Site icon Vistara News

CWG -2022 | ಕಾಮನ್ವೆಲ್ತ್‌ ಗೇಮ್ಸ್‌ ಎಷ್ಟು ಗಂಟೆಗೆ ಶುರು? ಭಾರತದ ಧ್ವಜಧಾರಿಗಳು ಯಾರೆಲ್ಲ?

CWG-2022

ಬರ್ಮಿಂಗ್‌ಹ್ಯಾಮ್‌: ೨೨ನೇ ಆವೃತ್ತಿಯ ಕಾಮನ್ವೆಲ್ತ್‌ ಗೇಮ್ಸ್‌ (CWG -2022) ಜುಲೈ ೨೮ರಂದು ರಾತ್ರಿ ಭಾರತೀಯ ಕಾಲಮಾನ ಪ್ರಕಾರ ೧೧.೩೦ಕ್ಕೆ ಆರಂಭವಾಗಲಿದೆ. ಕಾಮನ್ವೆಲ್ತ್‌ ಒಕ್ಕೂಟದ ಸುಮಾರು ೭೨ ರಾಷ್ಟ್ರಗಳು ಪಾಲ್ಗೊಳ್ಳುವ ಈ ಬಹುಕ್ರೀಡೆಗಳ ಕೂಟವು ವಿಶ್ವದ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಒಂದು. ೧೩೪ ಪುರುಷರ ಪದಕ ಸ್ಪರ್ಧೆಗಳು ಹಾಗೂ ೧೩೬ ಮಹಿಳೆಯರ ಪದಕದ ಸ್ಪರ್ಧೆಗಳು ನಡೆಯಲಿದೆ. ಅಂತೆಯೇ ೨೦೨೨ರ ಕಾಮನ್ವೆಲ್ತ್‌ ಗೇಮ್ಸ್‌ನ ಕೆಲವು ಹೈಲೈಟ್ಸ್‌ಗಳು ಇಂತಿವೆ

ಯಾವುದೆಲ್ಲ ಸ್ಪರ್ಧೆಗಳು?

ಈಜು, ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಬಾಸ್ಕೆಟ್‌ಬಾಲ್‌, ಬೀಚ್‌ ವಾಲಿಬಾಲ್‌, ಲಾನ್‌ ಬಾಲ್‌, ಬಾಕ್ಸಿಂಗ್‌, ಮಹಿಳೆಯರ ಕ್ರಿಕೆಟ್‌, ಜಿಮ್ನಾಸ್ಟಿಕ್‌, ಜೂಡೂ, ಸೈಕ್ಲಿಂಗ್‌, ಹಾಕಿ, ನೆಟ್‌ಬಾಲ್‌, ರಗ್ಬಿ ಸೆವೆನ್ಸ್, ಸ್ಕ್ವಾಷ್‌, ಟೇಬಲ್‌ ಟೆನಿಸ್‌, ಟ್ರಯಥ್ಲಾನ್‌, ವೇಟ್‌ ಲಿಫ್ಟಿಂಗ್‌, ಪವರ್‌ ಲಿಫ್ಟಿಂಗ್‌ ಮತ್ತು ಕುಸ್ತಿ.

ಭಾರತ ಧ್ವಜಧಾರಿಗಳು ಯಾರು?: ನೀರಜ್‌ ಚೋಪ್ರಾ ತ್ರಿವರ್ಣ ಧ್ವಜಧಾರಿಯೆಂದು ಆರಂಭದಲ್ಲಿ ಭಾರತೀಯ ಒಲಿಂಪಿಕ್‌ ಅಸೋಸಿಯೇಷನ್‌ ಹೇಳಿತ್ತು. ಆದರೆ, ಅವರು ಗಾಯಗೊಂಡ ಕಾರಣ ಪಿ.ವಿ ಸಿಂಧೂಗೆ ಅವಕಾಶ ಕಲ್ಪಿಸಲಾಯಿತು. ಇದೀಗ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಕೂಡ ಸಿಂಧೂ ಅವರ ಜತೆ ಭಾರತದ ಧ್ವಜ ಹಿಡಿದು ಸಾಗಲಿದ್ದಾರೆ.

ಉದ್ಘಾಟನೆ ಎಲ್ಲಿ? ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದರ ಪ್ರೇಕ್ಷಕರ ಗ್ಯಾಲರಿ ಸಾಮರ್ಥ್ಯ ೩೨,೦೦೦

ಉದ್ಘಾಟನೆಯ ಸಮಯ: ಭಾರತೀಯ ಕಾಲಮಾನ ಪ್ರಕಾರ ರಾತ್ರಿ ೧೧.೩೦ಕ್ಕೆ. ಇಂಗ್ಲೆಂಡ್‌ನ ಸ್ಥಳೀಯ ಸಮಯ ಬೆಳಗ್ಗೆ ೭ ಗಂಟೆಗೆ.

