ಕ್ಯಾನ್ಬೆರಾ: ಪಾಕಿಸ್ತಾನದ ಮಂದಿಯನ್ನು ಪಾಕಿಗಳು ಎಂದು ಕರೆಯುವುಂಟು. ಆದರೆ, ಇದು ವರ್ಣಭೇದ ನಿಂದನೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಆದರೆ, ಆಸ್ಟ್ರೇಲಿಯಾದ ಕ್ರೀಡಾ ಮಾಧ್ಯವೊಂದು ಮಾಡಿರುವ ಯಡವಟ್ಟಿನಿಂದಾಗಿ ಈ ಸತ್ಯ ಹೊರಕ್ಕೆ ಬಂದಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ಸ್ಕೋರ್ ಬೋರ್ಡ್ ಹಾಕುವ ವೇಳೆ ಪಾಕಿ ಎಂದು ಬರೆಯುವ ಮೂಲಕ ತಪ್ಪುಎಸೆಗಿ ಇದೀಗ ಕ್ಷಮೆ ಕೋರಿದೆ. ಹೀಗಾಗಿ ಪಾಕಿ ಎಂಬುದು ಬೈಗುಳ ಎಂದು ಎಲ್ಲರಿಗೂ ಗೊತ್ತಾಗಿದೆ.
The choice to run with “PAKI” on the Fox ticker over the traditional “PAK” is…quite a choice. pic.twitter.com/FZz4ulYtV0
— Daany Saeed (@daanysaeed) December 5, 2023
ಬ್ರಿಟನ್ ಸೇರಿದಂತೆ ಪಾಶ್ಚಾತ್ಯ ದೇಶಗಳಲ್ಲಿ ಪಾಕಿಸ್ತಾನದ ಮಂದಿಯನ್ನು ಹೀಯಾಳಿಸಲು ಪಾಕಿ ಎಂದು ಕರೆಯಲಾಗುತ್ತದೆ. ಹಿಂದಿನಿಂದಲೂ ಅದೇ ಹೆಸರಿನಿಂದ ನಿಂದನೆ ಮಾಡುತ್ತಿದ್ದರು. ಬಳಿಕ ಆ ಪದ ಬಳಕೆಯನ್ನು ಅವಮಾನ ಎಂಬ ಕಾರಣಕ್ಕೆ ನಿಲ್ಲಿಸಲಾಗಿದೆ. ಆದರೆ ಪಾಕಿಸ್ತಾನ ಪ್ರವಾಸದಲ್ಲಿರುವ ಅಲ್ಲಿನ ಕ್ರಿಕೆಟ್ ತಂಡದ ಸ್ಕೋರ್ ಬೋರ್ಡ್ ಅನ್ನು ಪ್ರಕಟಿಸುವ ವೇಳೆ ಅಲ್ಲಿ ಫಾಕ್ಸ್ ಟಿವಿ ಪಾಕಿ ಎಂದು ಬರೆಯುವ ಮೂಲಕ ತಪ್ಪು ಮಾಡಿದೆ. ಇದೀಗ ಕ್ಷಮೆ ಕೋರಿ ಆಗಿರುವ ಎಡವಟ್ಟನ್ಉ ಸರಿಪಡಿಸುವ ಭರವಸೆ ಕೊಟ್ಟಿದ್ದಾರೆ.
A clarifier on this from CA: “The graphic was an automatic feed from a data provider which had not been used previously for a Pakistan game. This was obviously regrettable, and the error we corrected manually as soon as it came to light.” https://t.co/7FttR2iZTR
— Daany Saeed (@daanysaeed) December 6, 2023
ಪ್ರಧಾನ ಮಂತ್ರಿಗಳ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಪಾಕಿಸ್ತಾನ ತಂಡವನ್ನು ಫಾಕ್ಸ್ ಕ್ರಿಕೆಟ್ ಲೈವ್ ಸ್ಕೋರ್ ಟಿಕ್ಕರ್ನಲ್ಲಿ ‘PAKI’ ಎಂಬ ಜನಾಂಗೀಯ ಪದವನ್ನು ಬಳಸಿತ್ತು. ಮನುಕಾ ಓವಲ್ನಲ್ಲಿ ನಡೆದ ನಾಲ್ಕು ದಿನಗಳ ಪಂದ್ಯದ ಆರಂಭಿಕ ದಿನದಂದು ಈ ಪ್ರಮಾದವನ್ನು ಗಮನಿಸಲಾಯಿತು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಯಿತು.
ಆಸ್ಟ್ರೇಲಿಯಾದ ಪತ್ರಕರ್ತರೊಬ್ಬರು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಅದರ ನಂತರ ತಪ್ಪನ್ನು ಸರಿಪಡಿಸಲಾಯಿತು ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಕ್ಷಮೆಯಾಚಿಸಿತು.
“ಗ್ರಾಫಿಕ್ ಡೇಟಾ ಪೂರೈಕೆದಾರರಿಂದ ಬಂದಿರುವ ಸ್ವಯಂಚಾಲಿತ ಫೀಡ್ ಅದಯ ಆಗಿದ್ದು, ಇದನ್ನು ಈ ಹಿಂದೆ ಪಾಕಿಸ್ತಾನ ಪಂದ್ಯಕ್ಕೆ ಬಳಸಲಾಗಿಲ್ಲ. ಇದು ನಿಸ್ಸಂಶಯವಾಗಿ ವಿಷಾದನೀಯ, ಮತ್ತು ತಪ್ಪು ಬೆಳಕಿಗೆ ಬಂದ ಕೂಡಲೇ ನಾವು ಅದನ್ನು ಸರಿಪಡಿಸಿದ್ದೇವೆ” ಎಂದು ಟಿವಿ ಕ್ಷಮೆ ಕೋರಿದೆ.
ಟೆಸ್ಟ್ ಸರಣಿಗೆ ಪಾಕಿಸ್ತಾನ ಸಿದ್ದತೆ
ಶಾನ್ ಮಸೂದ್ ನೇತೃತ್ವದ ಪಾಕಿಸ್ತಾನ ತಂಡವು ಡಿಸೆಂಬರ್ 14 ರಿಂದ ಪರ್ತ್ನಲ್ಲಿ ಪ್ರಾರಂಭವಾಗುವ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ತಮ್ಮ ಸಿದ್ಧತೆಗಳನ್ನು ಉತ್ತಮಗೊಳಿಸುವ ಸಲುವಾಗಿ ಸಂದರ್ಶಕರು ನಾಲ್ಕು ದಿನಗಳ ಪಂದ್ಯದಲ್ಲಿ ಪ್ರಧಾನ ಮಂತ್ರಿಗಳ ಇಲೆವೆನ್ ತಂಡವನ್ನು ಎದುರಿಸುತ್ತಿದ್ದಾರೆ. ನಾಯಕ ಮಸೂದ್ ಅವರ ದ್ವಿಶತಕದ ಬಲದಿಂದ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 391 ರನ್ ಗಳಿಸಿತ್ತು. ಎರಡನೇ ದಿನದಾಟದ ಅಂತ್ಯಕ್ಕೆ ಪ್ರಧಾನ ಮಂತ್ರಿಗಳ ಇಲೆವೆನ್ 2 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದ್ದು ಪ್ರವಾಸಿ ತಂಡಕ್ಕಿಂತ 242 ರನ್ಗಳ ಹಿನ್ನಡೆಯಲ್ಲಿದೆ.