ಅಹದಮದಾಬಾದ್: ಟೀಮ್ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ (INDvsAUS) ನಾಲ್ಕನೇ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 42 ರನ್ ಬಾರಿಸಿ ಔಟಾಗಿದ್ದಾರೆ. ಎಂಟು ರನ್ಗಳ ಅಂತರದಿಂದ ಅರ್ಧ ಶತಕದ ಅವಕಾಶ ಕಳೆದುಕೊಂಡ ಅವರ ನಿರಾಸೆ ಎದುರಿಸಿದರೂ ಭಾರತ ತಂಡದ ಪರ ವಿಶೇಷ ಸಾಧನೆ ಮಾಡಿದ ಖುಷಿಯಲ್ಲಿದ್ದಾರೆ. ಈ ಸಾಧನೆಯ ವಿಚಾರದಲ್ಲಿ ಅವರು ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗಿಂತಲೂ ಒಂದು ಹೆಜ್ಜೆ ಮುಂದಿದಿದ್ದಾರೆ.
ಚೇತೇಶ್ವರ್ ಪೂಜಾರ ಅವರು ಆಸ್ಟ್ರೇಲಿಯಾ ತಂಡದ ವಿರುದ್ಧ 2000 ರನ್ಗಳನ್ನು ಪೂರೈಸಿ ಭಾರತದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್ ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ 2000 ಟೆಸ್ಟ್ ರನ್ಗಳನ್ನು ಬಾರಿಸಿದ ಆಟಗಾರರಾಗಿದ್ದಾರೆ. ಇದೀಗ ಚೇತೇಶ್ವರ್ ಪೂಜಾರ ಅವರ ಕ್ಲಬ್ ಸೇರಿಕೊಂಡಿದ್ದಾರೆ.
ಇದನ್ನೂ ಓದಿ : IND VS AUS: ಅತಿ ದೂರದ ಸಿಕ್ಸರ್ ಬಾರಿಸಿ ಪ್ರಶಸ್ತಿ ಗೆದ್ದ ಚೇತೇಶ್ವರ್ ಪೂಜಾರ!
ಚೇತೇಶ್ವರ್ ಪೂಜಾರ ಆಸ್ಟ್ರೇಲಿಯಾ ವಿರುದ್ಧ 51 ಸರಾಸರಿಯಲ್ಲಿ ರನ್ ಬಾರಿಸಿದ್ದಾರೆ. ಅದರಲ್ಲಿ 5 ಶತಕಗಳು ಹಾಗೂ 11 ಅರ್ಧ ಶತಕಗಳು ಸೇರಿಕೊಂಡಿವೆ. ಅದೇ ರೀತಿ ಗರಿಷ್ಠ 204 ಬಾರಿಸಿದ ಏಕೈಕ ಆಟಗಾರ. ಇಷ್ಟೊಂದು ಸಾಧನೆ ಮಾಡಿರುವ ಚೇತೇಶ್ವರ್ ಪೂಜಾರ ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಿಂಚುತ್ತಿಲ್ಲ. ಅವರು ಇಂದೋರ್ ಟೆಸ್ಟ್ನಲ್ಲಿ ಅರ್ಧ ಶತಕ ಬಾರಿಸಿದ್ದ ಬಿಟ್ಟರೆ ಚೆನ್ನಾಗಿ ಬ್ಯಾಟ್ ಮಾಡಿಲ್ಲ.
ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 2000 ಟೆಸ್ಟ್ ರನ್ ಬಾರಿಸಬಹುದಾದ ಬ್ಯಾಟರ್. ಅವರೀಗ 24 ಪಂದ್ಯಗಳಲ್ಲಿ 1793 ರನ್ ಬಾರಿಸಿದ್ದಾರೆ.