ದುಬೈ: ಮುಂದಿನ ಆವೃತ್ತಿಯ ಐಪಿಎಲ್(IPL 2024) ಟೂರ್ನಿಗಾಗಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡ ಬಲಿಷ್ಠ ತಂಡವನ್ನು ಕಟ್ಟಿದೆ. ಮಂಗಳವಾರ ನಡೆದಿದ್ದ ಆಟಗಾರರ ಮಿನಿ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ಸಿಯಾಗಿದೆ.
ಕಳೆದ ಆವೃತ್ತಿಯಲ್ಲಿ ಯಾವುದೇ ಸ್ಟಾರ್ ಬೌಲರ್ಗಳನ್ನು ಒಳಗೊಳ್ಳದೆ ಬಹುತೇಕ ಅನ್ಕ್ಯಾಪ್ಡ್ ಬೌಲರ್ಗಳನ್ನೇ ಬಳಸಿಕೊಂಡು ಚಾಂಪಿಯನ್ ಆಗಿದ್ದ ಧೋನಿ ಪಡೆ ಈ ಬಾರಿ ಬಲಿಷ್ಠ ತಂಡವನ್ನು ರೂಪಿಸಿದ್ದು ಮುಂದಿನ ಆವೃತ್ತಿಯಲ್ಲಿಯೂ ಕಪ್ ತಮ್ಮ ಬಳಿಯೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಅಚ್ಚರಿ ಎಂದರೆ ಚೆನ್ನೈ ತಂಡದಲ್ಲಿ ಬಹುತೇಕ ನ್ಯೂಜಿಲ್ಯಾಂಡ್ ತಂಡದ ಆಟಗಾರರೇ ಕಾಣಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ನೆಟ್ಟಿಗರು ಸಿಎಸ್ಕೆಗೆ ಹೊಸ ನಾಮಕರಣ ಮಾಡಿದ್ದಾರೆ
ಚೆನ್ನೈ ಸೂಪರ್ ಕಿವೀಸ್…
ಚೆನ್ನೈ ತಂಡದಲ್ಲಿ ಒಟ್ಟು ನಾಲ್ಕು ಆಟಗಾರರು ನ್ಯೂಜಿಲ್ಯಾಂಡ್ ತಂಡದವರಾಗಿದ್ದಾರೆ. ಇದೇ ಕಾರಣಕ್ಕೆ ಕ್ರಿಕೆಟ್ ಅಭಿಮಾನಿಗಳು ಚೆನ್ನೈ ಸೂಪರ್ ಕಿಂಗ್ಸ್ ಬದಲು ಚೆನ್ನೈ ಸೂಪರ್ ಕಿವೀಸ್ ಎಂದು ಹೊಸ ಹೆಸರಿಟ್ಟಿದ್ದಾರೆ. ಅಲ್ಲದೆ ಕಿವೀಸ್ ಆಟಗಾರರ ಫೋಟೊವನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಇದನ್ನೂ ಓದಿ IPL 2024: ಹರಾಜಿನಲ್ಲಿ ಅನ್ಸೋಲ್ಡ್ ಆದ ಆಟಗಾರರ ಪಟ್ಟಿ; ಇನ್ನೂ ಇದೆ ಅವಕಾಶ!
Kiwi Permutations! 🥳🦁 pic.twitter.com/e07VMTouoN
— Chennai Super Kings (@ChennaiIPL) December 20, 2023
ಮಿಚೆಲ್ ಸ್ಯಾಂಟ್ನರ್ ಮತ್ತು ಡೆವೋನ್ ಕಾನ್ವೆ ಅವರನ್ನು ಚೆನ್ನೈ ತಂಡ ತನ್ನ ಬಳಿಯೇ ಉಳಿಸಿಕೊಂಡಿತ್ತು. ಈ ಬಾರಿಯ ಹರಾಜಿನಲ್ಲಿ ರಚಿನ್ ರವೀಂದ್ರ ಮತ್ತು ಡ್ಯಾರಿಲ್ ಮಿಚೆಲ್ ಅವರನ್ನು ಖರೀದಿ ಮಾಡಿದೆ. ಹೀಗಾಗಿ ಕಿವೀಸ್ನ ನಾಲ್ಕು ಆಟಗಾರರು ಈ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ತಂಡದಲ್ಲಿದ್ದ ಶಾರ್ದೂಲ್ ಠಾಕೂರ್ ಅವರು ಮತ್ತೆ ಚೆನ್ನೈ ಸೇರಿದ್ದಾರೆ.
Chennai's Super Kiwis 💛🇳🇿
— Junaid Khan (@JunaidKhanation) December 19, 2023
Devon Conway
Daryl Mitchell
Rachin Ravindra
Mitchell Santner pic.twitter.com/0vxJ5XBpfq
ಸಿಎಸ್ಕೆ ಹರಾಜಿನಲ್ಲಿ ಖರೀದಿಸಿದ ಆಟಗಾರರು:
ರಚಿನ್ ರವೀಂದ್ರ- 1.80 ಕೋಟಿ (ಮೂಲ ಬೆಲೆ 50 ಲಕ್ಷ ರೂ.)
ಶಾರ್ದೂಲ್ ಠಾಕೂರ್- 4 ಕೋಟಿ (ಮೂಲ ಬೆಲೆ 2 ಕೋಟಿ ರೂ.)
ಡೇರಿಲ್ ಮಿಚೆಲ್- 14 ಕೋಟಿ (ಮೂಲ ಬೆಲೆ 1 ಕೋಟಿ ರೂ.)
ಸಮೀರ್ ರಿಝ್ವಿ- 8.40 ಕೋಟಿ (ಮೂಲ ಬೆಲೆ 20 ಲಕ್ಷ ರೂ.)
ಮುಸ್ತಫಿಜುರ್ ರೆಹಮಾನ್- 2 ಕೋಟಿ (ಮೂಲ ಬೆಲೆ 2 ಕೋಟಿ ರೂ.)
ಅವಿನಾಶ್- 20 ಲಕ್ಷ (ಮೂಲ ಬೆಲೆ 20 ಲಕ್ಷ ರೂ.)
ಚೆನ್ನೈ ತಂಡ
ಎಂ.ಎಸ್ ಧೋನಿ (ನಾಯಕ), ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶೇಕ್ ರಶೀದ್, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಮೊಯೀನ್ ಅಲಿ, ಶಿವಂ ದುಬೆ, ನಿಶಾಂತ್ ಸಿಂಧು, ಅಜಯ್ ಮಂಡಲ್, ರಾಜವರ್ಧನ್ ಹಂಗರ್ಗೇಕರ್, ದೀಪಕ್ ಚಹರ್, ಮಹೇಶ್ ದೀಕ್ಷಾನಾ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ಮಥೀಶಾ ಪತಿರಾನಾ, ಶಾರ್ದೂಲ್ ಠಾಕೂರ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಸಮೀರ್ ರಿಜ್ವಿ.