ನ್ಯೂಯಾರ್ಕ್ : ಅಮೆರಿಕದ ಉದಯೋನ್ಮುಖ ಚೆಸ್ ಆಟಗಾರರೊಬ್ಬರು ವಿಶ್ವ ನಂಬರ್ ಒನ್ ಆಟಗಾರನ ವಿರುದ್ಧದ ಪಂದ್ಯ ಗೆಲ್ಲುವುದಕ್ಕೆ ಸೆಕ್ಸ್ ಟಾಯ್ ಬಳಸಿದ ಆರೋಪ ಎದುರಿಸಿದ್ದಾರೆ. ಆದರೆ, ಅದನ್ನವರು ನಿರಾಕರಿಸಿದ್ದು ನಾನು ಪ್ರಾಮಾಣಿಕ ಎಂಬುದನ್ನು ಸಾಬೀತುಪಡಿಸಲು ಬೆತ್ತಲಾಗಲೂ ಸಿದ್ಧ ಎಂದು ಹೇಳಿಕೊಂಡಿದ್ದಾರೆ.
೧೯ ವರ್ಷದ ಹ್ಯಾನ್ಸ್ ನೀಮನ್ ಈ ರೀತಿಯ ವಿಲಕ್ಷಣ ಆರೋಪಕ್ಕೆ ಗುರಿಯಾದವರು. ಇತ್ತೀಚೆಗೆ ಸಿಂಕ್‌ಫೀಲ್ಡ್ ಕಪ್ ಚೆಸ್ ಟೂರ್ನಮೆಂಟ್‌ನಲ್ಲಿ ಅವರು ವಿಶ್ವ ನಂಬರ್ ಒನ್ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಜಯ ಸಾಧಿಸಿದ್ದರು. ಆ ಪಂದ್ಯದಲ್ಲಿ ಅವರು ಗೆಲುವಿಗೆ ಅನುಕೂಲವಾಗುವಂತೆ ಸೆಕ್ಸ್ ಟಾಯ್ಸ್ ಬಳಸಿದ್ದಾರೆ ಎಂಬುದು ಆರೋಪವಾಗಿದೆ.
ಉದ್ಯಮಿ ಎಲಾನ್ ಮಸ್ಕ್ ಅವರೂ ಟ್ವೀಟ್ ಮಾಡುವ ಮೂಲಕ ಆರೋಪಕ್ಕೆ ಪುಷ್ಟಿ ಕೊಟ್ಟಿದ್ದಾರೆ. “ನೀಮನ್ ಅವರು ಸೆಕ್ಸ್ ಟಾಯ್ಸ್ ನೆರವು ಪಡೆದು ಗೆಲುವು ಸಾಧಿಸಿದ್ದಕ್ಕೆ ಅವರ ಬಗ್ಗೆ ದೇಶಕ್ಕೆ ಬೇಸರ ಮೂಡಿದೆ,” ಎಂದು ಬರೆದುಕೊಂಡಿದ್ದಾರೆ.
ಸೆಕ್ಸ್ ಟಾಯ್ ಬಳಸಿದ್ದು ಹೇಗೆ?
ಹ್ಯಾನ್ಸ್ ನೀಮನ್ ಅವರು ಕಾರ್ಲ್‌ಸೆನ್ ವಿರುದ್ಧ ಆಡುವಾಗ ವೈರ್‌ಲೆಸ್ ಅನಲ್ ಬೀಡ್ಸ್ (ಗುದ ಮಣಿಗಳು) ಎಂಬ ಸೆಕ್ಸ್ ಟಾಯ್ ಅನ್ನು ಗುದದೊಳಗೆ ಇಟ್ಟುಕೊಂಡಿದ್ದರು ಎಂದು ಅರೋಪಿಸಲಾಗಿದೆ. ಆಟದ ನಡುವೆ ಅವರು ತಮ್ಮ ಚದುರಂಗದ ಕಾಯಿಯನ್ನು ತಪ್ಪು ನಡೆ ಇಡಲು ಮುಂದಾದಾಗ ಕಂಪ್ಯೂಟರ್ ಸಂಪರ್ಕಿತ ವೈರ್‌ಲೆಸ್ ಅನಲ್ ಬೀಡ್ಸ್ ವೈಬ್ರೇಟ್ ಆಗುತ್ತಿತ್ತು. ಆಗ ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಅಡುತ್ತಿದ್ದರು. ಈ ಮೂಲಕ ಬಾಹ್ಯ ಬೆಂಬಲ ಪಡೆದು ಮೋಸದಿಂದ ಗೆದ್ದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಎಲ್ಲ ಆರೋಪಗಳನ್ನು ಹ್ಯಾನ್ಸ್ ನಿರಾಕರಿಸಿದ್ದಾರೆ. ನಾನು ಪ್ರಾಮಾಣಿಕ ಹಾಗೂ ಶುದ್ಧ ಹಸ್ತ. ನನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ಬಟ್ಟೆ ಬಿಚ್ಚಿ ಬೆತ್ತಲಾಗಲೂ ನಾನು ಸಿದ್ಧ ಎಂದು ಹೇಳಿದ್ದಾರೆ.
ಇದನ್ನೂ ಓದಿ | Grandmaster | ಭಾರತದ 76ನೇ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ ಬೆಂಗಳೂರಿನ ತರುಣ ಪ್ರಣವ್