Site icon Vistara News

Cheteshwar Pujara: ಮತ್ತೆ ಕೌಂಟಿ ಕ್ರಿಕೆಟ್​ನತ್ತ ಮುಖ ಮಾಡಿದ ಚೇತೇಶ್ವರ ಪೂಜಾರ

cheteshwar

ರಾಜ್​ಕೋಟ್​​: ಟೀಮ್​ ಇಂಡಿಯಾದ ಟೆಸ್ಟ್​ ಸ್ಪೆಷಲಿಸ್ಟ್‌ ಚೇತೇಶ್ವರ ಪೂಜಾರ(Cheteshwar Pujara) ಅವರು ಮತ್ತೆ ಕೌಂಟಿ ಕ್ರಿಕೆಟ್​ನತ್ತ ಮಖಮಾಡಿದ್ದಾರೆ. ಭಾರತ ತಂಡದಲ್ಲಿ ಅವಕಾಶ ಸಿಗದ ಕಾರಣ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. 2024ರ ಕೌಂಟಿ ಕ್ರಿಕೆಟ್​ ಆವೃತ್ತಿಯಲ್ಲಿ ಸಸೆಕ್ಸ್​ ತಂಡಕ್ಕೆ ಆಡುವುದಾಗಿ ಪೂಜಾರ ಖಚಿತಪಡಿಸಿದ್ದಾರೆ. ಜತೆಗೆ ಸಸೆಕ್ಸ್ ಕ್ಲಬ್​(Sussex Cricket) ಒಪ್ಪಂದಕ್ಕೂ ಸಹಿ ಮಾಡಿದ್ದಾರೆ.

ಭಾರತ ಪರ 100 ಟೆಸ್ಟ್​ ಪಂದ್ಯ ಆಡಿರುವ ಪೂಜಾರ ಕಳಪೆ ಫಾರ್ಮ್​ನಿಂದ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗುತ್ತಿದ್ದಾರೆ. ವರ್ಷದ ಕೊನೆಯಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿಯೂ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಅವರು ತಮ್ಮ ಬ್ಯಾಟಿಂಗ್​ ಫಾರ್ಮ್​ ಕಂಡುಕೊಳ್ಳುವ ಸಲುವಾಗಿ ಕೌಂಟಿ ಆಡಲು ನಿರ್ಧರಿಸಿದ್ದಾರೆ. ಈ ಹಿಂದೆಯೂ ಅವರು ಕೌಂಟಿ ಕ್ರಿಕೆಟ್​ನಲ್ಲಿ ಆಡಿದ್ದರು.

ಸಸೆಕ್ಸ್‌ ಕ್ಲಬ್‌ ಪರ ಈಗಾಗಲೇ ಪೂಜಾರ ಕಣಕ್ಕಿಳಿದ್ದಾರೆ. 2022ರಲ್ಲಿ ಮೊದಲ ಬಾರಿಗೆ ಈ ಕ್ಲಬ್​ ಪರ ಆಡಲು ಸಹಿ ಮಾಡಿದ್ದ ಪೂಜಾರಗೆ ಇದು ಮೂರನೇ ನೇರ ಋತುವಾಗಿದೆ. ‘2024ರ ಋತುವಿಗೆ ಸಂಬಂಧಿಸಿದಂತೆ, ಪೂಜಾರ ಕೌಂಟಿ ಚಾಂಪಿಯನ್‌ಶಿಪ್‌ನ ಆರಂಭಿಕ ಏಳು ಪಂದ್ಯಗಳಿಗೆ ಪುಜಾರ ಲಭ್ಯವಿರುತ್ತಾರೆ’ ಎಂದು ಸಸೆಕ್ಸ್‌ ಕ್ಲಬ್‌ ಮಾಹಿತಿ ನೀಡಿದೆ.

“ಕಳೆದ ಎರಡು ಸೀಸನ್‌ಗಳಲ್ಲಿ ಸಸೆಕ್ಸ್ ತಂಡದ ಪರ ಆಡಿದ ಅನುಭ ಹೊಂದಿರುವ ನಾನು, ಮತ್ತೆ ಈ ತಂಡಕ್ಕೆ ಮರಳುತ್ತಿರುವುದು ಸಂತಸ ತಂದಿದೆ. ತಂಡವನ್ನು ಸೇರಲು ಮತ್ತು ಅದರ ಯಶಸ್ಸಿಗೆ ಕೊಡುಗೆ ನೀಡಲು ಕಾತರಗೊಂಡಿದ್ದೇನೆ” ಎಂದು ಪೂಜಾರ ಹೇಳಿದ್ದಾರೆ.

ಇದನ್ನೂ ಓದಿ IND vs SA: ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಮಹತ್ವದ ಬದಲಾವಣೆ ಖಚಿತ

ಕೌಂಟಿ ಕ್ರಿಕೆಟ್​ನಲ್ಲಿ ಪೂಜಾರ ಕಳೆದ ವರ್ಷ ಶತತ ಎರಡು ಶತಕ ಬಾರಿಸಿ ಮಿಂಚಿದ್ದರು. ಒಟ್ಟು 18 ಕೌಂಟಿ ಚಾಂಪಿಯನ್‌ಶಿಪ್ ಪಂದ್ಯಗಳಲ್ಲಿ 64.24 ರ ಸರಾಸರಿಯಲ್ಲಿ 1,863 ರನ್‌ ಕಲೆಹಾಕಿದ್ದಾರೆ. ಇದರಲ್ಲಿ ಎಂಟು ಶತಕ ಮತ್ತು ಮೂರು ಅರ್ಧ ಶತಕಗಳಿವೆ.

ಇದೇ ವರ್ಷ ಲಂಡನ್​ನಲ್ಲಿ ನಡೆದ ದ್ವಿತೀಯು ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಪೂಜಾರ ಎರಡೂ ಇನಿಂಗ್ಸ್​ನಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಅದರಲ್ಲೂ ಮೊದಲ ಇನಿಂಗ್ಸ್​ನಲ್ಲಿ ವಿಕೆಟ್​ಗೆ ಬಂದ ಚೆಂಡನ್ನು ಬ್ಯಾಟ್​ ಎತ್ತಿ ಹಿಡಿದು ಕ್ಲೀನ್​ ಬೌಲ್ಡ್​ ಆಗಿದ್ದರು. ಪೂಜಾರ ಈ ರೀತಿ ವಿಕೆಟ್​ ಒಪ್ಪಿಸಿದ್ದನ್ನು ಕಂಡು ಅನೇಕ ಮಾಜಿ ಕ್ರಿಕೆಟಿಗರು ಟೀಕೆ ವ್ಯಕ್ತಪಡಿಸಿದ್ದರು.

Exit mobile version