Site icon Vistara News

T20 World Cup | ಆಟಗಾರರಿಗೆ ಕೊರೊನಾ ಸೋಂಕು ಇದ್ದರೂ ವಿಶ್ವ ಕಪ್‌ ಆಡಬಹುದು; ಹೇಗೆ ಸಾಧ್ಯ?

icc world cup

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವ ಕಪ್‌ (T20 World Cup)ಗೆ ಮುಂಚಿತವಾಗಿ, ಕೋವಿಡ್-19 ನಿಯಮಗಳನ್ನು ಇಂಟರ್‌ನ್ಯಾಶನಲ್ ಕ್ರಿಕೆಟ್ ಕೌನ್ಸಿಲ್ (ICC) ಸಡಿಲಿಸಿದ್ದು, ಪಾಸಿಟಿವ್ ಬಂದಿರುವ ಆಟಗಾರರಿಗೂ ಕೂಡ ಪಂದ್ಯ ಆಡಲು ಅನುಮತಿ ನೀಡಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಪಂದ್ಯದ ವೇಳೆ ಯಾವುದೇ ಕಡ್ಡಾಯ ಪರೀಕ್ಷೆ ಇರುವುದಿಲ್ಲ ಮತ್ತು ಆಟಗಾರರು ಕೋವಿಡ್ ಸೋಂಕಿಗೆ ತುತ್ತಾದರೆ ಐಸೋಲೇ‍ಷನ್‌ನಲ್ಲಿ ಇರುವಂತೆ ನಿಯಮ ಇರುವುದಿಲ್ಲ ಎಂದು ಐಸಿಸಿ ತಿಳಿಸಿರುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಡಾಟ್​ ಕಾಮ್ ವರದಿ ಮಾಡಿದೆ.

ಐಸಿಸಿ ಸಡಿಲಿಸಿದ ನಿಯಮದನ್ವಯ ಆಟಗಾರರು ಕೋವಿಡ್-19 ಸೋಂಕಿಗೆ ತುತ್ತಾದರೆ, ಅವರು ಆಡುವ ಕುರಿತು ತಂಡದ ವೈದ್ಯರು ನಿರ್ಧಾರ ಕೈಗೊಳ್ಳಲಿದ್ದಾರೆ. ಇನ್ನು 2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇದೇ ರೀತಿಯ ನಿಲುವನ್ನು ಅಳವಡಿಸಿಕೊಳ್ಳಲಾಗಿತ್ತು. ಅದರಂತೆ ಫೈನಲ್​ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ಮಹಿಳಾ ತಂಡದ ಬ್ಯಾಟರ್​ ಮೆಕ್​ಗ್ರಾತ್​ಗೆ ಕೋವಿಡ್-19 ಸೋಂಕು ಕಂಡುಬಂದಿತ್ತು. ಆದರೂ, ಆಕೆಗೆ ಆಡಲು ಅನುಮತಿ ನೀಡಲಾಯಿತು. ಮೆಕ್‌ಗ್ರಾತ್ ಮೈದಾನದ ಹೊರಗೆ ಇರುವಾಗ ಮಾಸ್ಕ್‌ ಧರಿಸಿದ್ದರು. ಬ್ಯಾಟಿಂಗ್ ಮಾಡುವಾಗ ಸಹ ಆಟಗಾರರಿಂದ ದೂರ ಕುಳಿತುಕೊಂಡರು. ಬಳಿಕ ಆಸ್ಟ್ರೇಲಿಯಾದ ಸಂಭ್ರಮಾಚರಣೆಯಲ್ಲಿಯೂ ಅವರು ಪಾಲ್ಗೊಂಡಿದ್ದರು. ಇದೀಗ ಈ ನಿಯಮ ಪುರುಷರ ಐಸಿಸಿ ಟಿ20 ವಿಶ್ವ ಕಪ್​ನಲ್ಲಿಯೂ ಜಾರಿಗೆ ಬರಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ | T20 World Cup | ಟಿ20 ವಿಶ್ವ ಕಪ್​ ಇತಿಹಾಸದ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ

Exit mobile version