Site icon Vistara News

Royal London Cup | ಅಂದುಕೊಂಡಂತೆ ಇಲ್ಲ ಕ್ರಿಕೆಟರ್‌ ಚೇತೇಶ್ವರ್‌ ಪೂಜಾರ!

royal london cup

ಲಂಡನ್‌ : ಚೇತೇಶ್ವರ್‌ ಪೂಜಾರ ಎಂದರೆ ನಿಧಾನ ಗತಿಯ ಬ್ಯಾಟ್ಸ್‌ಮನ್‌. ೧ ರನ್‌ ಬಾರಿಸಲು ೫೦ ಎಸೆತಗಳನ್ನು ತೆಗೆದುಕೊಳ್ಳುವ ಅವರು ಟೆಸ್ಟ್‌ಗೆ ಮಾತ್ರ ಫಿಟ್‌. ಟಿ೨೦ ಮಾದರಿಗೆ ಐಪಿಎಲ್‌ ಸೇರಿದಂತೆ ಕ್ರಿಕೆಟ್‌ ಲೀಗ್‌ಗಳಿಗೆ ಅನ್‌ಫಿಟ್‌ ಎಂಬುದೆಲ್ಲ ಕ್ರಿಕೆಟ್‌ ಅಭಿಮಾನಿಗಳ ಅನಿಸಿಕೆ. ಆದರೆ, ಇದು ಶುದ್ಧ ಸುಳ್ಳು ಎಂದು ಸಾಬೀತುಪಡಿಸಿದ್ದಾರೆ ಈ ಹಿರಿಯ ಬ್ಯಾಟರ್‌. ಹೇಗೆಂದರೆ ರಾಯಲ್‌ ಲಂಡನ್‌ ಕಪ್‌ನಲ್ಲಿ (Royal London Cup) ಅವರು ೭೯ ಎಸೆತಗಳಲ್ಲಿ ೧೦೭ ರನ್‌ ಬಾರಿಸಿ ಎಲ್ಲರ ಕಲ್ಪನೆಯನ್ನು ಸುಳ್ಳಾಗಿಸಿದ್ದಾರೆ.

ಏಕದಿನ ಮಾದರಿಯಲ್ಲಿ ರಾಯಲ್‌ ಲಂಡನ್ ಕಪ್‌ ಇಂಗ್ಲೆಂಡ್‌ನಲ್ಲಿ ನಡೆಯುತ್ತಿದೆ. ಭಾರತದ ಹಿರಿಯ ಬ್ಯಾಟರ್‌ ಈ ಟೂರ್ನಿಯಲ್ಲಿ ಸಸೆಕ್ಸ್‌ ಪರ ಅಡುತ್ತಿದ್ದಾರೆ. ಈ ತಂಡ ಶುಕ್ರವಾರ ವಾರ್ವಿಕ್‌ಶೈರ್‌ ತಂಡದ ವಿರುದ್ಧ ಆಡಿ ಗೆದ್ದಿತ್ತು. ಈ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಎಲ್ಲರ ನಿರೀಕ್ಷೆ ಮೀರುವಂತೆ ಕಡಿಮೆ ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸಿದ್ದಾರೆ. ದುರದೃಷ್ಟವೆಂದರೆ ಅವರು ಶತಕ ಬಾರಿಸಿದ ಈ ಪಂದ್ಯದಲ್ಲಿ ಸಸೆಕ್ಸ್‌ ತಂಡ ೪ ರನ್‌ಗಳ ವೀರೋಚಿತ ಸೋಲು ಕಂಡಿದೆ.

ಪೂಜಾರ ಅಬ್ಬರ

ಈ ಪಂದ್ಯದಲ್ಲಿ ವಾರ್ವಿಕ್‌ಶೈರ್‌ ಬೌಲರ್‌ಗಳನ್ನು ಬೆಂಡೆತ್ತಿದ ಪೂಜಾರ ಇನಿಂಗ್ಸ್‌ನ ೪೫ನೇ ಓವರ್‌ನಲ್ಲಿ ೨೨ ರನ್‌ ಬಾರಿಸುವ ಜತೆಗೆ ೧೦೭ ರನ್‌ ಕಲೆಹಾಕಿದರು. ಅವರ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌ಗಳು ಹಾಗೂ ಏಳು ಫೋರ್‌ಗಳು ಸೇರಿಕೊಂಡಿವೆ. ೪೯ನೇ ಓವರ್‌ ತನಕ ಆಡಿದ ಅವರು ಕೊನೇ ಕ್ಷಣದಲ್ಲಿ ಔಟಾದರು. ಹೀಗಾಗಿ ಸಸೆಕ್ಸ್ ತಂಡ ಸೋಲಿಗೆ ಒಳಗಾಯಿತು.

ಅದಕ್ಕಿಂತ ಮೊದಲು ಬ್ಯಾಟ್‌ ಮಾಡಿದ ವಾರ್ವಿಕ್‌ಶೈರ್‌ ತಂಡ ನಿಗದಿತ ೫೦ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೩೧೦ ರನ್‌ ಬಾರಿಸಿತ್ತು. ಆ ತಂಡದ ಪರ ರೊಬಾರ್ಟ್‌ ಯಾಟ್ಸ್‌ ೧೧೪ ರನ್ ಬಾರಿಸಿದ್ದರು. ಗುರಿ ಬೆನ್ನಟ್ಟಿದ ಸಸೆಕ್ಸ್ ತಂಡ ೩೦೬ ಮಾತ್ರ ಪೇರಿಸಲು ಶಕ್ತಗೊಂಡು ಸೋಲಿಗೆ ಒಳಗಾಯಿತು.

ಇದನ್ನೂ ಓದಿ | ಸಸೆಕ್ಸ್​ ತಂಡದ ನಾಯಕರಾಗಿ Cheteshwar Pujara ಆಯ್ಕೆ

Exit mobile version