Site icon Vistara News

Copa America Final: ದಾಖಲೆಯ ಕೊಪಾ ಅಮೆರಿಕ ಪ್ರಶಸ್ತಿ ಗೆದ್ದ ಅರ್ಜೆಂಟೀನಾ

Copa America Final

Copa America Final:Argentina Beat Colombia 1-0, Clinch Back-To-Back Titles

ಫ್ಲೋರಿಡಾ: ಇಂದು (ಸೋಮವಾರ) ಬೆಳಗ್ಗೆ ನಡೆದ ಕೊಪಾ ಅಮೆರಿಕ(Copa America Final) ಫುಟ್‌ಬಾಲ್‌ ಪ್ರಶಸ್ತಿ ಸುತ್ತಿನ ಕದನದಲ್ಲಿ ಹಾಲಿ ಚಾಂಪಿಯನ್ಸ್‌ ಅರ್ಜೆಂಟೀನಾ ತಂಡ ಕೊಲಂಬಿಯ(Argentina vs Colombia) ವಿರುದ್ಧ 1-0 ಗೋಲುಗಳ ಅಂತರದಿಂದ ಗೆದ್ದು ಚಾಂಪಿಯನ್​ ಪಟ್ಟವನ್ನು ಉಳಿಸಿಕೊಂಡಿದೆ. ಜತೆಗೆ ಲಿಯೊನೆಲ್‌ ಮೆಸ್ಸಿ ಬಳಗವು ದಾಖಲೆಯ 16ನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು. ಇದಕ್ಕೂ ಮುನ್ನ ಉರುಗ್ವೆ ತಂಡದೊಂದಿಗೆ (15 ಪ್ರಶಸ್ತಿ) ಗರಿಷ್ಠ ಪ್ರಶಸ್ತಿ ಗೆದ್ದ ದಾಖಲೆಯನ್ನು ಹಂಚಿಕೊಂಡಿತ್ತು. ಇದೀಗ ಉರುಗ್ವೆ ದಾಖಲೆಯನ್ನು ಹಿಂದಿಕ್ಕಿದೆ.

ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್‌ ಮೆಸ್ಸಿ(Lionel Messi) ಅವರು ಪಂದ್ಯದ ವೇಳೆ ಗಾಯಗೊಂಡು ಪೂರ್ಣವಾಧಿ ಮುಗಿಯುವ ಮುನ್ನವೇ ಮೈದಾನ ತೊರೆದರೂ ಕೂಡ ಕೊಲಂಬಿಯಾಗೆ ಇದರ ಲಾಭವೆತ್ತಲು ಸಾಧ್ಯವಾಗಲಿಲ್ಲ. ನಾಯಕ ಗಾಯದಿಂದ ಹೊರಗುಳಿದರೂ ಕೂಡ ಅರ್ಜೆಂಟೀನಾ ಆಟಗಾರರು ಯಾವುದೇ ಒತ್ತಡ ಮತ್ತು ವಿಚಲಿತರಾಗದೆ ಆಡುವ ಮೂಲಕ ಪಂದ್ಯವನ್ನು ಗೆದ್ದು ಬೀಗಿದರು. ಈ ಗೆಲುವಿನೊಂದಿಗೆ ಅರ್ಜೆಂಟೀನಾ ತಂಡ ಸತತ ಮೂರು ಪ್ರಶಸ್ತಿ ಗೆದ್ದ ದಾಖಲೆ ನಿರ್ಮಿಸಿತು.

ಪ್ರಮುಖ ಪಂದ್ಯದಲ್ಲಿ ಗಾಯಗೊಂಡು ಆಟಲು ಸಾಧ್ಯವಾಗದ ಬೇಸರದಲ್ಲಿ ಮೆಸ್ಸಿ ಡಗೌಟ್​ನಲ್ಲಿ ಕುಳಿತು ಸಣ್ಣ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತರು. ತಂಡದ ಸಹ ಆಟಗಾರರು, ಕೋಚ್​ ಎಷ್ಟೇ ಸಂತೈಸಿದರೂ ಕೂಡ ಮೆಸ್ಸಿಯ ಅಳು ನಿಲ್ಲುವಂತೆ ಕಾಣುತ್ತಿರಲಿಲ್ಲ. ಈ ವಿಡಿಯೊ ವೈರಲ್​ ಆಗಿದೆ.

