Site icon Vistara News

WTC FInal : ಚೀಟರ್​, ಚೀಟರ್​… ಗಿಲ್​ಗೆ ಔಟ್​ ನೀಡಿದ ಅಂಪೈರ್​ ವಿರುದ್ಧ ಅಭಿಮಾನಿಗಳ ಕಿಡಿ

Shubhman GIll Wicket

#image_title

ಲಂಡನ್​: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ ಪಂದ್ಯ ಅಂತಿಮ ಘಟಕ್ಕೆ ತಲುಪಿದೆ. ಪಂದ್ಯ ಬಹುತೇಕ ಪ್ಯಾಟ್​ ಕಮಿನ್ಸ್​ ನೇತೃತ್ವದ ಆಸ್ಟ್ರೇಲಿಯಾ ತಂಡದ ಬಿಗಿ ಹಿಡಿತದಲ್ಲಿದೆ. ಆದಾಗ್ಯೂ ಪಂದ್ಯದ ಫಲಿತಾಂಶದ ಬಗ್ಗೆ ಕುತೂಹಲ ಮೂಡಿದೆ. ಇವೆಲ್ಲದರ ನಡುವೆ ಭಾರತ ತಂಡದ ಎರಡನೇ ಇನಿಂಗ್ಸ್​ ಬ್ಯಾಟಿಂಗ್ ವೇಳೆ ಥರ್ಡ್​ ಅಂಪೈರ್​ ನೀಡಿದ ತೀರ್ಪೊಂದು ವಿವಾದಕ್ಕೆ ಕಾರಣವಾಗಿದೆ. ಭಾರತೀಯ ಕ್ರಿಕೆಟ್​ ಅಭಿಮಾನಿಗಳಂತೂ ಇದು ಮೋಸದಾಟ ಎಂಬುದಾಗಿ ದೂರಿದ್ದಾರೆ.

444 ರನ್​ಗಳ ಗುರಿ ಬೆನ್ನಟ್ಟಿದ್ದ ಟೀಮ್ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು ಉತ್ತಮವಾಗಿ ಆರಂಭಿಸಿತು. ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಇಬ್ಬರೂ ಉತ್ತಮ ಆರಂಭ ತಂದುಕೊಟ್ಟರು. ಆದಾಗ್ಯೂ ಸ್ಕಾಟ್ ಬೋಲ್ಯಾಂಡ್ ಮತ್ತೊಮ್ಮೆ ಯಶ್ಸಸ್ಸು ಸಾಧಿಸುವ ಮೂಲಕ ಶುಭ್​ಮನ್ ಗಿಲ್​ ಅವರನ್ನು ಔಟ್​ ಮಾಡಿದರು.19 ಎಸೆತಕ್ಕೆ 18 ರನ್​ ಬಾರಿಸಿದ್ದ ಅವರು ಕ್ಯಾಮೆರಾನ್​ ಗ್ರೀನ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

ಇನಿಂಗ್ಸ್​ನ ಎಂಟನೇ ಓವರ್​ನ ಮೊದಲ ಎಸೆತದಲ್ಲಿ ಚೆಂಡನ್ನು ನೇರವಾಗಿ ಕ್ಯಾಮರೂನ್ ಗ್ರೀನ್ ಅವರ ಕೈಗೆ ಸೇರಿತು. ಆದರೆ ಡೈವ್​ ಮಾಡಿ ಅವರು ಹಿಡಿದ ಕ್ಯಾಚ್ ಅನುಮಾನಾಸ್ಪಾದವಾಗಿತ್ತು. ಹೀಗಾಗಿ ಫೀಲ್ಡ್​ ಅಂಪೈರ್​ಗಳು ಟಿವಿ ಅಂಪೈರ್​ಗಳಿಗೆ ನಿರ್ಧಾರ ಪ್ರಕಟಿಸುವಂತೆ ಕೋರಿದರು. ಮೊದಲೆರಡು ಕೋನಗಳಲ್ಲಿ ಪರೀಕ್ಷಿಸಿದಾಗ ಚೆಂಡು ನೆಲಕ್ಕೆ ತಗುಲಿದಂತೆ ಕಂಡಿತು. ಹೀಗಾಗಿ ಭಾರತೀಯ ಪ್ರೇಮಿಗಳು ಸಂಭ್ರಮ ಪಟ್ಟರು. ಆದರೆ, ಇನ್ನೊಂದು ಕೋನದಲ್ಲಿ ನೋಡುವಾಗ ಚೆಂಡಿನ ಕೆಳಗೆ ಬೆರಳಿದ್ದಂತೆ ಕಂಡಿತು. ಆದರೆ, ಮೂರನೇ ಅಂಪೈರ್​ ಔಟ್​ ತೀರ್ಪು ನೀಡಿದರು.

ಮೂರನೇ ಅಂಪೈರ್ ತೀರ್ಮಾನಕ್ಕೆ ನಾಯಕ ರೋಹಿತ್​ ಶರ್ಮಾ ಅವರು ಸ್ಥಳದಲ್ಲೇ ಅಸಮಾಧಾನ ವ್ಯಕ್ತಪಡಿಸಿದರು. ಇದು ಮುಂದುವರಿದರು ಸಾಮಾಜಿಕ ಜಾಲ ತಾಣಗಳಲ್ಲಿ ಇದರ ಕುರಿತು ಭರ್ಜರಿ ಚರ್ಚೆಗಳು ಆರಂಭಗೊಂಡವು. ಭಾರತೀಯ ಪ್ರೇಮಿಗಳಂತೂ ಇದು ಮೋಸದಾಟ ಎಂಬುದಾಗಿ ಜರೆದರು. ಅಂಪೈರ್​ಗಳು ಆಸ್ಟ್ರೇಲಿಯಾ ಪರವಾಗಿ ಅನವಶ್ಯಕ ತೀರ್ಪು ನೀಡಿದ್ದಾರೆ ಎಂಬುದಾಗಿ ಅವರು ಆರೋಪಿಸಿದರು.

ಇದನ್ನೂ ಓದಿ : WTC Final 2023 : ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ರೋಹಿತ್​ ಶರ್ಮಾ

ಇಬ್ಬರೂ ಆರಂಭಿಕ ಆಟಗಾರರು ಇನ್ನಿಂಗ್ಸ್​​ಗೆ ಸಕಾರಾತ್ಮಕ ಆರಂಭ ನೀಡಿದ್ದರಿಂದ ಈ ಔಟ್ ಭಾರತಕ್ಕೆ ದೊಡ್ಡ ಹಿನ್ನಡೆ ಉಂಟು ಮಾಡಿತು ದಿ ಓವಲ್​ನಲ್ಲಿ ಎದುರಾದ 444 ರನ್​ಗಳ ಚೇಸಿಂಗ್​​ನಲ್ಲಿ ರೋಹಿತ್ ಅಜೇಯ 22 ರನ್ ಗಳಿಸಿದರು .

ಕುತೂಹಲಕಾರಿ ಸಂಗತಿಯೆಂದರೆ, ಬೋಲ್ಯಾಂಡ್ ಮೊದಲ ಇನ್ನಿಂಗ್ಸ್​ನಲ್ಲಿ ಗಿಲ್ ಅವರನ್ನು ಔಟ್ ಮಾಡಿದ್ದರು. ಆಫ್-ಸ್ಟಂಪ್​​ನ ಹೊರಗೆ ಎಸೆದ ಚೆಂಡನ್ನು ಮುಟ್ಟಲು ಹೋಗಿ ಗಿಲ್​ ವಿಕೆಟ್​ ಒಪ್ಪಿಸಬೇಕಾಯಿತು.

Exit mobile version