Site icon Vistara News

Turkey Earthquake: ಭೂಪಂಕದ ಅವಶೇಷದಲ್ಲಿ ಜೀವಂತ ಪತ್ತೆಯಾದ ಫುಟ್ಬಾಲ್​ ಆಟಗಾರ

Christian Atsu

#image_title

ಅಂಕಾರ: ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭಯಾನಕ ಭೂಕಂಪದಲ್ಲಿ ನಾಪತ್ತೆಯಾಗಿದ್ದ (Turkey Earthquake) ನ್ಯೂಕ್ಯಾಸಲ್(Newcastle) ತಂಡದ ಮಾಜಿ ಫುಟ್ಬಾಲ್​ ಆಟಗಾರ ಕ್ರಿಶ್ಚಿಯನ್ ಅಟ್ಸು,(Christian Atsu) ಕೊನೆಗೂ ಜೀವಂತವಾಗಿ ಪತ್ತೆಯಾಗಿದ್ದಾರೆ. ಈ ವಿಚಾರವನ್ನು ಘಾನಾದ ರಾಯಭಾರಿ ಖಚಿತಪಡಿಸಿದೆ.

ಸೋಮವಾರ ಬೆಳಗಿನ ಜಾವ ಸಂಭವಿಸಿದ್ದ 7.8 ತೀವ್ರತೆಯ ಭೂಕಂಪಕ್ಕೆ ಪ್ರಮುಖ ನಗರಗಳು ನೆಲಸಮಗೊಂಡಿದೆ. ಘಟನೆಯಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 4000ವನ್ನೂ ಮೀರಿದೆ. ಇನ್ನು ಕೆಲವರು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. ಈ ಮಧ್ಯೆ ಫುಟ್ಬಾಲ್​ ಆಟಗಾರ ಕ್ರಿಶ್ಚಿಯನ್ ಅಟ್ಸು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು. ಜತೆಗೆ ಅವರು ಅವಶೇಷಗಳಡಿಯಲ್ಲಿ ಸಿಕ್ಕಿ ಬಿದ್ದಿರುವುದಾಗಿ ಅವರ ಸ್ನೇಹಿತರೊಬ್ಬರು ಮಾಹಿತಿ ನೀಡಿದ್ದರು.

“ನಮಗೆ ಒಳ್ಳೆಯ ಸುದ್ದಿ ಬಂದಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಕ್ರಿಶ್ಚಿಯನ್ ಅಟ್ಸು ಅವರು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿಯನ್ನು ಘಾನಾ ಅಸೋಸಿಯೇಶನ್‌ನ ಅಧ್ಯಕ್ಷರಿಂದ ಪಡೆದಿದ್ದೇನೆ” ಎಂದು ಫ್ರಾನ್ಸಿಸ್ಕಾ ಆಶಿಟೆಯ್-ಒಡುಂಟನ್ ಅವರು ಅಂಕಾರ ಮೂಲದ ಅಸಾಸೆ ರೇಡಿಯೊಗೆ ತಿಳಿಸಿದ್ದಾರೆ. ಸದ್ಯ ಅಟ್ಸು ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ರಾಯಭಾರಿ ಹೆಚ್ಚಿನ ವಿವರಗಳನ್ನು ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ Turkey Earthquake: ಫುಟ್ಬಾಲ್​ ಆಟಗಾರ ಕ್ರಿಶ್ಚಿಯನ್ ಅಟ್ಸು ನಾಪತ್ತೆ

31 ರ ಹರೆಯದ ಕ್ರಿಶ್ಚಿಯನ್ ಅಟ್ಸು ಅವರು ಸೆಪ್ಟೆಂಬರ್‌ನಲ್ಲಿ ಟರ್ಕಿಶ್ ಸೂಪರ್ ಲಿಗ್ ತಂಡ ಹಟಾಯ ಸ್ಪೋರ್ ತಂಡವನ್ನು ಸೇರಿದ್ದರು. ಸೋಮವಾರದ ಬೃಹತ್ ಭೂಕಂಪದ ಕೇಂದ್ರಬಿಂದುವಿನ ಬಳಿಯ ದಕ್ಷಿಣ ಪ್ರಾಂತ್ಯದ ಹಟಾಯ್‌ನಲ್ಲಿ ಅವರು ನೆಲೆಸಿದ್ದರು. 2019ರಲ್ಲಿ ಘಾನಾ ಪರ ಕೊನೆಯ ಪಂದ್ಯ ಆಡಿದ್ದರು. ಅಂತಾರಾಷ್ಟ್ರೀಯ ಫುಟ್ಬಾಲ್​ನಲ್ಲಿ ಕಾಣಿಸಿಕೊಳ್ಳಲಿದ್ದರೂ ಅವರು ಲೀಗ್​ ಮಟ್ಟದ ಪಂದ್ಯಗಳಲ್ಲಿ ಆಡುತ್ತಿದ್ದಾರೆ.

Exit mobile version