Site icon Vistara News

Cheteshwar Pujara: ದೇಶೀಯ ಕ್ರಿಕೆಟ್​ನಲ್ಲಿ 63ನೇ ಶತಕ ಬಾರಿಸಿದ ಚೇತೇಶ್ವರ್​ ಪೂಜಾರ

Cheteshwar Pujara

ಮುಂಬಯಿ: ಟೀಮ್​ ಇಂಡಿಯಾದಿಂದ ದೂರ ಉಳಿದಿರುವ ಹಿರಿಯ ಆಟಗಾರ ಚೇತೇಶ್ವರ್ ಪೂಜಾರ(Cheteshwar Pujara) ಅವರು ಸದ್ಯ ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ರನ್​ ಮಳೆಯನ್ನೇ ಸುರಿಸುತ್ತಿದ್ದಾರೆ. ಮಣಿಪುರ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ ಪೂಜಾರ ಈ ಋತುವಿನ ರಣಜಿ ಕೂಟದಲ್ಲಿ(ranji trophy) ಮೂರನೇ ಶತಕ ಪೂರ್ತಿಗೊಳಿಸಿದರು. ಈ ಶತಕದೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಟ್ಟು 63ನೇ ಶತಕ ಸಿಡಿಸಿದ ದಾಖಲೆ ತಮ್ಮದಾಗಿಸಿಕೊಂಡರು.

ರಾಷ್ಟ್ರೀಯ ತಂಡದ ಪರ ರನ್‌ ಕಲೆ ಹಾಕುವಲ್ಲಿ ವಿಫಲರಾದ ಕಾರಣ ಪೂಜಾರ ಅವರು ಟೀಮ್​ ಇಂಡಿಯಾದಿಂದ ದೂರ ಉಳಿದಿದ್ದಾರೆ. ಆದರೆ, ದೇಶೀಯ ಕ್ರಿಕೆಟ್​ನಲ್ಲಿ ಪೂಜಾರ ಉತ್ತಮವಾಗಿ ಬ್ಯಾಟಿಂಗ್​ ನಡೆಸುತ್ತಿದ್ದು ಮತ್ತೆ ಭಾರತ ತಂಡದ ಪರ ಆಡಲು ಶ್ರಮವಹಿಸುತ್ತಿದ್ದಾರೆ. ಮಣಿಪುರ ವಿರುದ್ಧದ ಪಂದ್ಯದಲ್ಲಿ ಪೂಜಾರ 105 ಎಸೆತಗಳನ್ನು ಎದುರಿಸಿದ 1 ಸಿಕ್ಸರ್ ಹಾಗೂ 12 ಬೌಂಡರಿಗಳ ನೆರವಿನಿಂದ 108 ರನ್ ಗಳಿಸಿದರು. ಪೂಜಾರ ಈ ಬಾರಿಯ ರಣಜಿಯಲ್ಲಿ ಜಾರ್ಖಂಡ್ 243, ರಾಜಸ್ಥಾನ ವಿರುದ್ಧ 110 ರನ್​ ಬಾರಿಸಿದ್ದರು.

ಸದ್ಯ ಪೂಜಾರ ಈ ಬಾರಿಯ ರಣಜಿ ಆವೃತ್ತಿಯಲ್ಲಿ 243*, 49, 43, 43, 66, 91, 3, 0, 110, 25 ಮತ್ತು 108 ರನ್ ಕಲೆಹಾಕಿದ್ದಾರೆ. ಈ ಪ್ರದರ್ಶನದ ಹೊರತಾಗಿಯೂ ಅವರಿಗೆ ಇಂಗ್ಲೆಂಡ್​ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ ಅವಕಾಶ ನೀಡದ್ದು ನಿಜಕ್ಕೂ ಅಚ್ಚರಿ ತಂದಿದೆ.

ಇದನ್ನೂ ಓದಿ IND vs ENG: ರನ್​ ಗಳಿಕೆಯಲ್ಲಿ ವಿಲಿಯಮ್ಸನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಜೈಸ್ವಾಲ್

​35 ವರ್ಷದ ಪೂಜಾರ ಕೊನೆಯ ಬಾರಿ ಭಾರತ ಪರ ಆಡಿದ್ದು ಜುಲೈ 2023 ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ. ಕಳಪೆ ಬ್ಯಾಟಿಂಗ್​ ಫಾರ್ಮ್​ನಿಂದಾಗಿ ಅವರು ತಂಡದಿಂದ ಹೊರಬಿದ್ದಿದ್ದರು. ಪೂಜಾರ ಎರಡೂ ಇನಿಂಗ್ಸ್​ನಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಅದರಲ್ಲೂ ಮೊದಲ ಇನಿಂಗ್ಸ್​ನಲ್ಲಿ ವಿಕೆಟ್​ಗೆ ಬಂದ ಚೆಂಡನ್ನು ಬ್ಯಾಟ್​ ಎತ್ತಿ ಹಿಡಿದು ಕ್ಲೀನ್​ ಬೌಲ್ಡ್​ ಆಗಿದ್ದರು. ಪೂಜಾರ ಈ ರೀತಿ ವಿಕೆಟ್​ ಒಪ್ಪಿಸಿದ್ದನ್ನು ಕಂಡು ಅನೇಕ ಮಾಜಿ ಕ್ರಿಕೆಟಿಗರು ಟೀಕೆ ವ್ಯಕ್ತಪಡಿಸಿದ್ದರು. ಪೂಜಾರ ಇದುವರೆಗೆ ಭಾರತ ಪರ 103 ಟೆಸ್ಟ್​ ಪಂದ್ಯ ಆಡಿ 7195 ರನ್​ ಬಾರಿಸಿದ್ದಾರೆ. ಇದರಲ್ಲಿ 19 ಶತಕ ಮತ್ತು 35 ಅರ್ಧಶತಕ ಒಳಗೊಂಡಿದೆ.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅತ್ಯಧಿಕ ದ್ವಿಶತಕ ಬಾರಿಸಿದ ಮೊದಲ ಭಾರತೀಯ ಎಂಬ ದಾಖಲೆ ಚೇತೇಶ್ವರ ಹೆಸರಿನಲ್ಲಿದೆ. ಅವರು ಒಟ್ಟು 17* ದ್ವಿಶತಕ ಬಾರಿಸಿದ್ದಾರೆ. 61 ಶತಕಗಳು ಹಾಗೂ 78 ಅರ್ಧಶತಕಗಳು ಕೂಡ ಬಾರಿಸಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 20 ಸಾವಿರ ರನ್ ಪೂರೈಸಿದ ಭಾರತದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಯೂ ಪೂಜಾರ ಅವರದ್ದಾಗಿದೆ.

Exit mobile version