ಉಪಸ್ಥಿತಿ : ಇಂಗ್ಲೆಂಡ್‌ನ ರಾಜ ಪ್ರಿನ್ಸ್‌ ಚಾರ್ಲ್ಸ್‌ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆಯಲಿದೆ. ಕಾಮನ್ವೆಲ್ತ್‌ ದೇಶಗಳ ಗಣ್ಯರು ಹಾಗೂ ಕ್ರೀಡಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಎಷ್ಟು ದಿನಗಳ ಕೂಟ? : ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭ ಸೇರಿದಂತೆ ಒಟ್ಟು ೧೨ ದಿನಗಳ ಕಾಲ ನಡೆಯಲಿದೆ ಕಾಮನ್ವೆಲ್ತ್‌ ಗೇಮ್ಸ್‌.

ಒಟ್ಟಾರೆ ಪಾಲ್ಗೊಳ್ಳುವ ಅಥ್ಲೀಟ್‌ಗಳು ಎಷ್ಟು? ೭೪ ರಾಷ್ಟ್ರಗಳ ೫೦೫೪ ಸ್ಪರ್ಧಿಗಳು ಪದಕಗಳ ಬೇಟೆ ನಡೆಸಲಿದ್ದಾರೆ.

ಒಟ್ಟು ಕ್ರೀಡೆಗಳು ಎಷ್ಟು?: ಈ ಬಾರಿ ೨೦ ಕ್ರೀಡೆಗಳು ನಡೆಯಲಿದ್ದು, ಅದರಲ್ಲಿ ಪದಕಗಳ ವಿತರಣೆಯಾಗಲಿವೆ.

ಯಾವ ಕ್ರೀಡೆಗಳು ಸೇರ್ಪಡೆ? ಜೂಡೂ ಹಾಗೂ ಮಹಿಳೆಯರ ಕ್ರಿಕೆಟ್‌ ಅನ್ನು ಪದಕಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ಕೈಬಿಟ್ಟಿರುವ ಕ್ರೀಡೆ ಯಾವುದು? : ಶೂಟಿಂಗ್‌ ಕೈಬಿಡಲಾಗಿರುವ ಕ್ರೀಡೆ. ಸ್ಥಳಾವಕಾಶದ ಕೊರತೆ ಎಂದು ಕಾರಣ ಹೇಳಲಾಗಿದೆ. ಭಾರತ ಈ ವಿಭಾಗದಲ್ಲಿ ಪ್ರಾಬಲ್ಯ ಹೊಂದಿದ್ದ ಕಾರಣ ನಷ್ಟ ಖಾತರಿ.

ಒಟ್ಟು ಪದಕಗಳು ಎಷ್ಟು? ೨೦ ಕ್ರೀಡೆಗಳ ನಾನಾ ವಿಭಾಗಗಳಲ್ಲಿ ೧೮೭೫ ಪದಕಗಳು ವಿತರಣೆಯಾಗಲಿವೆ.

ನೇರ ಪ್ರಸಾರ ಎಲ್ಲಿ: ಉದ್ಘಾಟನಾ ಸಮಾರಂಭ ಸೇರಿದಂತೆ ಕಾಮನ್ವೆಲ್ತ್‌ ಕೂಟವನ್ನು Sony TEN 1, Sony TEN 2, Sony TEN 3, Sony SIX ಮತ್ತು Sony TEN 4 ಚಾನೆಲ್‌ಗಳಲ್ಲಿ ವೀಕ್ಷಿಸಬಹುದು. ಭಾರತದಲ್ಲಿ ಡಿಡಿ ಸ್ಪೋರ್ಟ್ಸ್‌ ನೇರ ಪ್ರಸಾರ ಮಾಡಲಿದೆ.

ಲೈವ್‌ ಸ್ಟ್ರೀಮಿಂಗ್ ಎಲ್ಲಿ? : ಸೋನಿ ನೆಟ್ವರ್ಕ್‌ಗೆ ಸೇರಿದ ವೆಬ್‌ಸೈಟ್‌ ಮಾತ್ತು ಸೋನಿ ಲೈವ್ ಅಪ್ಲಿಕೇಷನ್‌ನಲ್ಲಿ ಸ್ಟ್ರೀಮಿಂಗ್‌ ಲಭಿಸಲಿದೆ.

ಇದನ್ನೂ ಓದಿ | CWG- 2022 | ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲಬಲ್ಲವರು ಯಾರು?

Exit mobile version