ಮುಂಬಯಿ: ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ(Chetan Sharma) ಅವರು ಖಾಸಗಿ ಮಾಧ್ಯಮವೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಹಲವು ಸ್ಫೋಟಕ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಇದರಲ್ಲಿ ಜಸ್ಪ್ರೀತ್ ಬುಮ್ರಾ(Jasprit Bumrah) ಆಯ್ಕೆ ವಿಚಾರದ ಬಗ್ಗೆಯೂ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.
ಚೇತನ್ ಶರ್ಮಾ ಅವರು ಕುಟುಕು ಕಾರ್ಯಾಚರಣೆಯ ವಿಡಿಯೊದಲ್ಲಿ ಮಾತನಾಡಿ, ಗಾಯಗಳನ್ನು ಮುಚ್ಚಿಡಲು ಆಟಗಾರರು ಇಂಜೆಕ್ಷನ್ ತೆಗೆದುಕೊಳ್ಳುವ ಆಘಾತಕಾರಿ ಸಂಗತಿ ಹಾಗೂ ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ವಿವಾದ ಕುರಿತು ಅಚ್ಚರಿಯ ವಿಚಾರ ತಿಳಿಸಿದ್ದಾರೆ. ಇದೇ ವೇಳೆ ಆಸ್ಟ್ರೆಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಸಂದರ್ಭದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಹೊಂದಿರಲಿಲ್ಲ ಎಂದು ಹೇಳಿದ್ದಾರೆ.
ಬುಮ್ರಾ ಅವರು ಬೆನ್ನು ನೋವಿನಿಂದ ಸಂಪೂರ್ಣವಾಗಿ ಗುಣಮುಖವಾಗಿರಲಿಲ್ಲ. ಆದರೂ ನಾನು ಟಿ20 ವಿಶ್ವ ಕಪ್ ದೃಷ್ಟಿಯಿಂದ ಒತ್ತಡಕ್ಕೆ ಸಿಲುಕಿ ಅವರನ್ನು ತಂಡಕ್ಕೆ ಆಯ್ಕೆ ಮಾಡಬೇಕಾಯಿತು. ಆದರೆ ಅವರು ಸರಣಿಯೊಂದರಲ್ಲಿ ಮತ್ತೆ ಗಾಯಕ್ಕೆ ತುತ್ತಾಗಿ ವಿಶ್ವ ಕಪ್ನಿಂದ ಹೊರಬಿದ್ದರು. ವಾಸ್ತವವಾಗಿ ವಿಶ್ವಕಪ್ಗೆ ಬುಮ್ರಾ ಫಿಟ್ನೆಸ್ ಹೊಂದಿಲ್ಲದಿದ್ದರೂ ಆಯ್ಕೆ ಮಾಡಬೇಕಾಯಿತು. ಇತ್ತೀಚಿನ ಶ್ರೀಲಂಕಾ ವಿರುದ್ಧದ ಸರಣಿಗೂ ಆರಂಭದಲ್ಲಿ ಬುಮ್ರಾ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಗಾಯ ಪೂರ್ಣ ಗುಣವಾದ ಕಾರಣ ಹೊರಗುಳಿದರು.
ಇದನ್ನೂ ಓದಿ Chetan Sharma: ಗಂಗೂಲಿ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದು ಸುಳ್ಳು; ಚೇತನ್ ಶರ್ಮಾ
ಈ ರೀತಿ ಸ್ಟಾರ್ ಆಟಗಾರರು ಫಿಟ್ನೆಸ್ ಹೊಂದಿಲ್ಲದಿದ್ದರೂ ತಂಡದಲ್ಲಿರುತ್ತಾರೆ. ಬಿಸಿಸಿಐ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆಯ್ಕೆಗಾರರಿಗೆ ಈ ಬಗ್ಗೆ ಎಲ್ಲ ಮಾಹಿತಿ ಇದ್ದರೂ ಅವರು ಅಸಹಾಯಕರು ಹೆಸರಿಗಷ್ಟೆ ಆಯ್ಕೆ ಸಮಿತಿ ಆದರೆ ಎಲ್ಲ ನಿರ್ಧಾರ ಕೈಗೊಳ್ಳುವುದು ಬಿಸಿಸಿಐ ನಾವು ಕೇಲವ ರಬ್ಬರ್ ಸ್ಟ್ಯಾಂಪ್ಗಳಂತೆ ಕಾರ್ಯನಿರ್ವಹಿಸಬೇಕಿದೆ ಎಂದು ಚೇತನ್ ಶರ್ಮ ಹೇಳಿದ್ದಾಗಿ ಖಾಸಗಿ ವಾಹಿನಿ ವರದಿ ಮಾಡಿದೆ.