ಹೈದರಾಬಾದ್: 12 ಲಕ್ಷ ರೂ. ಎಲೆಕ್ಟ್ರಾನಿಕ್ಸ್ ಚೈನ್ ವಂಚಿಸಿದ(Cheating Case) ಆರೋಪದ ಮೇಲೆ ಮಾಜಿ ರಣಜಿ ಕ್ರಿಕೆಟಿಗ ನಾಗರಾಜು ಬುಡುಮುರು ಅವರನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಮಾಜಿ ರಣಜಿ ಆಟಗಾರನಾಗಿರುವ ನಾಗರಾಜು ಬುಡುಮುರು(Nagraju Budumuru) ಅವರು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಯ(CM YS Jagan Mohan Reddy) ಹೆಸರನ್ನು ದುರುಪಯೋಗಪಡಿಸಿ 60 ಕಂಪೆನಿಗಳಿಗೆ 3 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ, ಬುಡುಮುರು ಅವರು ನಗರದ ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರ ಉದ್ಯೋಗಿಯೊಬ್ಬರನ್ನು ಕರೆಸಿಕೊಂಡು ಜಗನ್ ಮೋಹನ್ ರೆಡ್ಡಿಯ ಸಹಾಯಕನಂತೆ ನಟಿಸಿ, ರಾಜ್ಯದ ಉದಯೋನ್ಮುಖ ಕ್ರಿಕೆಟಿಗರಿಗೆ ಪ್ರೋತ್ಸಾಹಿಸುವ ನೆಪದಲ್ಲಿ ಇಲ್ಲಿನ ಕಾರ್ಪೊರೇಟ್ ಒಬ್ಬರ ಬಳಿ ಹಣ ಪಡೆದು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಆರೋಪಿ ಬುಡುಮುರು ಅವರಿಂದ ಸುಮಾರು 7.6 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.