ಮುಂಬಯಿ : ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ (Virat vs Sachin) ನಡುವೆ ಯಾರು ಉತ್ತಮ ಆಟಗಾರ ಎಂಬ ಚರ್ಚೆ ಆರಂಭಗೊಂಡಿದೆ. ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಈ ಚರ್ಚೆಯಲ್ಲಿ ಪಾಲ್ಗೊಂಡು ಸಚಿನ್ ತೆಂಡೂಲ್ಕರ್ ಅವರೇ ಶ್ರೇಷ್ಠ ಆಟಗಾರ ಎಂದು ಹೇಳಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಈ ಚರ್ಚೆ ಬೃಹದಾಕಾರವಾಗಿ ಬೆಳೆದಿತ್ತು.
ಇದೇ ವಿಚಾರದ ಬಗ್ಗೆ ಮಾತನಾಡಿದ ಭಾರತ ತಂದ ಮಾಜಿ ನಾಯಕ ಹಾಗೂ ಬಿಸಿಸಿಐನ ಹಿಂದಿನ ಅಧ್ಯಕ್ಷ ಸೌರವ್ ಗಂಗೂಲಿ ಅವರು, ಚರ್ಚೆಯೇ ಸರಿಯಲ್ಲ ಎಂದು ಹೇಳುವ ಜತೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ರನ್ ಮೆಷಿನ್ ಕೊಹ್ಲಿ 87 ಎಸೆತಗಳಲ್ಲಿ 113 ರನ್ ಬಾರಿಸಿದ್ದರು. ಅದು ಏಕ ದಿನ ಮಾದರಿಯಲ್ಲಿ ಅವರ 45ನೇ ಶತಕ. ಈ ವೇಳೆ ಸಚಿನ್ ತೆಂಡೂಲ್ಕರ್ ತವರಲ್ಲಿ ಬಾರಿಸಿರುವ 20 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದರು. ಹೀಗಾಗಿ ಅವರಿಬ್ಬರ ಶ್ರೇಷ್ಠತೆಯ ಬಗ್ಗ ಚರ್ಚೆ ನಡೆಯುತ್ತಿದೆ.
ಈ ಕುರಿತು ಮಾತನಾಡಲು ಸೌರವ್ ಗಂಗೂಲಿ ನಿರಾಕರಿಸಿದರು. ಅಲ್ಲದೆ, ಅವರಿಬ್ಬರ ನಡುವೆ ತುಲನೆ ಮಾಡುವ ಕ್ರಮವೇ ಸರಿಯಿಲ್ಲ ಎಂದು ಅವರು ಹೇಳಿದರು. ಸಚಿನ್ ತೆಂಡೂಲ್ಕರ್ ಅದ್ಭುತ ಆಟಗಾರ. ಅವರ ಸಾಧನೆಯನ್ನು ಯಾವುದರಲ್ಲೂ ಅಳೆಯುವುದು ಸಾಧ್ಯವಿಲ್ಲ ಎಂಬುದಾಗಿ ಗಂಗೂಲಿ ಹೇಳಿದರು. ಇದೇ ವೇಳೆ ಅವರು ವಿರಾಟ್ ಕೊಹ್ಲಿಯನ್ನೂ ಹೊಗಳಿದರು. ಅವರೊಬ್ಬ ಅಪರೂಪದ ಆಟಗಾರ. ಇಂಥ ಹಲವಾರು ಇನಿಂಗ್ಸ್ಗಳನ್ನು ಆಡಿದ್ದಾರೆ. 45 ಏಕ ದಿನ ಶತಕಗಳು ಸುಲಭವಾಗಿ ಬರುವುದಿಲ್ಲ. ಅವರೊಬ್ಬರ ವಿಶೇಷ ಪ್ರತಿಭೆ. ಅವರು ಚೆನ್ನಾಗಿ ಬ್ಯಾಟ್ ಮಾಡದಿರುವ ಸಮಯವೂ ಇತ್ತು. ಆದರೀಗ ಫಾರ್ಮ್ಗೆ ಮರಳಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | IND VS SL | ಲಂಕಾ ವಿರುದ್ಧ ಶತಕ ಬಾರಿಸಿ ಸಚಿನ್ ದಾಖಲೆ ಮುರಿಯಲಿದ್ದಾರಾ ವಿರಾಟ್ ಕೊಹ್ಲಿ!