Site icon Vistara News

Cricketer Death | ಕ್ರಿಕೆಟ್‌ ಆಡುವಾಗಲೇ ಕುಸಿದುಬಿದ್ದು ಮೃತಪಟ್ಟ ಕ್ರಿಕೆಟರ್‌

ಕರಾಚಿ : ಕ್ಲಬ್‌ ಕ್ರಿಕೆಟ್‌ ಆಡುವ ವೇಳೆ ಯುವ ಕ್ರಿಕೆಟಿಗರೊಬ್ಬರು ಹೃದಯಾಘಾತದಿಂದ ಕ್ರೀಡಾಂಗಣದಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಘಟನೆ ಬಗ್ಗೆ ಅಲ್ಲಿನ ಕ್ರಿಕೆಟರ್‌ಗಳು ದಿಗ್ರ್ಭಮೆ ವ್ಯಕ್ತಪಡಿಸಿದ್ದಾರೆ. ಮೃತಪಟ್ಟವರನ್ನು ಉಸ್ಮಾನ್‌ ಶಿನ್ವಾರಿ ಎಂದು ಹೇಳಲಾಗಿದೆ. ಅಲ್ಲಿನ ಕಾರ್ಪೊರೇಟ್‌ ಕ್ರಿಕೆಟ್‌ ಟೂರ್ನಮೆಂಟ್‌ ವೇಳೆ ಘಟನೆ ಸಂಭವಿಸಿದೆ.

ಉಸ್ಮಾನ್‌ ಶಿನ್ವಾರಿ ಎಂಬ ಅಂತಾರಾಷ್ಟ್ರೀಯ ಕ್ರಿಕೆಟರ್ ಒಬ್ಬರಿದ್ದು, ಘಟನೆ ನಡೆದ ತಕ್ಷಣ ಎಲ್ಲರೂ ಮೃತಪಟ್ಟವರು ಅವರೆಂದು ನಂಬಿದ್ದರು. ಸ್ಪಷ್ಟನೆ ನೀಡಿದ ಬಳಿಕ ಕ್ಲಬ್‌ ಟೂರ್ನಮೆಂಟ್‌ನಲ್ಲಿ ನಡೆದ ಘಟನೆ ಎಂಬುದು ಅರಿವಿಗೆ ಬಂತು.

ಮೃತಪಟ್ಟ ಉಸ್ಮಾನ್‌ ಶಿನ್ವಾರಿ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಸಹ ಆಟಗಾರರು ನೆರವಿಗೆ ಹೋದರು ಪ್ರಯೋಜನಕ್ಕೆ ಬರಲಿಲ್ಲ. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಕ್ಕಿಂತ ಮೊದಲೇ ಅವರು ಮೃತಪಟ್ಟಿದ್ದರು.

ಇದನ್ನೂ ಓದಿ | Duleep Trophy | ಅಶಿಸ್ತು ತೋರಿದ ತನ್ನ ತಂಡದ ಆಟಗಾರನ್ನೇ ಮೈದಾನದಿಂದ ಹೊರಕ್ಕೆ ದಬ್ಬಿದ ರಹಾನೆ

Exit mobile version