂಬಯಿ ಇಂಡಿಯನ್ಸ್

Exit mobile version