ಬೆಂಗಳೂರು : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ (CWG- 2022) ಸಾಧನೆ ಮಾಡಿರುವ ಕರ್ನಾಟಕದ ಕ್ರೀಡಾ ಸಾಧಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಸನ್ಮಾನ ಮಾಡಲಿದ್ದಾರೆ. ಇದೇ ವೇಳೆ ಅವರು ಅಮೃತ ಕ್ರೀಡಾ ದತ್ತು ಯೋಜನೆಯಡಿ ಆಯ್ಕೆಯಾದ 75 ಕ್ರೀಡಾಪಟುಗಳಿಗೆ ಅಭಿನಂದನಾ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕ್ರೀಡಾ ಸಚಿವ ನಾರಾಯಣ ಗೌಡ, ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಸಾಧಕರು ಇವರು:
ಅಶ್ವಿನಿ ಪೊನ್ನಪ್ಪ: ಇವರು ಬರ್ಮಿಂಗ್ಹಮ್‌ನಲ್ಲಿ ಮಿಶ್ರ ತಂಡ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಭಾರತ ತಂಡದ ಸದಸ್ಯೆ. ಇವರು ಮಿಶ್ರ ಡಬಲ್ಸ್ ತಂಡದಲ್ಲಿ ಆಡಿದ್ದಾರೆ.
ರಾಜೇಶ್ವರಿ ಗಾಯಕ್ವಾಡ್: ಸ್ಪಿನ್ ಬೌಲರ್ ರಾಜೇಶ್ವರಿ ಗಾಯಕ್ವಾಡ್ ಅವರು ಮಹಿಳೆಯರ ಟಿ೨೦ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತದ ತಂಡದ ಸದಸ್ಯರು. ಭಾರತ ತಂಡ ರನ್ನರ್ ಅಪ್ ಸ್ಥಾನ ಪಡೆಯುವಲ್ಲಿ ಇವರ ಕೊಡುಗೆಯೂ ಇದೆ.
ಗುರುರಾಜ ಪೂಜಾರಿ: ಪುರುಷರ ೬೨ ಕೆ.ಜಿ ವೇಟ್‌ಲಿಫ್ಟಿಂಗ್‌ನಲ್ಲಿ ಗುರುರಾಜ ಪೂಜಾರಿ ಅವರು ಕಂಚಿನ ಪದಕ ಗೆದ್ದಿದಾರೆ. ಇವರು ೨೦೧೮ನೇ ಆವೃತ್ತಿಯ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
ಇದನ್ನೂ ಓದಿ | CWG-2022 | ಕಂಚು ಗೆದ್ದ ಗುರುರಾಜ ಪೂಜಾರಿ ಮನೆಯಲ್ಲಿ ಸಂಭ್ರಮ