Site icon Vistara News

CWG- 2022 | 26ನೇ ಆವೃತ್ತಿಯ ಕಾಮನ್ವೆಲ್ತ್‌ ಗೇಮ್ಸ್‌ಗೆ ಇಂದು ಚಾಲನೆ

CWG-2022

ಬರ್ಮಿಂಗ್‌ಹ್ಯಾಮ್‌: ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪ್ರತಿಷ್ಠಿತ ಕಾಮನ್ವೆಲ್ತ್ ಕ್ರೀಡಾಕೂಟದ (CWG- 2022) 22ನೇ ಆವೃತ್ತಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28ರಿಂದ ಆಗಸ್ಟ್ 8ರವರೆಗೆ ಆಯೋಜನೆಗೊಂಡಿದೆ. ಕಾಮನ್ವೆಲ್ತ್‌ ಒಕ್ಕೂಟದಲ್ಲಿರುವ 72 ಕಾಮನ್ವೆಲ್ತ್‌ ದೇಶಗಳು ಹಾಲಿ ಆವೃತ್ತಿಯ ಕೂಟದಲ್ಲಿ ಪಾಲ್ಗೊಳ್ಳಲಿದೆ. 5 ಸಾವಿರಕ್ಕೂ ಅಧಿಕ ಕ್ರೀಡಾಳುಗಳು, 20 ಕ್ರೀಡೆಗಳ 280 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಭಾರತದ ನಿಯೋಗದಲ್ಲಿ 215ಕ್ಕೂ ಹೆಚ್ಚು ಸ್ಪರ್ಧಿಗಳು ಪದಕದ ಭರವಸೆಯೊಂದಿಗೆ ಆಂಗ್ಲರ ನಾಡಿಗೆ ತೆರಳಿದ್ದಾರೆ. ಅವರು ಇದುವರೆಗಿನ ಗರಿಷ್ಠ ಸಾಧನೆ ಮಾಡಲಿ ಎಂದು ಭಾರತೀಯ ಕ್ರೀಡಾಭಿಮಾನಿಗಳು ಹಾರೈಸಿದ್ದಾರೆ.

ಭಾರತದ ಪದಕಗಳ ಆಸೆಗೆ ಅಯೋಜಕರು ಆರಂಭದಲ್ಲೇ ತಣ್ಣೀರು ಎರಚಿದ್ದರು. ಭಾರತ ಹೆಚ್ಚು ಪ್ರಾಬಲ್ಯ ಹೊಂದಿರುವ ಶೂಟಿಂಗ್ ಹಾಗೂ ಆರ್ಚರಿ ವಿಭಾಗವನ್ನು ಕೈಬಿಟ್ಟಿದೆ. ಇದರ ಬಗ್ಗೆ ಆಕ್ಷೇಪಗಳು ವ್ಯಕ್ತಗೊಂಡಿದ್ದರೂ ಆಯೋಜಕರು ಪರಿಗಣಿಸಿರಲಿಲ್ಲ. ಹೀಗಾಗಿ ಸದ್ಯ ಆಂಗ್ಲರ ನಾಡಿಗೆ ತೆರಳಿರುವ ಉಳಿದ ಸ್ಪರ್ಧಿಗಳ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಆದಾಗ್ಯೂ ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಒಂದು ಚಿನ್ನ ಸೇರಿದಂತೆ ಏಳು ಪದಕ ಗೆದ್ದು ಸಾಧನೆ ಮಾಡಿರುವ ಭಾರತ, ಇಲ್ಲೂ ಹೊಸ ಇತಿಹಾಸ ಸೃಷ್ಟಿಸಲಿದೆ ಎಂಬುದಾಗಿ ಭಾರತೀಯ ಕ್ರೀಡಾಭಿಮಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

ಹಿಂದಿನ ಆವೃತ್ತಿಯ ಸಾಧನೆಯೇನು?

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ 2018ರಲ್ಲಿ ನಡೆದ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತ 26 ಚಿನ್ನ ಸೇರಿದಂತೆ 66 ಪದಕ ಗೆದ್ದಿತ್ತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿತ್ತು. ಆದರೆ 2010ರಲ್ಲಿ ತನ್ನ ಆತಿಥ್ಯದಲ್ಲಿ ನಡೆದ ಕೂಟದಲ್ಲಿ 101 ಪದಕ ಗೆಲ್ಲುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದು ಇತಿಹಾಸ.