ಎರಡನೇ ಹೆಚ್ಚುವರಿ ಅವಧಿಯಲ್ಲಿ ಅರ್ಜೆಂಟೀನಾ ತಂಡದ ಲೌಟಾರೊ ಮಾರ್ಟಿನೆಜ್‌ ಅವರು ಗೋಲು ಬಾರಿಸಿದರು. ಈ ಬಳಿಕ ಇತ್ತಂಡಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಮಾರ್ಟಿನೆಜ್‌ ಅವರ ಏಕೈಕ ಗೋಲು ಅರ್ಜೆಂಟೀನಾಗೆ ಪ್ರಶಸ್ತಿ ಗೆಲ್ಲಿಸಿಕೊಟ್ಟಿತು. 23 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ಇರಾದೆಯೊಂದಿಗೆ ಆಡಲಿಳಿದಿದ್ದ ಕೊಲಂಬಿಯಾಗೆ ನಿರಾಸೆಯಾಯಿತು.

ಇದನ್ನೂ ಓದಿ ಹಾಲಿ ಚಾಂಪಿಯನ್​ ಬ್ರೆಝಿಲ್​ಗೆ ಸೋಲುಣಿಸಿ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಅರ್ಜೆಂಟೀನಾ

4ನೇ ಬಾರಿಗೆ ಯುರೋ ಕಪ್ ಗೆದ್ದ ಸ್ಪೇನ್​


ಬರ್ಲಿನ್: ಫುಟ್ಬಾಲ್​ ಅಭಿಮಾನಿಗಳ ನಿರೀಕ್ಷೆಯಂತೆ ಈ ಬಾರಿಯ ಪ್ರತಿಷ್ಠಿತ ಯುರೋ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ(Euro 2024 final) ಸ್ಪೇನ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾನುವಾರ ತಡರಾತ್ರಿ ನಡೆದ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್(England vs Spain) ತಂಡವನ್ನು 2-1 ಗೋಲುಗಳಿಂದ ಮಣಿಸಿ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಫೈನಲ್​ ಪಂದ್ಯದಲ್ಲಿ ಮೊದಲಾರ್ಥದ ಆಟದ ಅವಧಿಯಲ್ಲಿ ಇತ್ತಂಡಗಳಿಂದಲೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಆದರೆ, 47ನೇ ನಿಮಿಷದಲ್ಲಿ ಸ್ಪೇನ್​ ಮೊದಲ ಯಶಸ್ಸು ಪಡೆಯಿತು. ಮೊರಾಟಾ ನೀಡಿದ ಅತ್ಯುತ್ತಮ ಪಾಸ್ ಅನ್ನು ನಿಕೋ ವಿಲಿಯಮ್ಸ್ ಗೋಲಾಗಿ ಪರಿವರ್ತಿಸಿದರು. ಇದಾದ ಬಳಿಕ 73ನೇ ನಿಮಿಷದಲ್ಲಿ ಇಂಗ್ಲೆಂಡ್​ ಆಟಗಾರ ಕೋಲ್ ಪಾಲ್ಮರ್ ಗೋಲು ಬಾರಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು.

1936ರ ನಿರ್ಮಿಸಲ್ಪಟ್ಟ ಒಲಿಂಪಿಯಾ ಸ್ಟೇಡಿಯಂನಲ್ಲಿ ನಡೆದ ಉಭಯ ತಂಡಗಳ ಪ್ರಶಸ್ತಿ ಕಾದಾಟದಲ್ಲಿ ಸ್ಪೇನ್​ ಕೈ ಮೇಲಾಗಿದೆ. 1966ರ ಬಳಿಕ ಪ್ರಮುಖ ಟ್ರೋಫಿ ಜಯಿಸಲು ವಿಫಲವಾಗಿರುವ ಇಂಗ್ಲೆಂಡ್ ಈ ಬಾರಿಯೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಕಳೆದ ಬಾರಿಯೂ ಫೈನಲ್​ನಲ್ಲಿ ಮುಗ್ಗರಿಸಿ ರನ್ನರ್​ ಅಪ್​ ಪ್ರಶಸ್ತಿಗೆ ತೃಪ್ತಿಪಟ್ಟಿತ್ತು.

Exit mobile version