Site icon Vistara News

MS Dhoni : ಭಾರತ- ಆಸ್ಟ್ರೇಲಿಯಾ ಪಂದ್ಯ ವೇಳೆ ಮಾಜಿ ನಾಯಕ ಧೋನಿಗೆ ಗೌರವ

MS Dhoni

ಚೆನ್ನೈ : ಐಸಿಸಿ ಏಕದಿನ ವಿಶ್ವಕಪ್ 2023ರ 5ನೇ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿವೆ. ವಿಶ್ವಕಪ್ನ ಜ್ವರವು ಪ್ರತಿದಿನ ಹೊಸ ಎತ್ತರವನ್ನು ತಲುಪುತ್ತಿದ್ದಂತೆ, ಪಂದ್ಯಾವಳಿಯ ಸಂಭ್ರಮದ ಅಲೆ ಚೆನ್ನೈ ತಲುಪಿದೆ. ಏತನ್ಮಧ್ಯೆ ಚೆನ್ನೈನಲ್ಲಿ ನಡೆದ ಪಂದ್ಯದ ವೇಳೆ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ (MS Dhoni) ವಿಶೇಷ ಗೌರವ ಲಭಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಚೆನ್ನೈನ ಚೆಪಾಕ್​ನಲ್ಲಿ ಧೋನಿಯ ದೊಡ್ಡ ಪೋಸ್ಟರ್​​ ಕಾಣಿಸಿಕೊಂಡಿತ್ತು. ಚೆನ್ನೈನ ಪೋಸ್ಟರ್ ಬಾಯ್ ಎಂದು ಪರಿಗಣಿಸಲ್ಪಟ್ಟಿರುವ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾದರೂ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ.

ಇದನ್ನೂ ಓದಿ : ICC World Cup 2023 : ಸಚಿನ್ ತೆಂಡೂಲ್ಕರ್​ ದಾಖಲೆ ಮುರಿದ ಡೇವಿಡ್​ ವಾರ್ನರ್​, ಏನಿದು ರೆಕಾರ್ಡ್​?

ಮಹೇಂದ್ರ ಸಿಂಗ್ ಧೋನಿ ಜಾರ್ಖಂಡ್​ನವರಾಗಿದ್ದರೂ ಅವರಿಗೆ ಅತಿ ಹೆಚ್ಚು ಅಭಿಮಾನಿಗಳು ಇರುವುದು ತಮಿಳುನಾಡಿನಲ್ಲಿ. ಅದಕ್ಕೆ ಕಾರಣವಾಗಿದ್ದು ಅವರ ಚೆನ್ನೈ ಸೂಪರ್ ಕಿಂಗ್ಸ್​ ಜತೆಗಿನ ಪಯಣ. ಅವರು ಆ ಫ್ರಾಂಚೈಸಿ ಸೇರಿಕೊಂಡು ನಾಯಕತ್ವ ವಹಿಸಿಕೊಂಡ ಬಳಿಕ ದಾಖಲೆಯ ಐದು ಪ್ರಸ್ತಿಗಳನ್ನು ಗೆದ್ದಿದೆ. ಹೀಗಾಗಿ ಅವರಿಗೆ ಚೆನ್ನೈ ನಗರ ಸೇರಿದಂತೆ ಆ ರಾಜ್ಯದ ಎಲ್ಲೆಡೆ ಅಪಾರ ಅಭಿಮಾನಿಗಳು ಇದ್ದಾರೆ.

ಚೆನ್ನೈ ಮೈದಾನದಲ್ಲಿ ಸೂಪರ್​ ಕಿಂಗ್ಸ್ ಜತೆ ಪಂದ್ಯ ನಡೆಯುವ ವೇಳೆಯಲ್ಲಂತೂ ಧೋನಿ ಫ್ಯಾನ್ಸ್​ಗಳದ್ದೇ ಅಬ್ಬರ ಜಾಸ್ತಿ ಇರುತ್ತದೆ. ಧೋನಿಯೂ ಅದಕ್ಕೆ ಪೂರಕವಾಗಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಹಲವಾರು ವಿನ್ನಿಂಗ್ ಶಾಟ್​ಗಳು ಹಾಗೂ ಬೌಂಡರಿ ಮತ್ತು ಸಿಕ್ಸರ್​ಗಳ ಜತೆಗೆ ಅವರಿಗೆ ಖುಷಿ ಕೊಟ್ಟಿದ್ದಾರೆ.

199 ರನ್ ಬಾರಿಸಿದ ಆಸ್ಟ್ರೇಲಿಯಾ

ಚೆನ್ನೈ : ಭಾರತದ ಸ್ಪಿನ್ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ (Ind vs Aus) ವಿಶ್ವ ಕಪ್​ನ ತನ್ನ ಮೊದಲ ಪಂದ್ಯದಲ್ಲಿ 199 ರನ್ ಗಳಿಸಿದೆ. ಹೀಗಾಗಿ ಭಾರತಕ್ಕೆ 200 ರನ್​ಗಳ ಸುಲಭ ಗೆಲುವಿನ ಗುರಿ ಲಭಿಸಿದೆ. ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ಬಳಗ ಉತ್ತಮ ಆರಂಭ ಪಡೆದ ಹೊರತಾಗಿಯೂ ನಂತರ ಸತತವಾಗಿ ವಿಕೆಟ್​ ಕಳೆದಕೊಂಡು ಸಾಧಾರಣ ಮೊತ್ತಕ್ಕೆ ಇನಿಂಗ್ಸ್ ಮುಗಿಸಿತು. ಭಾರತದ ಸ್ಪಿನ್ನರ್​ಗಳಾದ ರವೀಂದ್ರ ಜಡೇಜಾ 3 ವಿಕೆಟ್, ಬುಮ್ರಾ ಹಾಗೂ ಕುಲ್ದೀಪ್​ ತಲಾ 2 ವಿಕೆಟ್​ ಕಬಳಿಸುವ ಮೂಲಕ ಆಸ್ಟ್ರೇಲಿಯಾದ ಬ್ಯಾಟಿಂಗ್ ಶಕ್ತಿಯನ್ನು ಕುಗ್ಗಿಸಿದರು.

Exit mobile version