ಬರ್ಮಿಂಗ್‌ಹ್ಯಾಮ್: ಕಾಮನ್ನ್ವೆಲ್ತ್ ಗೇಮ್ಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಈ ಕ್ರೀಡಾಹಬ್ಬಕ್ಕೆ ಇನ್ನು ಒಂದು ದಿನ ಮಾತ್ರ ಬಾಕಿ ಇದೆ…ಕಾಮನ್ವೆಲ್ತ್ ಮಹಾ ಜಾತ್ರೆ ಆರಂಭವಾಗೋದಕ್ಕೂ ಮುಂಚೆ ಈ ಕ್ರೀಡಾಕೂಟದಲ್ಲಿ ನಮ್ಮ ಭಾರತೀಯರ ಸಾಧನೆ ಏನು ಅನ್ನೋದ್ರ ಇಂಟ್ರೆಸ್ಟಿಂಗ್ ವಿಚಾರಗಳನ್ನ ನೀವು ನೋಡ್ಬೇಕು.
ಅಂದಹಾಗೆ ಕಾಮನ್ವೆಲ್ತ್ ಗೇಮ್ಸ್ ಆರಂಭವಾಗಿದ್ದು 1930ರಲ್ಲಿ.ಹ್ಯಾಮಿಲ್ಟನ್‌ನಲ್ಲಿ . ಅಂದ್ರೆ ಕ್ರೀಡಾಕೂಟ ಆರಂಭವಾಗಿ ಬರೋಬ್ಬರಿ 92 ವರ್ಷಗಳಾಯ್ತು. ನಾಲ್ಕು ವರ್ಷಗಳಿಗೊಮ್ಮೆ ಈ ಕ್ರೀಡಾಹಬ್ಬ ನಡೆಯುತ್ತೆ. ಇನ್ನು ನಮ್ಮ ಭಾರತೀಯರು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದ್ದು 1934ರಲ್ಲಿ….
…………………
ಭಾಗವಹಿಸಿದ ಮೊದಲ ವರ್ಷವೇ ಸಿಕ್ತು ಪದಕ
ಭಾರತ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತ ಭಾಗವಹಿಸಿದ್ದು 1934ರಲ್ಲಿ. 6 ಕ್ರೀಡಾಪಟುಗಳು ಭಾರತವನ್ನ ಪ್ರತಿನಿಧಿಸಿದ್ರು. ಚೊಚ್ಚಲ ಸೀಸನ್‌ನಲ್ಲೇ ನಮ್ಮ ಹೆಮ್ಮೆಯ ಕುಸ್ತಿಪಟು ರಶೀದ್ ಅನ್ವರ್ ಕಂಚಿನ ಪದಕ ಗೆದ್ದು ಇತಿಹಾಸ ಬರೆದಿದ್ರು.…
……………………………
ಮೊದಲ ಚಿನ್ನದ ಪದಕ ಗೆದ್ದುಕೊಟ್ರು ಸಿಂಗ್ ಈಸ್ ಕಿಂಗ್
ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದು ಕೊಟ್ಟಿದ್ದು ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಕಾ ಸಿಂಗ್. 1958ರ ಗೇಮ್ಸ್ ನಲ್ಲಿ ಮಿಲ್ಕಾ ಸಿಂಗ್ ಚಿನ್ನದ ಪದಕವನ್ನ ಮುಡಿಗೇರಿಸಿಕೊಂಡಿದ್ರು. ಈ ಮೂಲಕ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಚಿನ್ನದ ಪದಕ ಗೆದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ರು ಮಿಲ್ಕಾ ಸಿಂಗ್.
1978ರಲ್ಲಿ ಮಹಿಳಾ ಮಣಿಗಳ ದರ್ಬಾರ್
1978ರವರೆಗೆ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ಪದಕ ಗೆಲ್ಲೋದಕ್ಕೆ ಸಾಧ್ಯವಾಗಿರ್ಲಿಲ್ಲ.…ಆದ್ರೆ 1978ರ ಕೆನಡಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತದ ಅಮಿಘಿಯಾ ಹಾಗೂ ಕನ್ವಾಲ್ ಥಕರ್ ಸಿಂಗ್ ಜೋಡಿ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ರು…ಈ ಮೂಲಕ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಪದಕ ಬೇಟೆಯಾಡಿದ ಭಾರತದ ಮೊದಲ ಮಹಿಳಾ ಕ್ರೀಡಾಪಟುಗಳು ಅನ್ನೋ ಹೆಗ್ಗಳಿಕೆಗೆ ಭಾಜನರಾದ್ರು
……………………………
ಚಿನ್ನದ ಪದಕಕ್ಕಾಗಿ ಕಾಯಬೇಕಾಯ್ತು 52 ವರ್ಷ
ಭಾರತ ಮೊದಲ ಚಿನ್ನದ ಪದಕ ಗೆದ್ದಿದ್ದು 1958ರಲ್ಲಿ..ನಂತ್ರ ಚಿನ್ನದ ಪದಕಕ್ಕಾಗಿ ಬರೋಬ್ಬರಿ 52 ವರ್ಷ ಕಾಯಬೇಕಾಯ್ತು…2010ರಲ್ಲಿ ದೆಹಲಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಕೃಷ್ಣ ಪೂನಿಯಾ ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕ ಗೆಲ್ಲೋ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ರು…ಜೊತೆಗೆ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಅನ್ನೋ ಇತಿಹಾಸ ಬರೆದ್ರು.
