Site icon Vistara News

Wrestler | ಆಪ್‌ ನಾಯಕನ ಹೇಳಿಕೆಗೆ ತಿರುಗೇಟು ಕೊಟ್ಟ ಕಾಮನ್ವೆಲ್ತ್‌ ಪದಕ ವಿಜೇತೆ ದಿವ್ಯಾ ಕಾಕ್ರನ್‌

wrestling

ನವ ದೆಹಲಿ : ಕಾಮನ್ವೆಲ್ತ್‌ ಗೇಮ್ಸ್‌ ಕಂಚಿನ ಪದಕ ವಿಜೇತೆ ಕುಸ್ತಿಪಟು ದಿವ್ಯಾ ಕಾಕ್ರನ್‌, ದಿಲ್ಲಿ ಆಪ್‌ ಪಕ್ಷದ ಶಾಸಕನೊಬ್ಬನ ಹೇಳಿಕೆಗೆ ತಿರುಗೇಟು ಕೊಟ್ಟಿದ್ದು, ತಾವು ದಿಲ್ಲಿಯ ಪರವಾಗಿಯೇ ಸ್ಪರ್ಧಿಸಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದಾರೆ. ಜತೆಗೆ ದಿಲ್ಲಿ ಸರಕಾರ ತಮಗೆ ಯಾವುದೇ ಆರ್ಥಿಕ ನೆರವು ನೀಡಿಲ್ಲ ಎಂಬ ತಮ್ಮ ಹೇಳಿಕೆಯನ್ನು ಸಮರ್ಧಿಸಿಕೊಂಡಿದ್ದಾರೆ.

ಆಗಸ್ಟ್‌ ೬ರಂದು ಕಾಮನ್ವೆಲ್ತ್‌ ಗೇಮ್ಸ್‌ನ ೬೮ ಕೆ.ಜಿ ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ದಿವ್ಯಾ ಕಾಕ್ರನ್‌ ಅವರು ಕಂಚಿನ ಪದಕ ಗೆದ್ದುಕೊಂಡಿದ್ದರು. ಈ ಸಾಧಕಿ ಇದೀಗ ಭಾರತಕ್ಕೆ ವಾಪಸಾಗಿದ್ದು, ಭರ್ಜರಿ ಸ್ವಾಗತ ಪಡೆದುಕೊಂಡಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಮುಂದೆ ಮಾತನಾಡಿದ ದಿವ್ಯಾ ಅವರು ತಮಗೆ ದಿಲ್ಲಿ ಸರಕಾರದಿಂದ ಯಾವುದೇ ಆರ್ಥಿಕ ನೆರವು ನೀಡಿಲ್ಲ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ದಿಲ್ಲಿಯ ಆಪ್‌ ಶಾಸಕ ಸೌರಭ್‌ ಭಾರದ್ವಾಜ್‌ ಅವರು ಪ್ರತಿಕ್ರಿಯಿಸಿ, ದಿವ್ಯಾ ಅವರ ದಿಲ್ಲಿ ಪರವಾಗಿ ಅಡಿವುದು ಕಡಿಮೆ. ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ದಿವ್ಯಾ ಅವರು ೨೦೧೧ರಿಂದ ೨೦೧೭ರವರೆಗೆ ತಾವು ದಿಲ್ಲಿ ಪರವಾಗಿ ಆಡುತ್ತಿದ್ದೆ. ಸಾಕ್ಷಿಯಾಗಿ ಇಲ್ಲಿದೆ ನೋಡಿ ಪ್ರಮಾಣಪತ್ರ ಎಂದು ಟ್ವೀಟ್‌ ಮಾಡಿದ್ದಾರೆ. ಜತೆಗೆ ಇನ್ನೂ ನಿಮಗೆ ನೆನಪಾಗದಿದ್ದರೆ ದಿಲ್ಲಿ ಪರವಾಗಿ ೧೭ ಬಂಗಾರದ ಪದಕ ಗೆದ್ದಿರುವ ಪ್ರಮಾಣಪತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | CWG-2022 | ಮಹಿಳೆಯರ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ದಿವ್ಯಾ ಕಾಕ್ರನ್‌

Exit mobile version