೨೦೧೦ರಲ್ಲಿ ಭಾರತಕ್ಕೆ ಆತಿಥ್ಯ ಲಭಿಸಿತ್ತು. ಆ ವರ್ಷ 38 ಚಿನ್ನ, 27 ಬೆಳ್ಳಿ ಮತ್ತು 35 ಕಂಚು ಸೇರಿದಂತೆ ಒಟ್ಟಾರೆ 101 ಪದಕಗಳನ್ನು ಭಾರತದ ಅಥ್ಲೀಟ್‌ಗಳು ಬಾಚಿಕೊಂಡಿದ್ದರು. ಆ ಆವೃತ್ತಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಆದರೆ 2014ರಲ್ಲಿ ಐದನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ಗ್ಲಾಸ್ಕೋ ಕೂಟದಲ್ಲಿ 15 ಚಿನ್ನ ಸೇರಿ 64 ಪದಕಗಳನ್ನು ತನ್ನದಾಗಿಸಿಕೊಂಡ ಭಾರತ ಅಂಕಪಟ್ಟಿಯಲ್ಲಿ ಸ್ಕಾಟ್ಲೆಂಡ್ ನಂತರ ಸ್ಥಾನ ಗಳಿಸಿತು. 2018ರಲ್ಲಿ ಮತ್ತೆ ೬೬ ಪದಕಗಳೊಂದಿಗೆ ಮೂರನೇ ಸ್ಥಾನ ಪಡೆಯಿತು.

ಕಳೆದ ೨೦ ವರ್ಷಗಳ ಐದು ಕಾಮನ್ವೆಲ್ತ್‌ನಲ್ಲಿ ಭಾರತದ ಸಾಧನೆ

ಆವೃತ್ತಿಚಿನ್ನಬೆಳ್ಳಿಕಂಚುಒಟ್ಟುಸ್ಥಾನ
2022301717694
2006221111504
20103827361012
2014153019645
2018262020665

ಭಾರತದ ಕಾಮನ್ವೆಲ್ತ್‌ ಇತಿಹಾಸ

ಸ್ವಾತಂತ್ರ್ಯ ಪಡೆದ ಭಾರತ ಆ ಬಳಿಕ ಮೂರು ಆವೃತ್ತಿಗಳಲ್ಲಿ ಪಾಲ್ಗೊಂಡಿರಲಿಲ್ಲ. ೧೯೫೦, ೧೯೬೨ ಹಾಗೂ ೧೯೮೬ರಲ್ಲಿ ಭಾಗವಹಿಸಿರಲಿಲ್ಲ. ಆದರೆ, ೧೯೫೪ರಲ್ಲಿ ಕೆನಡಾದಲ್ಲಿ ನಡೆದ ಕೂಟದಲ್ಲಿ ಪಾಲ್ಗೊಂಡಿತ್ತು. ಆದರೆ, ಭಾರತ ಪ್ರಾಬಲ್ಯ ಮೆರೆಯಲು ಶುರು ಮಾಡಿದ್ದು, ೨೦೦೨ ಬಳಿಕ. ಆ ಆವೃತ್ತಿಯಲ್ಲಿ ಮೊದಲ ಬಾರಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿತು. ಆದರೆ 2006ರ ಕೂಟದಲ್ಲಿ 50 ಪದಕಗಳನ್ನು ಗೆದ್ದರೂ ಭಾರತ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಉಳಿಸಿಕೊಂಡಿತು.

ಆಸ್ಟ್ರೇಲಿಯಾ, ಇಂಗ್ಲೆಂಡ್‌ ಹಾಗೂ ಕೆನಡಾ ಈ ಕೂಟದಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುವ ರಾಷ್ಟ್ರಗಳಾಗಿವೆ.

ಇದನ್ನೂ ಓದಿ | CWG 2022- ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಸಾಧನೆಗಳೇನು?

Exit mobile version