ಬರ್ಮಿಂಗ್ಹ್ಯಾಮ್ : ಕಾಮನ್ವೆಲ್ತ್ ಗೇಮ್ಸ್ನಲ್ಲಿ (CWG- 2022) ಭಾರತದ ಮಹಿಳೆಯರ ಲಾನ್ ಬೌಲ್ಸ್ ಫೋರ್ ತಂಡ ಬಂಗಾರದ ಪದಕ ಗೆದ್ದು ಇತಿಹಾಸ ಸೃಷ್ಟಿಸಿರುವ ಬೆನ್ನಲ್ಲೇ ಪುರುಷರ ತಂಡವೂ ಪದಕದ ಕಡೆಗೆ ದಾಪುಗಾಲು ಇಡುತ್ತಿದೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆನಡಾ ತಂಡವನ್ನು ಮಣಿಸಿದ ಭಾರತದ ಲಾನ್ ಬೌಲ್ಸ್ ತಂಡ ಪದಕದ ಭರವಸೆಯನ್ನು ನೀಡಿದೆ.
೧೩ ಬಾರಿಯ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ತಂಡದ ಸದಸ್ಯರಾದ ಸುನೀಲ್ ಬಹಾದ್ದೂರ್, ನವನೀತ್ ಸಿಂಗ್, ಚಂದನ್ ಸಿಂಗ್, ದಿನೇಶ್ ಕುಮಾರ್ ೧೪-೧೦ ಅಂಕಗಳಿಂದ ಗೆಲುವು ಸಾಧಿಸಿದರು.
ಬಲಿಷ್ಠ ತಂಡದ ನ್ಯೂಜಿಲೆಂಡ್ ಆರಂಭದಲ್ಲಿ ಭಾರತದ ವಿರುದ್ಧ ಪಾರಮ್ಯ ಮೆರೆದಿತ್ತು. ಹೀಗಾಗಿ ೧-೫ ಅಂಕಗಳ ಹಿನ್ನಡೆಯೊಂದಿಗೆ ಬಿಗು ಪ್ರದರ್ಶನ ನೀಡಿದ ಭಾರತೀಯ ಆಟಗಾರರು ಮುನ್ನಡೆ ಸಾಧಿಸಲು ಆರಂಭಿಸಿದರು. ೯ನೇ ತುದಿಯ ಆಟ ಅರಂಭಗೊಂಡಾಗ ೯-೭ ಅಂಕಗಳನ್ನು ಮುನ್ನಡೆ ಸಾಧಿಸಿಕೊಂಡಿತು. ಅದಾದ ಬಳಿಕ ತಿರುಗಿ ನೋಡದ ಭಾರತೀಯರು ೧೫ನೇ ತುದಿಯ ಆಟ ಮುಗಿದಾಗ ೪ ಅಂಕಗಳ ಮುನ್ನಡೆ ಸಂಪಾದಿಸಿ ಗೆಲವು ಸಾಧಿಸಿದರು.
ಭಾರತ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಸೆಣಸಾಡಲಿದೆ.
ಇದನ್ನೂ ಓದಿ | CWG – 2022 | ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದು ಚರಿತ್ರೆ ಸೃಷ್ಟಿಸಿದ ಭಾರತದ ಲಾನ್ ಬೌಲ್ ತಂಡ