……………………………………………….
ಕಾಮನ್ವೆಲ್ತ್ ಗೇಮ್ಸ್ ನಲ್ಲಿ ರಾಣಾ ದರ್ಬಾರ್
ಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಶೂಟರ್ ಜಸ್ಪಾಲ್ ರಾಣಾ ಇಟ್ಟ ಗುರಿ ಮಿಸ್ ಆಗಿದ್ದೇ ಇಲ್ಲ.…ಇಲ್ಲಿವರೆಗೆ ರಾಣಾ ಈ ಕ್ರೀಡಾಕೂಟದಲ್ಲಿ ಬರೋಬ್ಬರಿ 15 ಪದಕಗಳನ್ನ ಗೆದ್ದಿದ್ದಾರೆ. ಈ ಮೂಲಕ ಭಾರತದ ಪರ ಅತಿ ಹೆಚ್ಚು ಪದಕ ಗೆದ್ದ ಕ್ರೀಡಾಪಟು ಎನಿಸಿಕೊಂಡಿದ್ದಾರೆ
………………………………………………………….
ಬರೀ ಕೈನಲ್ಲಿ ಮರಳಿದ್ರು ಭಾರತೀಯರು
1938 ಹಾಗೂ 1954ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತೀಯರ ಆಟ ನಡೆದಿರ್ಲಿಲ್ಲ. ಪದಕವಿಲ್ಲದೇ ನಮ್ಮ ಕ್ರೀಡಾಪಟುಗಳು ಬರೀ ಕೈನಲ್ಲಿ ತವರಿಗೆ ಮರಳಿದ್ರು. ಇದು ಬಿಟ್ರೆ ಮತ್ತೇ ಎಲ್ಲಾ ಆವೃತ್ತಿಗಳಲ್ಲೂ ಭಾರತ ಪದಕ ಗೆದ್ದಿದೆ.…
…………………………………………………….
ಕಾಮನ್ವೆಲ್ತ್ ಗೇಮ್ಸ್ ಅನ್ನೋ ಮಹಾಮೇಳದಲ್ಲಿ ನಮ್ಮ ಭಾರತದ ಸೇನಾನಿಗಳು ಕೆಚ್ಚೆದೆಯ ಹೋರಾಟ ನಡೆಸಿದ್ದಾರೆ. ಎದರುರಾಳಿಗೆ ಟಕ್ಕರ್ ಕೊಟ್ಟು ಪದಕ ಬೇಟೆಯನ್ನ ಮುಂದುವರಿಸಿದ್ದಾರೆ. ಇಲ್ಲಿಯವರೆಗೆ ಭಾರತ ಒಟ್ಟು 503 ಪದಕಗಳನ್ನ ತನ್ನ ಜೋಳಿಗೆಗೆ ಹಾಕಿಕೊಂಡಿದೆ.
ಈಗ ಮತ್ತೇ ನಮ್ಮ ಭಾರತೀಯರು ಪದಕ ಬೇಟೆಗೆ ರೆಡಿಯಾಗಿ ನಿಂತಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಅಖಾಡ ಕೂಡ ರೆಡಿಯಾಗಿದೆ. ಈ ಬಾರಿಯೂ ಹೆಚ್ಚೆಚ್ಚು ಪದಕಗಳನ್ನ ಗೆಲ್ಲಲಿ ದೂರದೂರಲ್ಲಿ ನಮ್ಮ ತ್ರಿವರ್ಣ ಬಾನೆತ್ತರಕ್ಕೆ ಹಾರಾಡ್ಲಿ ಅನ್ನೋದೆ ಎಲ್ಲರ ಆಶಯ.