ಇಸ್ಲಾಮಾಬಾದ್: ಪಿಸಿಬಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ 2020ರಲ್ಲಿ ಅಮಾನತುಗೊಂಡ ನಂತರ ಪಾಕಿಸ್ತಾನದ ಹಿರಿಯ ಬ್ಯಾಟರ್ (Pakistan Cricket) ಉಮ್ರಾನ್ ಅಕ್ಮಲ್ ಸಾಕಷ್ಟು ಕಷ್ಟಪಟ್ಟಿದ್ದರಂತೆ. ಅವರು ಆ ವಿಷಯವನ್ನು ಇದೀಗ ನೆನಪಿಸಿಕೊಂಡಿದ್ದಾರೆ. ಇದು ತನಗೆ ಮತ್ತು ಕುಟುಂಬ ಸದಸ್ಯರಿಗೆ ತುಂಬಾ ಕಷ್ಟದ ಸಮಯವಾಗಿತ್ತು ಎಂದು ಅಕ್ಮಲ್ ಹೇಳಿದ್ದಾರೆ. ತನ್ನ ಮಗಳ ಶಾಲಾ ಫೀಸ್ ಕಟ್ಟುವುದಕ್ಕೂ ನನ್ನ ಬಳಿ ದುಡ್ಡು ಇರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಅಕ್ಮಲ್ 2019 ರಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಈಗಲೂ ಅವರು ರಾಷ್ಟ್ರೀಯ ತಂಡಕ್ಕೆ ಮರಳುವ ಭರವಸೆ ಹೊಂದಿದ್ದಾರೆ.
ನಾನು ಎದುರಿಸಿದ ಕೆಟ್ಟ ಸಮಯವನ್ನು ಯಾರೂ ಎದುರಿಸಬಾರದು. ನನ್ನ ಶತ್ರುಗಳು ಸಹ ಎದುರಿಸಬೇಕಾಗಿಲ್ಲ. ಅಲ್ಲಾಹನು ಒಬ್ಬ ವ್ಯಕ್ತಿಯನ್ನು ಪರೀಕ್ಷಿಸುತ್ತಾನೆ. ಆದಾಗ್ಯೂ, ನಾನು ಕೆಟ್ಟ ಹಂತವನ್ನು ಎದುರಿಸುತ್ತಿದ್ದಾಗ, ಬಹಳಷ್ಟು ಜನರು ತಮ್ಮ ನಿಜವಾದ ಬಣ್ಣವನ್ನು ಬಹಿರಂಗಪಡಿಸಿದರು. ನನ್ನ ಪರವಾಗಿ ನಿಲ್ಲಲಿಲ್ಲ. ಆದರೆ ಇನ್ನೂ ನನ್ನ ಪಕ್ಕದಲ್ಲಿ ನಿಂತಿರುವವರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಅಕ್ಮಲ್ ಜಿಯೊ ನ್ಯೂಸ್ಗೆ ತಿಳಿಸಿದ್ದಾರೆ.
ನಾನು ನನ್ನ ಮಗಳನ್ನು ಎಂಟು ತಿಂಗಳವರೆಗೆ ಶಾಲೆಗೆ ಕಳುಹಿಸಲು ಸಾಧ್ಯವಾಗಲಿಲ್ಲ. ಆ ಕಠಿಣ ದಿನಗಳಲ್ಲಿ ನನ್ನ ಹೆಂಡತಿ ನನ್ನನ್ನು ನಿರಾಸೆಗೊಳಿಸಲಿಲ್ಲ ಎಂದು ಅವರು ನೆನಪಿಸಿಕೊಂಡರು. ಆ ದಿನಗಳ ಬಗ್ಗೆ ಯೋಚಿಸಿದಾಗಲೆಲ್ಲಾ ಪತ್ನಿಯ ಕಣ್ಣುಗಳಲ್ಲಿ ನೀರು ಬರುತ್ತದೆ. “ನನ್ನ ಹೆಂಡತಿ ಚಿನ್ನದ ಚಮಚ ಬಾಯಲಿಟ್ಟುಕೊಂಡು ಜನಿಸಿದವಳು. ಆದರೆ ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ಅವಳು ಯಾವಾಗಲೂ ನನ್ನ ಬೆಂಬಲಕ್ಕೆ ನಿಂತಳು. ಅದಕ್ಕಾಗಿ ನಾನು ಅವಳಿಗೆ ಕೃತಜ್ಞನಾಗಿದ್ದೇನೆ ಎಂದು ಅಕ್ಮಲ್ ಹೇಳಿದ್ದಾರೆ.
ಇದನ್ನೂ ಓದಿ : Kamaran Akmal : ಪಾಕಿಸ್ತಾನ ತಂಡದ ಮಾಜಿ ವಿಕೆಟ್ಕೀಪರ್ ಕಮ್ರಾನ್ ಅಕ್ಮಲ್ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ
ವಿಕೆಟ್ ಕೀಪರ್-ಬ್ಯಾಟರ್ 2019ರಲ್ಲಿ ಕೊನೆಯ ಬಾರಿಗೆ ಅಂತಾರರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಆದಾಗ್ಯೂ, 33 ವರ್ಷದ ಅಕ್ಮಲ್ ಕಠಿಣ ಪರಿಶ್ರಮದಿಂದ ಫಲಿತಾಂಶಗಳನ್ನು ನೀಡುವ ಭರವಸೆ ಹೊಂದಿದ್ದಾರೆ. ಅಲ್ಲದೆ, ದೇಶಕ್ಕಾಗಿ ಆಡುವ ಉತ್ಸಾಹವನ್ನು ತೋರಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಪಿಸಿಬಿ 2020ರಲ್ಲಿ ಅಮಾನತುಗೊಳಿಸಿತು.
ಅಕ್ಮಲ್ 3 ವರ್ಷಗಳ ನಿಷೇಧದ ಅವಧಿಯನ್ನು ಎದುರಿಸಬೇಕಾಯಿತು. ಆದಾಗ್ಯೂ, ಅವರು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಇದರ ಪರಿಣಾಮವಾಗಿ ಅವರ ನಿಷೇಧವನ್ನು ಮೂರು ವರ್ಷದಿಂದ ಕೇವಲ 12 ತಿಂಗಳಿಗೆ ಇಳಿಸಲಾಯಿತು. ಅನುಭವಿ ಬ್ಯಾಟರ್ ಕಳೆದ ಪಿಎಸ್ಎಲ್ ಆವೃತ್ತಿಯಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಕೆಲವು ಉತ್ತಮವಾಗಿ ಆಡಿದ್ದರು.