ಲಂಡನ್ : ದೀಪ್ತಿ ಶರ್ಮ ಮಾಡಿರುವ ನಾನ್‌ಸ್ಟ್ರೈಕ್ ರನ್‌ಔಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದ ವಿಚಾರದ ಬಗ್ಗೆ, ಇಂಗ್ಲೆಂಡ್ ತಂಡದ ಬ್ಯಾಟರ್ ಚಾರ್ಲಿ ಡೀನ್ ಕೂಡ ಮಾತನಾಡಿದ್ದು, ಚೆಂಡೆಸೆಯುವ ಮೊದಲೇ ಕ್ರೀಸ್ ಬಿಟ್ಟು ಮುಂದಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿವಾದಕ್ಕೆ ತಮ್ಮ ಧ್ವನಿಯನ್ನೂ ಸೇರಿಸಿದ್ದಾರೆ.
ಕಳೆದ ಶನಿವಾರ ನಡೆದ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ ದೀಪ್ತಿ ಶರ್ಮ ಅವರು ಚಾರ್ಲಿ ಡೀನ್ ಅವರನ್ನು ನಾನ್‌ಸ್ಟ್ರೈಕ್ ಎಂಡ್‌ನಲ್ಲಿ ರನ್‌ಔಟ್ ಮಾಡಿದ್ದರು. ಆ ಬಳಿಕ ವಿಚಾರ ಜೋರು ಚರ್ಚೆಗೆ ಬಂದಿತ್ತು. ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮಾಜಿ ಹಾಗೂ ಹಾಲಿ ಆಟಗಾರರ ನಡುವೆ ಪರ-ವಿರೋಧ ಅಭಿಪ್ರಾಯಗಳೂ ವ್ಯಕ್ತಗೊಂಡಿದ್ದವು. ಇದೀಗ ಸ್ವತಃ ಚಾರ್ಲಿ ಅವರೇ ಈ ಬಗ್ಗೆ ಮಾತನಾಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು “ಈ ಬೇಸಿಗೆ ಋತು ಆಸಕ್ತಿಕರ ಸಂಗತಿಯೊಂದಿಗೆ ಕೊನೆಯಾಗಿದೆ. ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ಅಡುವುದೇ ಒಂದು ಗೌರವ. ಆದರೆ, ಇನ್ನು ಮುಂದೆ ನಾನು ಯಾವತ್ತೂ ಕ್ರಿಸ್ ಬಿಟ್ಟು ಮುಂದಕ್ಕೆ ಹೋಗುವುದಿಲ್ಲ,” ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ | Deepti Sharma | ದೀಪ್ತಿ ಶರ್ಮ ಬೆಂಬಲಕ್ಕೆ ನಿಂತ ಕ್ರಿಕೆಟ್ ನಿಯಮ ರೂಪಿಸುವ ಎಮ್‌ಸಿಸಿ ಕ್ಲಬ್