Site icon Vistara News

ಸಸೆಕ್ಸ್​ ತಂಡದ ನಾಯಕರಾಗಿ Cheteshwar Pujara ಆಯ್ಕೆ

Cheteshwar Pujara

ಲಂಡನ್​: ಇಂಗ್ಲೆಂಡ್​ನ ಕೌಂಟಿ ಕ್ರಿಕೆಟ್​ ಕ್ಲಬ್​ ತಂಡ ಸಸೆಕ್ಸ್​ನ ಹಂಗಾಮಿ ನಾಯಕರಾಗಿ Cheteshwar Pujara ಆಯ್ಕೆಯಾಗಿದ್ದಾರೆ. ಕಾಯಂ ನಾಯಕ ಟಾಮ್‌ ಹೇನ್ಸ್‌ ಅಲಭ್ಯತೆ ಹಿನ್ನೆಲೆಯಲ್ಲಿ ಭಾರತ ತಂಡದ ಆಟಗಾರನಿಗೆ ಅವಕಾಶ ದೊರಕಿದೆ.

ಚೇತೇಶ್ವರ್‌ ಪೂಜಾರ ಅವರು ಟೀಮ್‌ ಇಂಡಿಯಾದ ಟೆಸ್ಟ್‌ ಸ್ಪೆಷಲಿಸ್ಟ್‌ ಅಟಗಾರ. ಹೀಗಾಗಿ ಅವರಿಗೆ ಸೀಮಿತ ಓವರ್‌ಗಳ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ಜತೆಗೆ ಐಪಿಎಲ್‌ನಂಥ ಲೀಗ್‌ಗಳಲ್ಲಿಯೂ ಡಿಮ್ಯಾಂಡ್‌ ಇಲ್ಲ. ಹೀಗಾಗಿ ಅವರು ಕೌಂಟಿ ಕ್ರಿಕೆಟ್‌ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಕಳೆದ ವರ್ಷ ಸಸೆಕ್ಸ್‌ ಕ್ರಿಕೆಟ್‌ ಕ್ಲಬ್‌ ಜತೆ ಒಪ್ಪಂದ ಮಾಡಿಕೊಂಡಿರುವ ಅವರು ಆ ತಂಡದ ಕಾಯಂ ಸದಸ್ಯರಾಗಿ ಆಡುತ್ತಿದ್ದಾರೆ.

ಜುಲೈ ಆರಂಭದಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದ ಚೇತೇಶ್ವರ್‌ ಪೂಜಾರ ಅವರು ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ, ಅದಕ್ಕಿಂತ ಮೊದಲು ಸಸೆಕ್ಸ್‌ ತಂಡದ ಪರ ಭರ್ಜರಿಯಾಗಿ ಬ್ಯಾಟ್‌ ಬೀಸಿದ್ದರು. ಸತತ ಎರಡು ಶತಕ ಹಾಗೂ ಅರ್ಧ ಶತಕಗಳನ್ನು ಬಾರಿಸಿದ್ದ ಅವರು ಕೌಂಟಿ ಕ್ರಿಕೆಟ್‌ನ ಯಶಸ್ವಿ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳುತ್ತಿದ್ದಾರೆ.

ಯಾವ ಪಂದ್ಯಕ್ಕೆ?

ಲಾರ್ಡ್ಸ್​ ಮೈದಾನದಲ್ಲಿ ಮಿಡ್ಲ್​ಸೆಕ್ಸ್​ ವಿರುದ್ಧ ಸಸೆಕ್ಸ್​ ತಂಡ ಆಡಲಿದೆ. ಈ ಪಂದ್ಯದನ್ನು ಚೇತೇಶ್ವರ್​ ಪೂಜಾರ ತಂಡವನ್ನು ಮುನ್ನಡೆಸಲಿದ್ದಾರೆ. ಲೀಸೆಸ್ಟರ್​ಶೈರ್​ ತಂಡದ ವಿರುದ್ಧದ ಪಂದ್ಯದಲ್ಲಿ ಕಾಯಂ ನಾಯಕ ಟಾಮ್​ ಹೇನ್ಸ್​ ಕೈಗೆ ಗಾಯವಾಗಿದ್ದ ಕಾರಣ ಅವರು ಈ ಪಂದ್ಯಕ್ಕೆ ಲಭ್ಯರಾಗುತ್ತಿಲ್ಲ.

ಚೇತೇಶ್ವರ್​ ಪೂಜಾರ ತಂಡದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಅಲ್ಲದೆ ಅವರು ಅನುಭವಿ ಆಟಗಾರ. ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಸೆಕ್ಸ್​ ಕೋಚ್​ ಇಯಾನ್​ ಸಾಲಿಸ್ಬರಿ ಹೇಳಿದ್ದಾರೆ.

ಇದನ್ನೂ ಓದಿ | Athiya Shetty And KL Rahul | ಅಥಿಯಾ- ರಾಹುಲ್​ ಜೋಡಿಯ ಮದುವೆ ಮುಂದಿನ ವರ್ಷಾರಂಭಕ್ಕೆ?

Exit mobile version